ಮಹಾನವಮಿ, ಆಯುಧ ಪೂಜೆಗೆ ಗಣ್ಯರ ಶುಭಾಶಯ
ಬೆಂಗಳೂರು, 20 ಅಕ್ಟೋಬರ್ (ಹಿ.ಸ.): ಮಹಾನವಮಿ ಹಾಗೂ ಆಯುಧ ಪೂಜೆಯ ಅಂಗವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಆರ್. ಅಶೋಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ನಾಡಿನ ಜನತೆಗೆ ಶುಭಾಶಯ ಕೋರಿದ್ದಾರೆ. ಕಾಯಕದ ಪರಿಕರಗಳ ಪೂಜೆಯೇ ನಾಡಿನ ಸಂಸ್ಕಾರ: ಡಿ.ಕೆ. ಶಿವಕುಮ
ಸಿಎಂ ಎಕ್ಸ್ ಪೋಸ್ಟ್


ಬೆಂಗಳೂರು, 20 ಅಕ್ಟೋಬರ್ (ಹಿ.ಸ.):

ಮಹಾನವಮಿ ಹಾಗೂ ಆಯುಧ ಪೂಜೆಯ ಅಂಗವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಆರ್. ಅಶೋಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ನಾಡಿನ ಜನತೆಗೆ ಶುಭಾಶಯ ಕೋರಿದ್ದಾರೆ.

ಕಾಯಕದ ಪರಿಕರಗಳ ಪೂಜೆಯೇ ನಾಡಿನ ಸಂಸ್ಕಾರ: ಡಿ.ಕೆ. ಶಿವಕುಮಾರ್

ಹೊಲದಲ್ಲಿ ಅನ್ನ ಬೆಳೆಯುವ ರೈತನ ನೇಗಿಲಿನಿಂದ ಹಿಡಿದು ಕಾರ್ಖಾನೆಯ ಯಂತ್ರಗಳು, ರಸ್ತೆಯಲ್ಲಿ ಸಂಚರಿಸುವ ವಾಹನಗಳು ಹಾಗೂ ನವಯುಗದ ಗಣಕಯಂತ್ರಗಳವರೆಗೆ ಪ್ರತಿಯೊಂದು ಸಾಧನವೂ ನಾಡಿನ ಪ್ರಗತಿಯ ಚಕ್ರವನ್ನು ಮುನ್ನಡೆಸುವ ಶಕ್ತಿಯಾಗಿದೆ. ನಂಬಿದ ಕಾಯಕವನ್ನು ಪ್ರಾಮಾಣಿಕವಾಗಿ ನಿರ್ವಹಿಸಿ, ದುಡಿಮೆಯ ಪರಿಕರಗಳನ್ನು ಪೂಜಿಸುವುದೇ ಈ ನೆಲದ ನಿಜವಾದ ಸಂಸ್ಕಾರ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ನಾಡಿನ ಸಮಸ್ತ ಅನ್ನದಾತರು, ಕಾರ್ಮಿಕರು, ಚಾಲಕರು, ಕುಶಲಕರ್ಮಿಗಳು, ಉದ್ಯಮಿಗಳು ಹಾಗೂ ಪರಿಶ್ರಮಿಗಳಿಗೆ ಆಯುಧ ಪೂಜೆಯ ಶುಭಾಶಯಗಳನ್ನು ಅವರು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.

ನಾಡಿನ ಪ್ರತಿ ಮನೆಯಲ್ಲೂ ಸುಖ, ಶಾಂತಿ ನೆಲೆಸಲಿ: ಆರ್. ಅಶೋಕ

ನಾಡಿನ ಸಮಸ್ತ ಜನತೆಗೆ ಮಹಾನವಮಿ ಹಾಗೂ ಆಯುಧ ಪೂಜೆಯ ಹಾರ್ದಿಕ ಶುಭಾಶಯಗಳನ್ನು ಪ್ರತಿಪಕ್ಷ ನಾಯಕ ಆರ್. ಅಶೋಕ ಕೋರಿದ್ದಾರೆ.

ಶಕ್ತಿ, ಭಕ್ತಿ ಮತ್ತು ವಿಜಯದ ಸಂಕೇತವಾದ ಈ ಪವಿತ್ರ ಸಂದರ್ಭದಲ್ಲಿ ನವದುರ್ಗೆಯರ ಆಶೀರ್ವಾದದಿಂದ ನಾಡಿನ ಪ್ರತಿಯೊಂದು ಮನೆಯಲ್ಲೂ ಸುಖ, ಶಾಂತಿ, ಆರೋಗ್ಯ ಹಾಗೂ ಸಮೃದ್ಧಿ ನೆಲೆಸಲಿ. ಎಲ್ಲರ ಬದುಕಿನಲ್ಲಿ ಹೊಸ ಉತ್ಸಾಹ, ನೆಮ್ಮದಿ ಮತ್ತು ಯಶಸ್ಸು ಮೂಡಿಬರಲಿ ಎಂದು ಅವರು ತಮ್ಮ ಸಂದೇಶದಲ್ಲಿ ಹಾರೈಸಿದ್ದಾರೆ.

ಕಾಯಕವೇ ಕೈಲಾಸ ಎಂಬ ತತ್ತ್ವಕ್ಕೆ ಗೌರವ ಸಲ್ಲಿಸೋಣ: ಬಿ.ವೈ. ವಿಜಯೇಂದ್ರ

ಶ್ರಮ, ವೃತ್ತಿ ಮತ್ತು ಜ್ಞಾನಕ್ಕೆ ಗೌರವ ಸಲ್ಲಿಸುವ ಪವಿತ್ರ ಆಯುಧ ಪೂಜೆಯ ಸಂದರ್ಭದಲ್ಲಿ ನಾಡಿನ ಸಮಸ್ತ ಜನತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಶುಭಾಶಯ ಕೋರಿದ್ದಾರೆ.

ದಿನನಿತ್ಯದ ಬದುಕು, ಜೀವನೋಪಾಯ ಹಾಗೂ ಪ್ರಗತಿಗೆ ಆಸರೆಯಾಗಿರುವ ಉಪಕರಣಗಳು ಮತ್ತು ಕಾರ್ಯಸಾಧನಗಳನ್ನು ದೈವಸ್ವರೂಪದಲ್ಲಿ ಪೂಜಿಸುವುದು ನಮ್ಮ ಶ್ರೇಷ್ಠ ಪರಂಪರೆಯಾಗಿದೆ. ಕಾಯಕವೇ ಕೈಲಾಸ ಎಂಬ ತತ್ತ್ವದಂತೆ ಶ್ರಮಿಕ ವರ್ಗದ ದುಡಿಮೆ ಹಾಗೂ ಸಕಲ ವೃತ್ತಿಪರರ ನಿಷ್ಠೆಗೆ ಈ ದಿನ ಗೌರವ ಸಲ್ಲಿಸೋಣ ಎಂದು ಅವರು ತಿಳಿಸಿದ್ದಾರೆ.

ನಾಡಿನ ಸಮಸ್ತ ಜನತೆಗೆ ಧನ-ಧಾನ್ಯ, ಐಶ್ವರ್ಯ ದೊರೆಯಲಿ ಹಾಗೂ ಪ್ರತಿಯೊಬ್ಬರ ಕಾಯಕದಲ್ಲೂ ನಿರಂತರ ವಿಜಯ ಲಭಿಸಲಿ ಎಂದು ವಿಜಯೇಂದ್ರ ಪ್ರಾರ್ಥಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande