
ಶಿವಮೊಗ್ಗ, 20 ಅಕ್ಟೋಬರ್ (ಹಿ.ಸ.):
ಮಾಜಿ ಸೈನಿಕರು, ಅವರ ಅವಲಂಬಿತರು ಹಾಗೂ ವೀರ ನಾರಿಯರಿಗಾಗಿ ಬೆಂಗಳೂರಿನ ಪಿ.ಸಿ.ಡಿ.ಎ ಬಹುಪಯೋಗಿ ಸಭಾಂಗಣದಲ್ಲಿ ನವೆಂಬರ್ 4 ಮತ್ತು 5ರಂದು ಸ್ಪರ್ಶ್ ಸಹಾಯತಾ ಶಿಬಿರ ಆಯೋಜಿಸಲಾಗಿದೆ.
ಎರಡೂ ದಿನ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಶಿಬಿರ ನಡೆಯಲಿದೆ. ಸ್ಪರ್ಶ್‌ಗೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಜೀವನ ಪ್ರಮಾಣಪತ್ರ ಸಲ್ಲಿಸುವ ಕುರಿತು ಸೂಕ್ತ ಸಲಹೆ ಮತ್ತು ಪರಿಹಾರ ಪಡೆಯಲು ಮಾಜಿ ಸೈನಿಕರು, ಅವರ ಅವಲಂಬಿತರು ಹಾಗೂ ವೀರ ನಾರಿಯರು ಅಗತ್ಯ ದಾಖಲೆಗಳೊಂದಿಗೆ ಶಿಬಿರದಲ್ಲಿ ಭಾಗವಹಿಸಬಹುದು.
ಶಿಬಿರದಲ್ಲಿ ಭಾಗವಹಿಸಲು ಆಸಕ್ತರು ಅಕ್ಟೋಬರ್ 30ರೊಳಗೆ 08182-220925 ದೂರವಾಣಿ ಸಂಖ್ಯೆ ಅಥವಾ soldiers_shimoga@rediffmail.com ಇ-ಮೇಲ್ ಮೂಲಕ ನೋಂದಾಯಿಸಿಕೊಳ್ಳಬೇಕು ಎಂದು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕ (ಪ್ರ) ಡಾ. ಸಿ.ಎ. ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.