ವಿದ್ಯಾರ್ಥಿಗಳು ಇಷ್ಟಪಟ್ಟು ಓದುವ ಮೂಲಕ ಸಾಧನೆ ಮಾಡಬೇಕು ; ಡಾ. ಗಿರೀಶ್ ರಾಮಣ್ಣ
ಬಳ್ಳಾರಿ, 24 ಅಕ್ಟೋಬರ್ (ಹಿ.ಸ.) ಸಾಧನೆ ಮಾಡಲು ವಿದ್ಯಾರ್ಥಿಗಳು ಕಷ್ಟಪಟ್ಟು ಓದುವ ಬದಲು ಓದುವ ಗೀಳನ್ನು ಹೊಂದಿರಬೇಕು ಎಂದು ಉದ್ಯಮಿ, ತಂತ್ರಜ್ಞಾನದ ರೂವಾರಿ ಗಿರೀಶ್ ರಾಮಣ್ಣ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೌಂಟ್ ವ್ಯೂವ್ನಲ್ಲಿ ಶನಿವಾರ ನಡೆದ ಕಿಷ್ಕಿಂಧ ವಿಶ್ವವಿದ್ಯಾಲಯದ ಎರಡನೇ ಘಟಿಕೋತ್
ವಿದ್ಯಾರ್ಥಿಗಳು ಇಷ್ಟಪಟ್ಟು ಓದುವ ಮೂಲಕ ಸಾಧನೆ ಮಾಡಬೇಕು ; ಡಾ. ಗಿರೀಶ್ ರಾಮಣ್ಣ


ವಿದ್ಯಾರ್ಥಿಗಳು ಇಷ್ಟಪಟ್ಟು ಓದುವ ಮೂಲಕ ಸಾಧನೆ ಮಾಡಬೇಕು ; ಡಾ. ಗಿರೀಶ್ ರಾಮಣ್ಣ


ವಿದ್ಯಾರ್ಥಿಗಳು ಇಷ್ಟಪಟ್ಟು ಓದುವ ಮೂಲಕ ಸಾಧನೆ ಮಾಡಬೇಕು ; ಡಾ. ಗಿರೀಶ್ ರಾಮಣ್ಣ


ವಿದ್ಯಾರ್ಥಿಗಳು ಇಷ್ಟಪಟ್ಟು ಓದುವ ಮೂಲಕ ಸಾಧನೆ ಮಾಡಬೇಕು ; ಡಾ. ಗಿರೀಶ್ ರಾಮಣ್ಣ


ವಿದ್ಯಾರ್ಥಿಗಳು ಇಷ್ಟಪಟ್ಟು ಓದುವ ಮೂಲಕ ಸಾಧನೆ ಮಾಡಬೇಕು ; ಡಾ. ಗಿರೀಶ್ ರಾಮಣ್ಣ


ವಿದ್ಯಾರ್ಥಿಗಳು ಇಷ್ಟಪಟ್ಟು ಓದುವ ಮೂಲಕ ಸಾಧನೆ ಮಾಡಬೇಕು ; ಡಾ. ಗಿರೀಶ್ ರಾಮಣ್ಣ


ಬಳ್ಳಾರಿ, 24 ಅಕ್ಟೋಬರ್ (ಹಿ.ಸ.)

ಸಾಧನೆ ಮಾಡಲು ವಿದ್ಯಾರ್ಥಿಗಳು ಕಷ್ಟಪಟ್ಟು ಓದುವ ಬದಲು ಓದುವ ಗೀಳನ್ನು ಹೊಂದಿರಬೇಕು ಎಂದು ಉದ್ಯಮಿ, ತಂತ್ರಜ್ಞಾನದ ರೂವಾರಿ ಗಿರೀಶ್ ರಾಮಣ್ಣ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೌಂಟ್ ವ್ಯೂವ್ನಲ್ಲಿ ಶನಿವಾರ ನಡೆದ ಕಿಷ್ಕಿಂಧ ವಿಶ್ವವಿದ್ಯಾಲಯದ ಎರಡನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಸ್ವೀಕರಿಸಿ ಮಾತನಾಡಿದ ಅವರು, ಉದ್ಯೋಗಕ್ಕಾಗಿ ಓದುವ ಬದಲು ಸಾಧನೆ ಮಾಡಲಿಕ್ಕಾಗಿ, ಏನನ್ನಾದರೂ ಸಾಧಿಸಲಿಕ್ಕಾಗಿ ಓದಬೇಕು. ಚೆನ್ನಾಗಿ ಓದಿ ಕೌಶಲ್ಯಗಳನ್ನು ಕಲಿಯುವ ಮೂಲಕ ವಿಶೇಷವಾದುದ್ದನ್ನು ಸಾಧಿಸಲಿಕ್ಕಾಗಿ ವಿದ್ಯಾರ್ಥಿ ಜೀವನದಲ್ಲಿ ಶ್ರಮಿಸಬೇಕಿದೆ ಎಂದರು.

ಶಿಕ್ಷಣದ ಮೂಲಕ ವ್ಯಕ್ತಿಗತವಾಗಿ, ಕೌಟುಂಬಿಕವಾಗಿ, ಸಾಮಾಜಿಕವಾಗಿ ಸಾಕಷ್ಟು ಬದಲಾವಣೆಗಳನ್ನು ತರಬಹುದಾಗಿದೆ. ಮಕ್ಕಳ ಶಿಕ್ಷಣಕ್ಕಾಗಿ ತಂದೆ - ತಾಯಿ ಮಾಡುವ ತ್ಯಾಗ, ಎದುರಿಸುವ ಸವಾಲುಗಳು, ಅನುಭವಿಸುವ ಕಷ್ಟಗಳು ಶ್ಲಾಘನೀಯ. ವಿದ್ಯಾರ್ಥಿಗಳು ಎಂದಿಗೂ ತಂದೆ-ತಾಯಿಯನ್ನು ಮರೆಯಬಾರದು ಎಂದರು.

ಉತ್ತಮ ವಿದ್ಯಾರ್ಥಿಯನ್ನು ರೂಪಿಸುವಲ್ಲಿ, ವಿದ್ಯಾರ್ಥಿಯು ಸಮಾಜಮುಖಿ ಆಗುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು. ಶಿಕ್ಷಕ ಮತ್ತು ವಿದ್ಯಾರ್ಥಿಯ ಆತ್ಮೀಯತೆಯು ವಿದ್ಯಾರ್ಥಿಗಳ ಸಾಧನೆಗೆ ಪೂರಕವಾಗಿದ್ದಲ್ಲಿ, ವಿದ್ಯಾರ್ಥಿಗಳ ಸಾಧನೆಯು ಸುಲಭ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ತಂದೆ-ತಾಯಿಯ ನಂತರ ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದದ್ದು ಎಂದರು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ)ದ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್ವರ್ಕ್ನ ಹಿರಿಯ ವಿಜ್ಞಾನಿ ಹಾಗೂ ಇಂಜಿನಿಯರ್ ಶ್ರೀಮತಿ ರೂಪಾ ಎಂ.ವಿ. ಅವರು ಘಟಿಕೋತ್ಸವ ಭಾಷಣ ಮಾಡಿ, ಪದವೀಧರರು ಜ್ಞಾನವನ್ನು ಜನಹಿತಕ್ಕೆ, ದೇಶದ ಅಭಿವೃದ್ಧಿಗೆ ಬಳಕೆ ಮಾಡಬೇಕು. ಕಠಿಣ ಪರಿಶ್ರಮ, ಗುರು-ಹಿರಯರ ಆಶೀರ್ವಾದ,

ಕುಟುಂಬದ ಬೆಂಬಲದ ಜೊತೆಯಲ್ಲಿ ವಿದ್ಯಾರ್ಥಿಗಳು ಏನನ್ನಾದರೂ ಯಶಸ್ಸು ಪಡೆಯಲು ಸಾಧ್ಯ ಎಂದರು.

ಓಷನ್ ಸ್ಯಾಟ್ ಉಪಗ್ರಹ, ಮಂಗಳಯಾನ ಮತ್ತು ಚಂದ್ರಯಾನ-3ರ ಸಾಧನೆಗಳನ್ನು ಉಲ್ಲೇಖಿಸಿದ ಅವರು, ಸವಾಲು ಎದುರಾದಾಗ ಸಮಸ್ಯೆಯನ್ನು ಕೈ ಬಿಡದೇ ಸಮಸ್ಯೆಗೆ ಪರಿಹಾರ ಹುಡುಕುವುದರಲ್ಲೇ ಯಶಸ್ಸು ಅಡಗಿರುತ್ತದೆ. ಬಾಹ್ಯಾಕಾಶ ಕ್ಷೇತ್ರ ಸೇರಿ ಎಲ್ಲಾ ಕ್ಷೇತ್ರಗಳಲ್ಲಿ ಎಲ್ಲರೂ ಸೇರಿ ಒಂದು ತಂಡವಾಗಿ ಕೆಲಸವನ್ನು ಮಾಡಿದಲ್ಲಿ ಹೊಸದನ್ನು ಸಾಧಿಸಲು ಅರ್ಹರನ್ನು - ಸಾಮಥ್ರ್ಯ ಉಳ್ಳವರನ್ನು ಅವಕಾಶಗಳು ಹುಡುಕಿಕೊಂಡು ಬರುತ್ತವೆ ಎಂದರು.

ಪ್ರತಿಯೊಬ್ಬರೂ ಕೃತಕ ಬುದ್ಧಿಮತ್ತೆ ಮತ್ತು ಕ್ವಾಂಟಂ ತಂತ್ರಜ್ಞಾನವನ್ನು ನೈತಿಕವಾಗಿ ಬಳಸಬೇಕು; ಸೈಬರ್ ಭದ್ರತೆ ಮತ್ತು ದತ್ತಾಂಶಗಳ ಗೌಪ್ಯತೆಯನ್ನು ಕಾಪಾಡಬೇಕು. ಇಲ್ಲವಾದಲ್ಲಿ ತಂತ್ರಜ್ಞಾನದ ದುರ್ಬಳಕೆಯಾಗಿ ಮಾನವರ ದೈನಂದಿನ ಜೀವನದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದರು.

ಉನ್ನತ ಶಿಕ್ಷಣ ಸಚಿವರಾದ ಬಸವರಾಜ ರಾಯರೆಡ್ಡಿ ಅವರು, ವಿದ್ಯಾರ್ಥಿಗಳು ಪದವಿಯ ಜೊತೆ ಉದ್ಯೋಗಕ್ಕೆ ಬೇಕಿರುವ ಕೌಶಲ್ಯಗಳನ್ನು ಕಲಿಯುವುದು ಕಡ್ಡಾಯ. ಕಲಿಕೆಗೆ ವಿರಾಮವಿಲ್ಲ. ಕಲಿಕೆಯು ನಿರಂತರವಾದ್ದು. ಉದ್ಯೋಗದ ಜೊತೆಯಲ್ಲಿ ಕಲಿಕೆಯನ್ನು ಮುಂದುವರೆಸಿದಲ್ಲಿ ಜ್ಞಾನ ಹೆಚ್ಚಾಗಲಿದೆ. ಯಾರೂ ಕೂಡ ಮಾತೃಭಾಷೆಯನ್ನು ಮರೆಯಬಾರದು. ಮಾತೃಭಾಷೆಯ ಕುರಿತು ಪ್ರತಿಯೊಬ್ಬರೂ ಪ್ರೀತಿ, ಗೌರವ, ಅಭಿಮಾನ ಮತ್ತು ಹೆಮ್ಮೆಯನ್ನು ಹೊಂದಿರಬೇಕು ಎಂದರು.

ಕಿಷ್ಕಂಧ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವರಾದ ಡಾ. ರಾಜು ಜಾಡರ ಅವರ ನೇತೃತ್ವದಲ್ಲಿ ಘಟಿಕೋತ್ಸವದ ಮೆರವಣಿಗೆ ನಡೆಯಿತು. ಕುಲಪತಿಗಳಾದ ಪೆÇ್ರ. ಟಿ.ಎನ್. ನಾಗಭೂಷಣ ಅವರು ಸ್ವಾಗತ ಕೋರಿದರು.

ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ನಿಕಾಯದ ಡೀನ್ ಡಾ. ವಿ.ಸಿ. ಪಾಟಿಲ್ ಅವರು ಪದವೀಧರರಿಗೆ ಪ್ರತಿಜ್ಞಾವಿದಿಯನ್ನುü ಬೋಧಿಸಿದರು. ಪ್ರೊ. ಮಂಜುನಾಥ ಎಸ್ ಅವರು ಕಾರ್ಯಕ್ರಮ ನಿರೂಪಿಸಿದರು.

ಬಿಸಿಎ ಪದವಿಯ ವಿಭಾಗದಲ್ಲಿ, ಕು. ಶೃತಿ ಪ್ರಥಮ ರ್ಯಾಂಕ್ ಪಡೆದು ಚಿನ್ನದ ಪದಕ ಮತ್ತು ಕು. ಎಂ. ಲತಾ ದ್ವಿತೀಯ ರ್ಯಾಂಕ್ ಪಡೆದು ಬೆಳ್ಳಿಯ ಪದಕ ಸ್ವೀಕರಿಸಿದರು. ಎಂಬಿಎ ವಿಭಾಗದಲ್ಲಿ ಕು. ಶ್ವೇತಾ ಜಿ ಪ್ರಥಮ ರ್ಯಾಂಕ್ ಪಡೆದು ಚಿನ್ನದ ಪದಕ ಸ್ವೀಕರಿಸಿದರು ಮತ್ತು ಕು. ಮರಾಠಿ ಸಾಹಿತ್ಯ ದ್ವಿತೀಯ ರ್ಯಾಂಕ್ ಪಡೆದು ಬೆಳ್ಳಿಯ ಪದಕ ಸ್ವೀಕರಿಸಿದರು.

ಎಂಸಿಎ ವಿಭಾಗದಲ್ಲಿ ಕು. ಆರ್.ಎಂ. ಸುಹಾನಾ ಸಹ್ರೀನ್ ಪ್ರಥಮ ರ್ಯಾಂಕ್ ಪಡೆದು ಚಿನ್ನದ ಪದಕ ಮತ್ತು

ಕು. ಪೆದ್ದದೇವರ ನಜ್ನೀನ್ ದ್ವಿತೀಯ ರ್ಯಾಂಕ್ ಪಡೆದು ಬೆಳ್ಳಿಯ ಪದಕ ಸ್ವೀಕರಿಸಿದರು. ಎಂಟೆಕ್ ವಿಭಾಗದಲ್ಲಿ ಕು. ಪಿ. ಸಹನಾ ಪ್ರಸಾದ್ ಪ್ರಥಮ ರ್ಯಾಂಕ್ ಪಡೆದು ಚಿನ್ನದ ಪದಕ ಮತ್ತು ಎಂ. ರಾಘವೇಂದ್ರ ದ್ವಿತೀಯ ರ್ಯಾಂಕ್ ಪಡೆದು ಬೆಳ್ಳಿಯ ಪದಕ ಸ್ವೀಕರಿಸಿದರು. ಒಟ್ಟಾರೆಯಾಗಿ 155 ವಿದ್ಯಾರ್ಥಿಗಳು ಪದವಿಯನ್ನು ಸ್ವೀಕರಿಸಿದರು.

ಹಿರಿಯ ರಾಜಕೀಯ ಮುತ್ಸದ್ದಿ ಹಾಗೂ ಮಾಜಿ ಸಚಿವರಾದ ಬಿ.ಆರ್. ಯಾವಗಲ್ ಅವರು ಗೌರವ ಅತಿಥಿಗಳಾಗಿದ್ದಾರೆ. ಸಹ -ಕುಲಾಧಿಪತಿಗಳಾದ ವೈ. ಜೆ. ಪೃಥ್ವಿರಾಜ್, ಕುಲಸಚಿವರಾದ ಪೆÇ್ರ. ಯು. ಈರಣ್ಣ, ವಿತ್ತಾಧಿಕಾರಿಗಳಾದ ನಮ್ರತಾ ಬಿ. ಯಾವಗಲ್, ಟಿಇಹೆಚ್ಅರ್ಡಿ ಟ್ರಸ್ಟಿಗಳಾದ ಅಶೋಕ್ ಭೂಪಾಲ್, ಅಮರರಾಜ್ ಭೂಪಾಲ್ ಅವರು ವೇದಿಕೆಯಲ್ಲಿದ್ದರು.

ಬಿಸಿಎ ವಿಭಾಗದಲ್ಲಿ 44 ವಿದ್ಯಾರ್ಥಿಗಳು, ಎಂಬಿಎ ವಿಭಾಗದಲ್ಲಿ 51 ವಿದ್ಯಾರ್ಥಿಗಳು, ಎಂಸಿಎ ವಿಭಾಗದಲ್ಲಿ 42 ವಿದ್ಯಾರ್ಥಿಗಳು, ಎಂಟೆಕ್ ವಿಭಾಗದಲ್ಲಿ 18 ವಿದ್ಯಾರ್ಥಿಗಳು ಸೇರಿ ಒಟ್ಟು 155 ವಿದ್ಯಾರ್ಥಿಗಳು ಪದವಿಯನ್ನು ಸ್ವೀಕರಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande