





ಬಳ್ಳಾರಿ, 02 ಅಕ್ಟೋಬರ್ (ಹಿ.ಸ.)
ವೀರಶೈವ ವಿದ್ಯಾವರ್ಧಕ ಸಂಘದ ಹಾನಗಲ್ಲು ಶ್ರೀಕುಮಾರೇಶ್ವರ ಪಾಲಿಟೆಕ್ನಿಕ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ ಮಹಾತ್ಮಾ ಗಾಂಧಿ ಅವರ ಜಯಂತಿಯ ಅಂಗವಾಗಿ ಸಂಸ್ಥೆಯ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆಯ ವಿದ್ಯಾರ್ಥಿಗಳು `ಸ್ವಚ್ಛ ಭಾರತ್' ಅಧಿಯಾನದ ಅಡಿಯಲ್ಲಿ ಕಾಲೇಜಿನ ಪ್ರಾಂಗಣದಲ್ಲಿ ಸ್ವಚ್ಛತೆಯನ್ನು ನೆರವೇರಿಸಿದ್ದಾರೆ.
ಹಾನಗಲ್ಲು ಶ್ರೀಕುಮಾರೇಶ್ವರ ಪಾಲಿಟೆಕ್ನಿಕ್ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಬಿ. ಶ್ರೀಶೈಲಗೌಡ ಅವರು ಮಹಾತ್ಮಾಗಾಂಧೀಜಿ ಮತ್ತು ಲಾಲಬಹದ್ದೂರ್ ಶಾಸ್ತ್ರಿ ಅವರು ದೇಶಕ್ಕೆ ಸಲ್ಲಿಸಿದ ಸೇವೆ, ಸರಳತೆ, ಬದ್ಧತೆಗಳನ್ನು ವಿವರಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್