ವಿಜಯದಶಮಿ ಹಬ್ಬಕ್ಕೆ ಪ್ರಧಾನಿ ಮೋದಿ, ಮಲ್ಲಿಕಾರ್ಜುನ ಖರ್ಗೆ ಶುಭಾಶಯ
ನವದೆಹಲಿ, 20 ಅಕ್ಟೋಬರ್ (ಹಿ.ಸ.): ವಿಜಯದಶಮಿ ಹಬ್ಬದ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ. ಉಲ್ಲಾಸ ಮತ್ತು ವಿಶ್ವಾಸದ ಈ ವಿಜಯದ ಹಬ್ಬ ಪ್ರತಿಯೊಬ್ಬರ ಸಂಕಲ್ಪಕ್ಕೆ ಹೊಸ ಶಕ್ತಿಯನ್ನು ನೀಡಲಿ. ಎಲ್ಲರ ಜೀವನ ಸುಖ, ಸೌಭಾಗ್ಯ ಹಾಗೂ ಯಶಸ್ಸಿನಿ
ಖರ್ಗೆ ಎಕ್ಸ್ ಪೋಸ್ಟ್


ನವದೆಹಲಿ, 20 ಅಕ್ಟೋಬರ್ (ಹಿ.ಸ.):

ವಿಜಯದಶಮಿ ಹಬ್ಬದ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ.

ಉಲ್ಲಾಸ ಮತ್ತು ವಿಶ್ವಾಸದ ಈ ವಿಜಯದ ಹಬ್ಬ ಪ್ರತಿಯೊಬ್ಬರ ಸಂಕಲ್ಪಕ್ಕೆ ಹೊಸ ಶಕ್ತಿಯನ್ನು ನೀಡಲಿ. ಎಲ್ಲರ ಜೀವನ ಸುಖ, ಸೌಭಾಗ್ಯ ಹಾಗೂ ಯಶಸ್ಸಿನಿಂದ ಸಮೃದ್ಧವಾಗಲಿ ಎಂದು ಅವರು ತಮ್ಮ ಸಾಮಾಜಿಕ ಜಾಲತಾಣದ ಸಂದೇಶದಲ್ಲಿ ಹಾರೈಸಿದ್ದಾರೆ.

ಸತ್ಯ, ನ್ಯಾಯ ಮತ್ತು ಧರ್ಮಕ್ಕೆ ಜಯವಾಗಲಿ: ಮಲ್ಲಿಕಾರ್ಜುನ ಖರ್ಗೆ

ವಿಜಯದಶಮಿಯ ಪವಿತ್ರ ಸಂದರ್ಭದಲ್ಲಿ ದೇಶದ ಸಮಸ್ತ ಜನತೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ.

ಅಸತ್ಯದ ವಿರುದ್ಧ ಸತ್ಯಕ್ಕೆ, ಅನ್ಯಾಯದ ವಿರುದ್ಧ ನ್ಯಾಯಕ್ಕೆ ಹಾಗೂ ಕೆಟ್ಟತನದ ವಿರುದ್ಧ ಒಳ್ಳೆಯತನಕ್ಕೆ ಜಯ ದೊರೆಯುವ ಈ ಮಹಾಪರ್ವವು ಅಹಂಕಾರ, ದ್ವೇಷ ಮತ್ತು ಭೇದಭಾವಗಳನ್ನು ಮೀರಿ ಮುನ್ನಡೆಯಲು ಪ್ರೇರಣೆ ನೀಡುತ್ತದೆ ಎಂದು ಅವರು ಹೇಳಿದ್ದಾರೆ.

ದೇಶದಾದ್ಯಂತ ವೈವಿಧ್ಯಮಯ ಸಂಪ್ರದಾಯಗಳೊಂದಿಗೆ ಆಚರಿಸಲಾಗುವ ಈ ಹಬ್ಬವು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಹಾಗೂ ವೈವಿಧ್ಯತೆಯಲ್ಲಿ ಏಕತೆಯ ಭಾವವನ್ನು ಪ್ರತಿಬಿಂಬಿಸುತ್ತದೆ. ಒಳಿತು ಕೆಡುಕಿನ ಮೇಲೆ ಜಯ ಸಾಧಿಸುವ ಶಾಶ್ವತ ಸಂದೇಶವು ಸತ್ಯ, ನ್ಯಾಯ ಮತ್ತು ಧರ್ಮದ ಮೌಲ್ಯಗಳನ್ನು ನೆನಪಿಸುತ್ತದೆ ಎಂದು ತಿಳಿಸಿದ್ದಾರೆ.

ಈ ಸಂತಸದ ಹಬ್ಬವು ಪರಸ್ಪರ ಬಾಂಧವ್ಯ, ಗೌರವ ಮತ್ತು ಸಾಮರಸ್ಯವನ್ನು ಮತ್ತಷ್ಟು ಬಲಪಡಿಸಲಿ. ಎಲ್ಲರಿಗೂ ನ್ಯಾಯ ದೊರೆಯುವ, ಒಳಗೊಳ್ಳುವಿಕೆ ಮತ್ತು ಸಮೃದ್ಧಿಯಿಂದ ಕೂಡಿದ ಭವಿಷ್ಯವನ್ನು ನಿರ್ಮಿಸಲು ಸ್ಫೂರ್ತಿ ನೀಡಲಿ ಎಂದು ಖರ್ಗೆ ಹಾರೈಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande