ಜಮಖಂಡಿ ಶುಗರ್ಸ್ನ ಹಿರೇಪಡಸಲಗಿ ಘಟಕದಲ್ಲಿ ವೈಭವದ ಕೆನ್ ಕ್ಯಾರಿಯರ್ ಪೂಜೆ: ನೂರಾರು ರೈತರ ಉಪಸ್ಥಿ
ಬಾಗಲಕೋಟೆ, 21 ಅಕ್ಟೋಬರ್ (ಹಿ.ಸ.) ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮಿನ ಅಂಗವಾಗಿ ಜಮಖಂಡಿ ಶುಗರ್ಸ್ ಲಿಮಿಟೆಡ್ನ ಹಿರೇಪಡಸಲಗಿ ಘಟಕದಲ್ಲಿ ''ಕೆನ್ ಕ್ಯಾರಿಯರ್'' ಪೂಜಾ ಸಮಾರಂಭವು ಅತ್ಯಂತ ವೈಭವ ಹಾಗೂ ಶಾಸ್ತ್ರೋಕ್ತವಾಗಿ ನೆರವೇರಿತು. ಈ ಶುಭ ಸಮಾರಂಭದಲ್ಲಿ ಸಂಸ್ಥೆಯ ಆಡಳಿತ ಮಂಡಳಿ, ಗಣ್ಯರು ಹಾಗ
ಸಕ್ಕರೆ ಕಾರ್ಖಾನೆ ಪೂಜೆ


ಬಾಗಲಕೋಟೆ, 21 ಅಕ್ಟೋಬರ್ (ಹಿ.ಸ.)

ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮಿನ ಅಂಗವಾಗಿ ಜಮಖಂಡಿ ಶುಗರ್ಸ್ ಲಿಮಿಟೆಡ್ನ ಹಿರೇಪಡಸಲಗಿ ಘಟಕದಲ್ಲಿ 'ಕೆನ್ ಕ್ಯಾರಿಯರ್' ಪೂಜಾ ಸಮಾರಂಭವು ಅತ್ಯಂತ ವೈಭವ ಹಾಗೂ ಶಾಸ್ತ್ರೋಕ್ತವಾಗಿ ನೆರವೇರಿತು. ಈ ಶುಭ ಸಮಾರಂಭದಲ್ಲಿ ಸಂಸ್ಥೆಯ ಆಡಳಿತ ಮಂಡಳಿ, ಗಣ್ಯರು ಹಾಗೂ ಸುತ್ತಮುತ್ತಲ ಗ್ರಾಮಗಳ ನೂರಾರು ಕಬ್ಬು ಬೆಳೆಗಾರ ರೈತಬಾಂಧವರು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು.

ಸಮಾರಂಭದಲ್ಲಿ ಸಂಸ್ಥೆಯ ಪ್ರಮುಖರು ಹಾಗೂ ಮಾಜಿ ಶಾಸಕರಾದ ಆನಂದ ನ್ಯಾಮಗೌಡ ಅವರ ನೇತೃತ್ವದಲ್ಲಿ ಕಬ್ಬು ನುರಿಸುವ ಯಂತ್ರಗಳಿಗೆ ಹಾಗೂ ಕೆನ್ ಕ್ಯಾರಿಯರ್ಗೆ ವಿಶೇಷ ಪೂಜೆ ನೆರವೇರಿಸಿ, ಕಬ್ಬಿನ ತೋಟದಿಂದ ಬಂದ ಪ್ರಥಮ ಕಬ್ಬಿನ ಜಲ್ಲೆಗಳನ್ನು ಕೆನ್ ಕ್ಯಾರಿಯರ್ಗೆ ಹಾಕುವ ಮೂಲಕ ಹಂಗಾಮಿಗೆ ಚಾಲನೆ ನೀಡಲಾಯಿತು.

ರೈತರ ಹಿತ ಕಾಯುವುದೇ ನಮ್ಮ ಆಧ್ಯತೆ

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಆನಂದ ನ್ಯಾಮಗೌಡ ಅವರು, ಜಮಖಂಡಿ ಶುಗರ್ಸ್ ಕಾರ್ಖಾನೆಯು ಸದಾ ರೈತರ ಏಳಿಗೆ ಮತ್ತು ಪ್ರಗತಿಯನ್ನು ಕಣ್ಣಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿದೆ. ರೈತರು ಶ್ರಮಪಟ್ಟು ಬೆಳೆದ ಕಬ್ಬಿಗೆ ಸೂಕ್ತ ಸಮಯಕ್ಕೆ ನ್ಯಾಯಯುತ ಬೆಲೆ ಹಾಗೂ ಸಕಾಲದಲ್ಲಿ ಬಿಲ್ಲು ಪಾವತಿಸುವುದು ನಮ್ಮ ಆದ್ಯತೆಯಾಗಿದೆ. ಈ ಬಾರಿಯ ಹಂಗಾಮು ಸುಸೂತ್ರವಾಗಿ ನೆರವೇರಿ, ರೈತರಿಗೂ ಮತ್ತು ಕಾರ್ಖಾನೆಗೂ ಸಮೃದ್ಧಿ ಹಾಗೂ ಲಾಭ ತರಲಿ ಎಂದು ಆಶಿಸಿದರು.

ರೈತರ ಬೃಹತ್ ಉಪಸ್ಥಿತಿ

ಸಮಾರಂಭಕ್ಕೆ ಹಿರೇಪಡಸಲಗಿ, ಜಮಖಂಡಿ ಹಾಗೂ ಸುತ್ತಮುತ್ತಲ ನಾನಾ ಹಳ್ಳಿಗಳಿಂದ ಅಪಾರ ಸಂಖ್ಯೆಯಲ್ಲಿ ಕಬ್ಬು ಬೆಳೆಗಾರರು ಆಗಮಿಸಿದ್ದರು. ಬಂದಂತಹ ಎಲ್ಲಾ ರೈತಬಾಂಧವರನ್ನು ಕಾರ್ಖಾನೆಯ ಆಡಳಿತ ಮಂಡಳಿಯವರು ಗೌರವಪೂರ್ವಕವಾಗಿ ಸ್ವಾಗತಿಸಿ, ಉಪಹಾರ ಹಾಗೂ ಪ್ರಸಾದದ ವ್ಯವಸ್ಥೆ ಮಾಡಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande