

ಬಳ್ಳಾರಿ, 22 ಅಕ್ಟೋಬರ್ (ಹಿ.ಸ.)
ಕಿಷ್ಕಿಂದ ವಿಶ್ವವಿದ್ಯಾಲಯದ ಎರಡನೇಯ ಘಟಿಕೋತ್ಸವವನ್ನು ವಿಶ್ವವಿದ್ಯಾಲಯದ `ಮೌಂಟ್ ವ್ಯೂ ಕ್ಯಾಂಪಸ್'ನಲ್ಲಿ ಅಕ್ಟೋಬರ್ 24ರ ಶನಿವಾರ ನಡೆಯಲಿದೆ.
ಕಿಷ್ಕಿಂದ ವಿಶ್ವವಿದ್ಯಾಲಯದ ಕುಲಸಚಿವ ಡಾ. ಯು. ಈರಣ್ಣ ಅವರು ಮಾಹಿತಿ ನೀಡಿದ್ದು, ಈ ಘಟಿಕೋತ್ಸವದಲ್ಲಿ ಕಿಷ್ಕಿಂದ ವಿಶ್ವವಿದ್ಯಾಲಯದ ಬಿಸಿಎ, ಎಂಬಿಎ, ಎಂಸಿಎ, ಮತ್ತು ಎಂಟೆಕ್ ಕೋರ್ಸ್ಗಳ ಪದವೀಧರರಿಗೆ ಪದವಿ ಪ್ರದಾನ ಹಾಗೂ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಹಾಗೂ ರ್ಯಾಂಕ್ ವಿಜೇತಕರಿಗೆ ಪದಕ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದರು.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ)ದ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್ವರ್ಕ್ನ ಹಿರಿಯ ವಿಜ್ಞಾನಿ ಹಾಗೂ ಇಂಜಿನಿಯರ್ ಶ್ರೀಮತಿ ರೂಪಾ ಎಂ.ವಿ. ಅವರು ಘಟಿಕೋತ್ಸವ ಭಾಷಣವನ್ನು ಮಾಡುವರು. ಉನ್ನತ ಶಿಕ್ಷಣ ಸಚಿವರು ಹಾಗೂ ವಿಶ್ವವಿದ್ಯಾಲಯದ ಸಹ ಸಂದರ್ಶಕರಾದ ಬಸವರಾಜ ರಾಯರೆಡ್ಡಿ ಅವರು ವಿಶೇಷ ಅತಿಥಿಗಳಾಗಿದ್ದಾರೆ.
ಉದ್ಯಮಿ, ತಂತ್ರಜ್ಞಾನದ ರೂವಾರಿ ಗಿರೀಶ್ ರಾಮಣ್ಣ ಅವರಿಗೆ ಕಿಷ್ಕಿಂದ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಅನ್ನು ಈ ಸಂದರ್ಭದಲ್ಲಿ ಪ್ರದಾನ ಮಾಡಲಾಗುತ್ತದೆ. ಹಿರಿಯ ರಾಜಕೀಯ ಮುತ್ಸದ್ದಿ ಹಾಗೂ ಮಾಜಿ ಸಚಿವರಾದ ಬಿ.ಆರ್. ಯಾವಗಲ್ ಅವರು ಗೌರವ ಅತಿಥಿಗಳಾಗಿದ್ದಾರೆ.
ಬಿಸಿಎ ಪದವಿಯ ವಿಭಾಗದಲ್ಲಿ ಕುಮಾರಿ ಶೃತಿ ಅವರು 9.72 ಸಿಜಿಪಿಎದೊಂದಿಗೆ ಪ್ರಥಮ ರ್ಯಾಂಕ್ ಪಡೆದು ಚಿನ್ನದ ಪದಕ ಮತ್ತು
ಕು. ಎಂ. ಲತಾ ಅವರು 9.65 ಸಿಜಿಪಿಎದೊಂದಿಗೆ ದ್ವಿತೀಯ ರ್ಯಾಂಕ್ ಪಡೆದು ಬೆಳ್ಳಿಯ ಪದಕವನ್ನು ಪಡೆದಿದ್ದಾರೆ.
ಎಂಬಿಎ ವಿಭಾಗದಲ್ಲಿ ಕು. ಶ್ವೇತಾ .ಜಿ ಅವರು 9.77 ಸಿಜಿಪಿಎದೊಂದಿಗೆ ಪ್ರಥಮ ರ್ಯಾಂಕ್ ಪಡೆದು ಚಿನ್ನದ ಪದಕವನ್ನು ಮತ್ತು ಕು. ಮರಾಠಿ ಸಾಹಿತ್ಯ ಅವರು 9.69 ಸಿಜಿಪಿಎದೊಂದಿಗೆ ದ್ವಿತೀಯ ರ್ಯಾಂಕ್ ಪಡೆದು ಬೆಳ್ಳಿಯ ಪದಕವನ್ನು ಪಡೆದಿದ್ದಾರೆ.
ಎಂಸಿಎ ವಿಭಾಗದಲ್ಲಿ ಕು. ಆರ್.ಎಂ. ಸುಹಾನಾ ಸಹ್ರೀನ್ ಅವರು 9.9 ಸಿಜಿಪಿಎದೊಂದಿಗೆ ಪ್ರಥಮ ರ್ಯಾಂಕ್ ಪಡೆದು ಚಿನ್ನದ ಪದಕವನ್ನು ಮತ್ತು
ಕು. ಪೆದ್ದದೇವರ ನಜ್ನೀನ್ ಅವರು 9.73 ಸಿಜಿಪಿಎದೊಂದಿಗೆ ದ್ವಿತೀಯ ರ್ಯಾಂಕ್ ಪಡೆದು ಬೆಳ್ಳಿಯ ಪದಕವನ್ನು ಪಡೆದಿದ್ದಾರೆ.
ಎಂಟೆಕ್ ವಿಭಾಗದಲ್ಲಿ ಕು. ಪಿ. ಸಹನಾ ಪ್ರಸಾದ್ ಅವರು 9.31 ಸಿಜಿಪಿಎದೊಂದಿಗೆ ಪ್ರಥಮ ರ್ಯಾಂಕ್ ಪಡೆದು ಚಿನ್ನದ ಪದಕವನ್ನು ಮತ್ತು
ಎಂ. ರಾಘವೇಂದ್ರ ಅವರು 9.29 ಸಿಜಿಪಿಎದೊಂದಿಗೆ ದ್ವಿತೀಯ ರ್ಯಾಂಕ್ ಪಡೆದು ಬೆಳ್ಳಿಯ ಪದಕವನ್ನು ಪಡೆದಿದ್ದಾರೆ.
ಬಿಸಿಎ ವಿಭಾಗದಲ್ಲಿ 20 ಯುವಕರು ಮತ್ತು 24 ಯುವತಿಯರು ಸೇರಿ ಒಟ್ಟು 44 ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದಾರೆ. ಎಂಬಿಎ ವಿಭಾಗದಲ್ಲಿ 33 ಯುವಕರು ಮತ್ತು 18 ಯುವತಿಯರು ಸೇರಿ ಒಟ್ಟು 51 ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದಾರೆ.
ಎಂಸಿಎ ವಿಭಾಗದಲ್ಲಿ 22 ಯುವಕರು ಮತ್ತು 20 ಯುವತಿಯರು ಸೇರಿ ಒಟ್ಟು 42 ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದಾರೆ. ಎಂಟೆಕ್ ವಿಭಾಗದಲ್ಲಿ 11 ಯುವಕರು ಮತ್ತು 07 ಯುವತಿಯರು ಸೇರಿ ಒಟ್ಟು 18 ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದಾರೆ. ಒಟ್ಟಾರೆಯಾಗಿ 155 ವಿದ್ಯಾರ್ಥಿಗಳು ಪದವಿಯನ್ನು ಸ್ವೀಕರಿಸಲಿದ್ದಾರೆ ಎಂದು ಅವರು ತಿಳಿಸಿದರು.
ಘಟಿಕೋತ್ಸವದಲ್ಲಿ ಕುಲಾಧಿಪತಿ ಡಾ. ಯಶವಂತ್ ಭೂಪಾಲ್, ಕುಲಪತಿ ಟಿ.ಎನ್. ನಾಗಭೂಷಣ, ಸಹಕುಲಾಧಿಪತಿ ವೈ.ಜೆ. ಪೃಥ್ವಿರಾಜ್ ಭೂಪಾಲ್, ಕುಲಸಚಿವರು ಡಾ. ಯು. ಈರಣ್ಣ, ಕುಲಸಚಿವ (ಮೌಲ್ಯಮಾಪನ) ಡಾ. ರಾಜು ಜಾಡರ್ ಹಾಗೂ ಹಣಕಾಸು ಅಧಿಕಾರಿ ಶ್ರೀಮತಿ ವೈ. ನಮ್ರತಾ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್