ಬುದ್ಧರ ಶಾಂತಿ, ಕರುಣೆ, ಸಮಾನತೆಯ ಸಂದೇಶಗಳು ಮಾನವಕುಲಕ್ಕೆ ದಾರಿದೀಪ: ಈಶ್ವರ ಖಂಡ್ರೆ
ಬೀದರ್, 20 ಅಕ್ಟೋಬರ್ (ಹಿ.ಸ.): ಬುದ್ಧರ ಶಾಂತಿ, ಕರುಣೆ, ಸಮಾನತೆ ಮತ್ತು ಸಹೋದರತ್ವದ ಸಂದೇಶಗಳು ಮಾನವಕುಲಕ್ಕೆ ಸದಾ ದಾರಿದೀಪವಾಗಿವೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ತೋರಿದ ಧಮ್ಮದ ಮಾರ್ಗವು ಸಾಮಾಜಿಕ ನ್ಯಾಯ, ಮಾನವೀಯತೆ ಮತ್ತು ಸಮಾನತೆಯ ಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಿದೆ ಎಂದು ಸಚಿವ ಈಶ್ವರ ಖಂಡ
ಈಶ್ವರ ಖಂಡ್ರೆ


ಬೀದರ್, 20 ಅಕ್ಟೋಬರ್ (ಹಿ.ಸ.):

ಬುದ್ಧರ ಶಾಂತಿ, ಕರುಣೆ, ಸಮಾನತೆ ಮತ್ತು ಸಹೋದರತ್ವದ ಸಂದೇಶಗಳು ಮಾನವಕುಲಕ್ಕೆ ಸದಾ ದಾರಿದೀಪವಾಗಿವೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ತೋರಿದ ಧಮ್ಮದ ಮಾರ್ಗವು ಸಾಮಾಜಿಕ ನ್ಯಾಯ, ಮಾನವೀಯತೆ ಮತ್ತು ಸಮಾನತೆಯ ಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಿದೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.

ಬೀದರ್ ಜಿಲ್ಲೆಯ ರೇಕುಳಗಿ ಧಮ್ಮಾಂಕುರ ಮೌಂಟ್‌ನ ಅನಾಥ ಪಿಂಡಕ ಬುದ್ಧ ವಿಹಾರದಲ್ಲಿ ಇಂದು ನಡೆದ 70ನೇ ಧಮ್ಮಚಕ್ರ ಪ್ರವರ್ತನ ದಿನ ಹಾಗೂ ಅಶೋಕ ವಿಜಯದಶಮಿ ಮಹೋತ್ಸವದಲ್ಲಿ ಭಾಗವಹಿಸಿ, ಭಗವಾನ್ ಗೌತಮ ಬುದ್ಧರಿಗೆ ಗೌರವ ನಮನ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.

ಬುದ್ಧರ ಶಾಂತಿಯ ಸಂದೇಶ ಹಾಗೂ ಬಾಬಾಸಾಹೇಬರ ಸಮಾನತೆಯ ಆಶಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಸೌಹಾರ್ದಯುತ ಮತ್ತು ಸಮಾನತೆಯ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಈಶ್ವರ ಖಂಡ್ರೆ ಕರೆ ನೀಡಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande