ಬಳ್ಳಾರಿ : ಅ. 29 - ಹಿರಿಯ ನಾಗರಿಕರಿಗೆ ಡಿಮೆನ್ಷಿಯಾ ಆರೋಗ್ಯ ತಪಾಸಣೆ
ಬಳ್ಳಾರಿ, 23 ಅಕ್ಟೋಬರ್ (ಹಿ.ಸ.) ಕರ್ನಾಟಕ ಸರ್ಕಾರದ ‘ಸ್ಟೇಟ್ ಆಕ್ಷನ್ ಪ್ಲಾನ್ ಫಾರ್ ಸೀನಿಯರ್ ಸಿಟಿಜನ್'' (2026-27) ಯೋಜನೆಯಡಿ, ಬಳ್ಳಾರಿ ವಿಭಾಗ ಮಟ್ಟದಲ್ಲಿ ಹಿರಿಯ ನಾಗರಿಕರಿಗಾಗಿ ಡಿಮೆನ್ಷಿಯಾ (ಮರುವಿನ ಕಾಯಿಲೆ) ಉಚಿತ ಆರೋಗ್ಯ ತಪಾಸಣೆ ಹಾಗೂ ಜಾಗೃತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಶಿಬಿರವ
ಬಳ್ಳಾರಿ : ಅ. 29 - ಹಿರಿಯ ನಾಗರಿಕರಿಗೆ ಡಿಮೆನ್ಷಿಯಾ ಆರೋಗ್ಯ ತಪಾಸಣೆ


ಬಳ್ಳಾರಿ, 23 ಅಕ್ಟೋಬರ್ (ಹಿ.ಸ.)

ಕರ್ನಾಟಕ ಸರ್ಕಾರದ ‘ಸ್ಟೇಟ್ ಆಕ್ಷನ್ ಪ್ಲಾನ್ ಫಾರ್ ಸೀನಿಯರ್ ಸಿಟಿಜನ್' (2026-27) ಯೋಜನೆಯಡಿ, ಬಳ್ಳಾರಿ ವಿಭಾಗ ಮಟ್ಟದಲ್ಲಿ ಹಿರಿಯ ನಾಗರಿಕರಿಗಾಗಿ ಡಿಮೆನ್ಷಿಯಾ (ಮರುವಿನ ಕಾಯಿಲೆ) ಉಚಿತ ಆರೋಗ್ಯ ತಪಾಸಣೆ ಹಾಗೂ ಜಾಗೃತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.

ಶಿಬಿರವು ಅಕ್ಟೋಬರ್ 29 ರಂದು ಬೆಳಗ್ಗೆ 11 ಗಂಟೆಗೆ ಬಳ್ಳಾರಿಯ ಬೆಳಗಲ್ ರಸ್ತೆಯಲ್ಲಿರುವ ದಿವಂಗತ ಶ್ರೀಮತಿ ಜಿ. ರುಕ್ಮಿಣಮ್ಮ ಚೆಂಗಾರೆಡ್ಡಿ ಸ್ಮಾರಕ ಹಿರಿಯ ನಾಗರಿಕರ ವೃದ್ಧಾಶ್ರಮದಲ್ಲಿ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿ / ಕಂಪ್ಲಿ (ಸಿ. ರಾಣಿ): 8880875620, ಸಿರುಗುಪ್ಪ (ಸಾಬೀರ): 9743509698, ಸಂಡೂರು (ಸಿ. ಕರಿಬಸಜ್ಜ): 9632052270, ಕುರುಗೋಡು (ಆರ್. ರೇವಣ್ಣ): 9538000887, ಯೋಜನಾ ಸಹಾಯಕರು (ರಾಘವೇಂದ್ರ ನಾಯ್ಕ): 9513081723 ಅಥವಾ ಕಚೇರಿ ದೂರವಾಣಿ ಸಂಖ್ಯೆ: 08392-267886 ಗೆ ಸಂಪರ್ಕಿಸಬಹುದಾಗಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಹಿರಿಯ ನಾಗರಿಕರು ಈ ಶಿಬಿರದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಕೋರಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande