ಬಳ್ಳಾರಿ : ಕೆಯು - ವಿಕೆಎಫ್ ಎಕ್ಸ್ಪೋರ್ಟ್ ಸಹಾಯ ಕೇಂದ್ರ ಪ್ರಾರಂಭ
ಬಳ್ಳಾರಿ, 22 ಅಕ್ಟೋಬರ್ (ಹಿ.ಸ.) ಕಿಷ್ಕಿಂಧ ವಿಶ್ವವಿದ್ಯಾಲಯ ಮತ್ತು ವಿಷನ್ ಕರ್ನಾಟಕ ಫೌಂಡೇಶನ್ ಜಂಟಿಯಾಗಿ ಕೆಯು-ವಿಕೆಎಫ್ ಎಕ್ಸ್ಪೋರ್ಟ್ ವಿಶೇಷ ಸಹಾಯ ಕೇಂದ್ರವನ್ನು ಪ್ರಾರಂಭ ಮಾಡಿವೆ. ಈ ಎಕ್ಸ್ಪೋರ್ಟ್ ಸಹಾಯ ಕೇಂದ್ರವು ರಫ್ತು ಕ್ಷೇತ್ರಕ್ಕೆ ಪದಾರ್ಪಣೆ ಮಾಡಲು ಉತ್ಸುಕರಾಗಿರುವ ನವ ಉದ್ಯಮಿಗಳಿಗೆ ರ
ಬಳ್ಳಾರಿ : ಕೆಯು - ವಿಕೆಎಫ್ ಎಕ್ಸ್ಪೋರ್ಟ್ ಸಹಾಯ ಕೇಂದ್ರ ಪ್ರಾರಂಭ


ಬಳ್ಳಾರಿ, 22 ಅಕ್ಟೋಬರ್ (ಹಿ.ಸ.)

ಕಿಷ್ಕಿಂಧ ವಿಶ್ವವಿದ್ಯಾಲಯ ಮತ್ತು ವಿಷನ್ ಕರ್ನಾಟಕ ಫೌಂಡೇಶನ್ ಜಂಟಿಯಾಗಿ ಕೆಯು-ವಿಕೆಎಫ್ ಎಕ್ಸ್ಪೋರ್ಟ್ ವಿಶೇಷ ಸಹಾಯ ಕೇಂದ್ರವನ್ನು ಪ್ರಾರಂಭ ಮಾಡಿವೆ.

ಈ ಎಕ್ಸ್ಪೋರ್ಟ್ ಸಹಾಯ ಕೇಂದ್ರವು ರಫ್ತು ಕ್ಷೇತ್ರಕ್ಕೆ ಪದಾರ್ಪಣೆ ಮಾಡಲು ಉತ್ಸುಕರಾಗಿರುವ ನವ ಉದ್ಯಮಿಗಳಿಗೆ ರಫ್ತು ಕುರಿತು ಸಮಗ್ರ ಮಾಹಿತಿಯನ್ನು ನೀಡುವಿಕೆ, ದಾಖಲೆಗಳ ಸಂಗ್ರಹ - ದಾಖಲೆಗಳನ್ನು ಪಡೆಯುವಿಕೆ - ದಾಖಲೆಗಳನ್ನು ನೀಡುವಿಕೆ ಇನ್ನಿತರೆ ವಿಷಯಗಳ ಕುರಿತು ಪರಿಣಿತರ ಜೊತೆ ಸಂಪರ್ಕ ಕೊಂಡಿಯಾಗಿ ಜವಾಬ್ದಾರಿ ನಿರ್ವಹಿಸಲಿದೆ.

ರೈತರು, ರೈತ ಉತ್ಪಾದಕ ಸಂಸ್ಥೆಗಳು (ಎಫ್ಪಿಓಗಳು), ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್ಎ0ಇಗಳು), ಕೃಷಿ ನವೋದ್ಯಮಗಳು, ಆಹಾರ ಸಂಸ್ಕರಣಾ ಉದ್ಯಮಗಳು, ಉತ್ಪಾದಕರು, ಉದ್ಯಮಿಗಳು, ರಫ್ತುದಾರರು, ರಫ್ತು ಪ್ರಕ್ರಿಯೆ ಆರಂಭಿಸಲು ಬಯಸುವವರು ಹಾಗೂ ಸರಕು ವ್ಯಾಪಾರಿಗಳಿಗೆ ಅಗತ್ಯ ಮಾರ್ಗದರ್ಶನ ಮತ್ತು ನೆರವು ನೀಡಲಿದೆ.

ಈ ಸಹಾಯ ಕೇಂದ್ರದಲ್ಲಿ ರಫ್ತು ನಿಯಮಾನುಸರಣೆ ಮತ್ತು ದಾಖಲೀಕರಣ, ಗುಣಮಟ್ಟ ಪರೀಕ್ಷೆ ಮತ್ತು ಪ್ರಮಾಣೀಕರಣ, ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಪ್ಯಾಕೇಜಿಂಗ್, ಲೇಬಲಿಂಗ್ ಮತ್ತು ಬ್ರ್ಯಾಂಡಿ0ಗ್, ಮಾರುಕಟ್ಟೆ ಮಾಹಿತಿ ಮತ್ತು ಖರೀದಿದಾರರ ಸಂಪರ್ಕ, ರಫ್ತು ಹಣಕಾಸು ಮತ್ತು ಪಾವತಿ ಅಪಾಯ ನಿರ್ವಹಣೆ ಹಾಗೂ ತಂತ್ರಜ್ಞಾನ ಹಾಗೂ ತಜ್ಞರ ಮಾರ್ಗದರ್ಶನ ಸಿಗಲಿದೆ.

ವಿಷನ್ ಕರ್ನಾಟಕ ಫೌಂಡೇಶನ್ (ವಿಕೆಎಫ್), ರಫ್ತು ಉತ್ತೇಜನ ಸಂಸ್ಥೆಗಳು, ಸರ್ಕಾರಿ ಇಲಾಖೆಗಳು, ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು, ಬ್ಯಾಂಕುಗಳು, ವಿಮಾ ಸಂಸ್ಥೆಗಳು, ಮಾರ್ಗದರ್ಶಕರು ಹಾಗೂ ಮಾರುಕಟ್ಟೆ ಜಾಲಗಳೊಂದಿಗೆ ಸಂಪರ್ಕ ಕಲ್ಪಿಸಲಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande