ನಾಲ್ಕನೇ ಬಾರಿ ಬ್ರೆಜಿಲ್ ಅಧ್ಯಕ್ಷರಾಗಿ ಲೂಯಿಜ್ ಇನಾಸಿಯೊ ಲೂಲಾ ಡ ಸಿಲ್ವಾ ಆಯ್ಕೆ
ಬ್ರೆಸಿಲಿಯಾ(ಬ್ರೆಜಿಲ್),26 ಅಕ್ಟೋಬರ್ (ಹಿ.ಸ): ಬ್ರೆಜಿಲ್‌ನ ಹಾಲಿ ಅಧ್ಯಕ್ಷ, ಎಡಪಂಥೀಯ ನಾಯಕ ಲೂಯಿಜ್ ಇನಾಸಿಯೊ ಲೂಲಾ ಡ ಸಿಲ್ವಾ ಅವರು ಮತ್ತೊಮ್ಮೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ನಾಲ್ಕನೇ ಬಾರಿ ದೇಶದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತರೆಂದ
ब्राजील के साओ बर्नार्डो डो कैम्पो में रविवार को राष्ट्रपति चुनाव के दूसरे दौर (रनऑफ) में मतदान करने के बाद राष्ट्रपति लुइज इनासियो लूला डा सिल्वा  मतदान केंद्र से बाहर निकलते हुए। फोटो - इंटरनेट मीडिया


ब्राजील के साओ पाउलो में बैंड के स्टूडियो में लूला (दाएं) और फ्लेवियो बोल्सोनारो। दोनों के बीच 18 अक्टूबर को प्रेसिडेंशियल डिबेट हुई। फोटो - इंटरनेट मीडिया


ಬ್ರೆಸಿಲಿಯಾ(ಬ್ರೆಜಿಲ್),26 ಅಕ್ಟೋಬರ್ (ಹಿ.ಸ):

ಬ್ರೆಜಿಲ್‌ನ ಹಾಲಿ ಅಧ್ಯಕ್ಷ, ಎಡಪಂಥೀಯ ನಾಯಕ ಲೂಯಿಜ್ ಇನಾಸಿಯೊ ಲೂಲಾ ಡ ಸಿಲ್ವಾ ಅವರು ಮತ್ತೊಮ್ಮೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ನಾಲ್ಕನೇ ಬಾರಿ ದೇಶದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತರೆಂದು ಗುರುತಿಸಿಕೊಂಡಿರುವ ಫ್ಲಾವಿಯೊ ಬೊಲ್ಸೊನಾರೊ ಅವರನ್ನು ತೀವ್ರ ಪೈಪೋಟಿಯ ಚುನಾವಣೆಯಲ್ಲಿ ಸೋಲಿಸುವ ಮೂಲಕ ಲೂಲಾ ಅಧಿಕಾರವನ್ನು ಉಳಿಸಿಕೊಂಡಿದ್ದಾರೆ.

ಬ್ರೆಜಿಲ್‌ನ ಪ್ರಮುಖ ಪತ್ರಿಕೆ ಫೋಲ್ಹಾ ದೆ ಸಾವೊ ಪೌಲೊ ಮತ್ತು ಸಿಎನ್‌ಎನ್ ವರದಿಗಳ ಪ್ರಕಾರ, ಶೇ. 99.77ರಷ್ಟು ಮತಗಳ ಎಣಿಕೆ ಪೂರ್ಣಗೊಂಡಾಗ ಎರಡನೇ ಸುತ್ತಿನಲ್ಲಿ ಲೂಲಾ ಶೇ. 51.76ರಷ್ಟು ಮಾನ್ಯ ಮತಗಳನ್ನು ಪಡೆದರೆ, ಫ್ಲಾವಿಯೊ ಬೊಲ್ಸೊನಾರೊ ಶೇ. 48.24ರಷ್ಟು ಮತಗಳನ್ನು ಗಳಿಸಿದ್ದಾರೆ.

ಎಂಭತ್ತು ವರ್ಷದ ಲೂಲಾ ಅವರು ಈ ಹಿಂದೆ ಕಾರ್ಖಾನೆಯೊಂದರಲ್ಲಿ ಕಾರ್ಮಿಕರಾಗಿ ಕೆಲಸ ಮಾಡಿದ್ದರು. ಕಾರ್ಮಿಕ ನಾಯಕನಾಗಿ 1970ರ ದಶಕದಲ್ಲಿ ರಾಜಕೀಯ ಜೀವನ ಆರಂಭಿಸಿದ ಅವರು, ಬಳಿಕ ಕಾರ್ಮಿಕರ ಪಕ್ಷದ ಸ್ಥಾಪನೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. 2003ರಿಂದ 2010ರವರೆಗೆ ಮೊದಲ ಬಾರಿಗೆ ಬ್ರೆಜಿಲ್‌ನ ಅಧ್ಯಕ್ಷರಾಗಿ ಆಡಳಿತ ನಡೆಸಿದ್ದರು. ಪ್ರಸಕ್ತ ಅವಧಿ ಪೂರ್ಣಗೊಳ್ಳುವ ವೇಳೆಗೆ ಒಟ್ಟು 16 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ದಾಖಲೆಯನ್ನು ಅವರು ನಿರ್ಮಿಸಲಿದ್ದಾರೆ.

ಹಣದುಬ್ಬರ, ಅಪರಾಧ ಪ್ರಕರಣಗಳು ಮತ್ತು ಭ್ರಷ್ಟಾಚಾರದ ಆರೋಪಗಳು ಈ ಬಾರಿಯ ಚುನಾವಣಾ ಪ್ರಚಾರದಲ್ಲಿ ಪ್ರಮುಖ ವಿಷಯಗಳಾಗಿದ್ದವು. ಮೊದಲ ಸುತ್ತಿನ ಮತದಾನದಲ್ಲಿ ಲೂಲಾ ಮತ್ತು ಫ್ಲಾವಿಯೊ ಬೊಲ್ಸೊನಾರೊ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ನಂತರ ಭಾನುವಾರ ನಡೆದ ಎರಡನೇ ಸುತ್ತಿನ ನೇರ ಹಣಾಹಣಿಯಲ್ಲಿ ಲೂಲಾ ಜಯಗಳಿಸಿದ್ದಾರೆ.

ಸಿಎನ್‌ಎನ್ ವರದಿಯ ಪ್ರಕಾರ, 1989ರಲ್ಲಿ ಬ್ರೆಜಿಲ್‌ನಲ್ಲಿ ನೇರ ಅಧ್ಯಕ್ಷೀಯ ಚುನಾವಣೆಗಳು ಪುನರಾರಂಭವಾದ ಬಳಿಕ, ಮೊದಲ ಸುತ್ತಿನಲ್ಲಿ ಎರಡನೇ ಸ್ಥಾನ ಪಡೆದ ಅಭ್ಯರ್ಥಿಯೊಬ್ಬರು ಅಂತಿಮವಾಗಿ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿರುವುದು ಇದೇ ಮೊದಲು ಎಂದು ವಿಶ್ಲೇಷಿಸಲಾಗಿದೆ.

ಫ್ಲಾವಿಯೊ ಬೊಲ್ಸೊನಾರೊ ಅವರು ಚುನಾವಣಾ ಪ್ರಚಾರದಲ್ಲಿ ಅಪರಾಧಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆಹಾರ ಪದಾರ್ಥಗಳ ಬೆಲೆ ಇಳಿಸುವುದಾಗಿಯೂ ಹೇಳಿದ್ದರು. ಉಭಯ ಅಭ್ಯರ್ಥಿಗಳ ಕುಟುಂಬ ಸದಸ್ಯರು ಮತ್ತು ಆಪ್ತರ ವಿರುದ್ಧವೂ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿದ್ದವು. ಈ ಹಿಂದೆ ಭ್ರಷ್ಟಾಚಾರ ಪ್ರಕರಣಗಳಲ್ಲಿ ದೋಷಿ ಎಂದು ತೀರ್ಪು ಬಂದ ಹಿನ್ನೆಲೆಯಲ್ಲಿ ಲೂಲಾ ಒಂದು ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದಿದ್ದರು. ಆದರೆ, ನಂತರ ಆ ದೋಷಾರೋಪದ ತೀರ್ಪುಗಳನ್ನು ರದ್ದುಗೊಳಿಸಲಾಗಿತ್ತು.

ಲೂಲಾ ಅವರ ಗೆಲುವು ಬ್ರೆಜಿಲ್‌ನ ಆಂತರಿಕ ರಾಜಕೀಯದ ಜೊತೆಗೆ ಅಂತರರಾಷ್ಟ್ರೀಯ ಸಂಬಂಧಗಳ ಮೇಲೂ ಪರಿಣಾಮ ಬೀರಬಹುದು ಎಂದು ಸಿಎನ್‌ಎನ್ ವಿಶ್ಲೇಷಿಸಿದೆ. ಲೂಲಾ ಅವರು ಬ್ರೆಜಿಲ್‌ನ ಸಾರ್ವಭೌಮತ್ವಕ್ಕೆ ಆದ್ಯತೆ ನೀಡುವುದರ ಜೊತೆಗೆ ಅಭಿವೃದ್ಧಿಶೀಲ ರಾಷ್ಟ್ರಗಳ ಒಕ್ಕೂಟ ಮತ್ತು ಚೀನಾದೊಂದಿಗೆ ನಿಕಟ ಸಂಬಂಧ ಬೆಳೆಸುವ ನಿಲುವನ್ನು ಪ್ರತಿಪಾದಿಸಿದ್ದಾರೆ. ಅವರ ನಾಯಕತ್ವದಲ್ಲಿ ಲ್ಯಾಟಿನ್ ಅಮೆರಿಕದ ಅತಿದೊಡ್ಡ ರಾಷ್ಟ್ರ ಬ್ರೆಜಿಲ್ ಹೆಚ್ಚು ಸ್ವತಂತ್ರ ವಿದೇಶಾಂಗ ನೀತಿಯನ್ನು ಅನುಸರಿಸುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.

ಈ ಗೆಲುವಿನೊಂದಿಗೆ ಫ್ಲಾವಿಯೊ ಬೊಲ್ಸೊನಾರೊ ಅವರ ರಾಜಕೀಯ ಚಳವಳಿಗೆ ಹಿನ್ನಡೆಯಾಗಿದೆ. ಅವರ ತಂದೆ, ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಜೈರ್ ಬೊಲ್ಸೊನಾರೊ ಅವರು 2022ರ ಚುನಾವಣೆಯಲ್ಲಿ ಲೂಲಾ ಅವರನ್ನು ಸೋಲಿಸಲು ವಿಫಲರಾಗಿದ್ದರು. ಇದೀಗ ಅವರ ಪುತ್ರನಿಗೂ ಅದೇ ಫಲಿತಾಂಶ ಎದುರಾಗಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande