
ಕೋಲಾರ, ೨೪ ಅಕ್ಟೋಬರ್ (ಹಿ.ಸ.) : ಕೆಜಿಎಫ್ ಪೊಲೀಸ್ ಜಿಲ್ಲೆಯ ಕಾಮಸಮುದ್ರಂ ಪೊಲೀಸರು ಗಾಂಜಾ ಮಾರಾಟ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ, ರೂ.೨೮,೦೦೦/- ಮೌಲ್ಯದ ೫೮೦ ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಅಕ್ಟೋಬರ್ ೨೩ ರಂದು ಕಾಮಸಮುದರಂ ಪೊಲೀಸ್ ಠಾಣಾ ಸರಹದ್ದಿನ ದೊಡ್ಡಪೊನ್ನಾಂಡಹಳ್ಳಿ ಗ್ರಾಮದ ಹೊರವಲಯದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಬಂದAತಹ ಖಚಿತ ಮಾಹಿತಿಯನ್ನು ಆಧರಿಸಿ, ಕಾಮಸಮುದ್ರಂ ಸಿ.ಪಿ.ಐ ನಂಜಪ್ಪ ಎಂ ಮತ್ತು ಸಿಬ್ಬಂದಿಗಳು ಕೂಡಲೇ ದಾಳಿ ನಡೆಸಿ, ಬತ್ತಲಹಳ್ಳಿ ಗ್ರಾಮದ ವಾಸಿ ಸಂತೋಷ್ ಕುಮಾರ್(೩೭ವರ್ಷ) ಎಂಬ ಆರೋಪಿಯನ್ನು ಬಂಧಿಸಿದರು. ಆತನಿಂದ ರೂ.೨೮,೦೦೦/- ಮೌಲ್ಯದ ೫೮೦ ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದು ನಂತರ ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಸಲಾಗಿದೆ.
ಡಿವೈಎಸ್ಪಿ ವಿ.ಲಕ್ಷö್ಮಯ್ಯ ರವರ ಮಾರ್ಗದರ್ಶನದಲ್ಲಿ ಆರೋಪಿಯನ್ನು ಬಂಧಿಸಿ, ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಕಾಮಸಮುದ್ರಂ ವೃತ್ತ ಕಛೇರಿಯ ಸಿ.ಪಿ.ಐ ನಂಜಪ್ಪ ಎಂ, ಕಾಮಸಮುದ್ರಂ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಕಿರಣ್ ಕುಮಾರ್ ಬಿ.ವಿ, ಪಿ.ಎಸ್.ಐ. ಶರತ್.ಪಿ ಮತ್ತು ಸಿಬ್ಬಂದಿಯಾದ ರಾಜೇಂದ್ರ, ರಾಮರಾವ್, ಮಂಜುನಾಥ, ಲಕ್ಷö್ಮಣತೇಲಿ, ಅಭಿಷೇಕ್ ಮತ್ತು ಚಾಲಕರಾದ ಧನಂಜಯ್ ರವರ ಉತ್ತಮ ಕಾರ್ಯವನ್ನು ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಶ್ಲಾಘಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್