ಬಳ್ಳಾರಿ: ಅಕ್ಟೋಬರ್ 24ರಂದು ವಿದ್ಯುತ್ ವ್ಯತ್ಯಯ
ಬಳ್ಳಾರಿ, 23 ಅಕ್ಟೋಬರ್ (ಹಿ.ಸ.) ಬಳ್ಳಾರಿ ನಗರದ 110/11 ಕೆ.ವಿ ದಕ್ಷಿಣ ಉಪ-ಕೇಂದ್ರದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೆöÊಮಾಸಿಕ ನಿರ್ವಹಣೆ ಮತ್ತು ಒಎಲ್ಟಿಸಿ ದುರಸ್ತಿ ಕಾರ್ಯವನ್ನು ತುರ್ತಾಗಿ ಹಮ್ಮಿಕೊಳ್ಳಲಾಗಿದ್ದು, ಅಕ್ಟೋಬರ್ 24 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 03 ಗಂಟೆಯವರೆಗೆ ವಿವಿಧ
ಬಳ್ಳಾರಿ: ಅಕ್ಟೋಬರ್ 24ರಂದು ವಿದ್ಯುತ್ ವ್ಯತ್ಯಯ


ಬಳ್ಳಾರಿ, 23 ಅಕ್ಟೋಬರ್ (ಹಿ.ಸ.)

ಬಳ್ಳಾರಿ ನಗರದ 110/11 ಕೆ.ವಿ ದಕ್ಷಿಣ ಉಪ-ಕೇಂದ್ರದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೆöÊಮಾಸಿಕ ನಿರ್ವಹಣೆ ಮತ್ತು ಒಎಲ್ಟಿಸಿ ದುರಸ್ತಿ ಕಾರ್ಯವನ್ನು ತುರ್ತಾಗಿ ಹಮ್ಮಿಕೊಳ್ಳಲಾಗಿದ್ದು, ಅಕ್ಟೋಬರ್ 24 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 03 ಗಂಟೆಯವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಜೆಸ್ಕಾಂ ಗ್ರಾಮೀಣ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮೋಹನಬಾಬು ಅವರು ತಿಳಿಸಿದ್ದಾರೆ.

*ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳ ವಿವರ:*

ಎಫ್-43 (ಸಿದ್ಧಾಪುರ ರಸ್ತೆ ಮಾರ್ಗ): ಟಪಾಲ್ ಸ್ಟೀಲ್, ಸಿದ್ದಾಪುರ ರಸ್ತೆ, ಕೈಗಾರಿಕಾ ಪ್ರದೇಶ.

ಎಫ್-30 (ಗುಗ್ಗರಹಟ್ಟಿ ಕೈಗಾರಿಕಾ ಮಾರ್ಗ): ಗುಗ್ಗರಹಟ್ಟಿ ಗ್ರಾಮ, ಮುಂಡರಗಿ ಹಳೆ ಬೈಪಾಸ್ ರಸ್ತೆ.

ಎಫ್-27 (ಆಂಧ್ರಾಳ್ ಮಾರ್ಗ): ಆಂಧ್ರಾಳ್, ಪಾತ್ರಬೂದಿಹಾಳ್, ಮಂಗಮ್ಮ ಕ್ಯಾಂಪ್, ಚರಕುಂಟೆ ಗ್ರಾಮ.

ಎಫ್-29 (ಮಿಂಚೇರಿ ಎನ್.ಜೆ.ವೈ ಮಾರ್ಗ): ಮಿಂಚೇರಿ ಗ್ರಾಮ, ಎಸ್.ಜೆ ಕೋಟೆ ಗ್ರಾಮ, ಮುಂಡರಗಿ ಗ್ರಾಮ.

ಎಫ್-26 (ಚರಕುಂಟ ಐ.ಪಿ ಮಾರ್ಗ): ಮುಂಡರಗಿ, ಚರಕುಂಟೆ, ವೈ.ಬೂದಿಹಾಳ್ ಕೃಷಿ ಪ್ರದೇಶಗಳು.

ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಈ ಕಾರ್ಯಕ್ಕೆ ಸಹಕರಿಸಬೇಕು ಎಂದು ಕೋರಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande