ಬಳ್ಳಾರಿ : 7561 ಮತಗಳ ಡಿಲೀಟ್ : ಬಿಜೆಪಿಯ ಶ್ರೀನಿವಾಸ್ ಮೋತ್ಕರ್ ಹಾಗೂ ಅಧಿಕಾರಿಗಳ ವಿರುದ್ಧ ದೂರು
ಬಳ್ಳಾರಿ, 02 ಅಕ್ಟೋಬರ್ (ಹಿ.ಸ.) ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ಸಮಗ್ರ ಮತದಾರ ಪಟ್ಟಿಯ ಪರಿಷ್ಕರಣೆಯ ಕರಡು ಮತದಾರರ ಪಟ್ಟಿಯಲ್ಲಿನ 7561 ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲು ಯತ್ನಿಸಿದ ಬಿಜೆಪಿಯ ಕಾರ್ಪೊರೇಟರ್, ಬಿಎಲ್ಎ ಶ್ರೀನಿವಾಸ್ ಮೋತ್ಕರ್ ಸೇರಿ ಅಧಿಕಾರಿಗಳ ವಿರುದ್ಧ ಬ್ರೂಸ್ಪೇ
ಬಳ್ಳಾರಿ : 7561 ಮತಗಳ ಡಿಲೀಟ್ : ಬಿಜೆಪಿಯ ಶ್ರೀನಿವಾಸ್ ಮೋತ್ಕರ್ ಹಾಗೂ ಅಧಿಕಾರಿಗಳ ವಿರುದ್ಧ ದೂರು

ಬಳ್ಳಾರಿ : 7561 ಮತಗಳ ಡಿಲೀಟ್ : ಬಿಜೆಪಿಯ ಶ್ರೀನಿವಾಸ್ ಮೋತ್ಕರ್ ಹಾಗೂ ಅಧಿಕಾರಿಗಳ ವಿರುದ್ಧ ದೂರು

ಬಳ್ಳಾರಿ : 7561 ಮತಗಳ ಡಿಲೀಟ್ : ಬಿಜೆಪಿಯ ಶ್ರೀನಿವಾಸ್ ಮೋತ್ಕರ್ ಹಾಗೂ ಅಧಿಕಾರಿಗಳ ವಿರುದ್ಧ ದೂರು

ಬಳ್ಳಾರಿ : 7561 ಮತಗಳ ಡಿಲೀಟ್ : ಬಿಜೆಪಿಯ ಶ್ರೀನಿವಾಸ್ ಮೋತ್ಕರ್ ಹಾಗೂ ಅಧಿಕಾರಿಗಳ ವಿರುದ್ಧ ದೂರು

ಬಳ್ಳಾರಿ : 7561 ಮತಗಳ ಡಿಲೀಟ್ : ಬಿಜೆಪಿಯ ಶ್ರೀನಿವಾಸ್ ಮೋತ್ಕರ್ ಹಾಗೂ ಅಧಿಕಾರಿಗಳ ವಿರುದ್ಧ ದೂರು

ಬಳ್ಳಾರಿ, 02 ಅಕ್ಟೋಬರ್ (ಹಿ.ಸ.)

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ಸಮಗ್ರ ಮತದಾರ ಪಟ್ಟಿಯ ಪರಿಷ್ಕರಣೆಯ ಕರಡು ಮತದಾರರ ಪಟ್ಟಿಯಲ್ಲಿನ 7561 ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲು ಯತ್ನಿಸಿದ ಬಿಜೆಪಿಯ ಕಾರ್ಪೊರೇಟರ್, ಬಿಎಲ್ಎ ಶ್ರೀನಿವಾಸ್ ಮೋತ್ಕರ್ ಸೇರಿ ಅಧಿಕಾರಿಗಳ ವಿರುದ್ಧ ಬ್ರೂಸ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಂಗ್ರೆಸ್ ಪಕ್ಷದ ಬಿಎಲ್ಓ ಆಗಿರುವ ಎಸ್. ಗೌತಮ್ ಅವರು ಬ್ರೂಸಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಶಾಸಕ ನಾರಾ ಭರತರೆಡ್ಡಿ ಅವರ ಸಮ್ಮುಖದಲ್ಲಿಯೇ ಠಾಣೆಯಲ್ಲಿ ದೂರು ದಾಖಲಾಗಿರುವುದು ವಿಶೇಷವಾಗಿದೆ.

ದೂರಿನಲ್ಲಿ ಮಹಾನಗರ ಪಾಲಿಕೆಯ ಅಸಿಸ್ಟೆಂಟ್ ಕಮೀಷನರ್ ನಂದೀಶ್, ಪಾಲಿಕೆಯ ಅಧಿಕಾರಿ ಬಿಎಲ್ಓ ಶ್ರೀಮತಿ ಸುಮಲತ, ಪಾಲಿಕೆಯ ಸಿಬ್ಬಂದಿಗಳಾದ ಶರಣಬಸವ ಮತ್ತು ಇನ್ನಿತರರ ಮೇಲೆ ಪ್ರಕರಣ ದಾಖಲಾಗಿದೆ.

ಬಿಜೆಪಿಯ ಬಿಎಲ್ಓ ಆಗಿರುವ ಶ್ರೀನಿವಾಸ ಮೋತ್ಕರ್ ಅವರು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಕರಡು ಮತದಾರರ ಪಟ್ಟಿಯ ಪೈಕಿ 7561 ಮತದಾರರ ಹೆಸರು ಡಿಲೀಟ್ ಮಾಡುವಂತೆ ಆರಂಭದಲ್ಲಿ ಚುನಾವಣಾಧಿಕಾರಿಗಳಿಗೆ ಅಕ್ರಮವಾಗಿ, ಕಾನೂನು ಬಾಹಿರವಾಗಿ ಫಾರಂ-7 ಸಲ್ಲಿಸಿ, ನಂತರ ಪ್ರತ್ಯೇಕ ದೂರು ಸಲ್ಲಿಸಿದ್ದರು. ದೂರಿನ ಜೊತೆಯಲ್ಲಿ ಮತದಾರರ ಪಟ್ಟಿಯಲ್ಲಿ ಬಹುತೇಕ ಅಲ್ಪಸಂಖ್ಯಾತರು ಹಾಗೂ ಹಿಂದುಳಿದ, ದಲಿತ ಸಮುದಾಯಗಳ ಮತದಾರರನ್ನೇ ಗುರಿಯಾಗಿಸಿಕೊಂಡಿರುವುದು ಸ್ಪಷ್ಟವಾಗಿದೆ.

ಈ ಕುರಿತು ಎಸ್. ಗೌತಮ್ ಅವರು ದೂರನ್ನು ಸಲ್ಲಿಸಲು ಬ್ರೂಸ್ಪೇಟೆ ಪೊಲೀಸ್ ಠಾಣೆಗೆ ಹೋದಾಗ ಪೊಲೀಸರು ದೂರು ಸ್ವೀಕರಿಸಲು ವಿಳಂಬ ಮಾಡಿದ ಕಾರಣ ಶಾಸಕ ನಾರಾ ಭರತರೆಡ್ಡಿ ಅವರು ಖುದ್ದಾಗಿ ಪೊಲೀಸ್ ಠಾಣೆಗೆ ಹೋಗಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ದೂರು ದಾಖಲಿಕೊಳ್ಳುವವ ತಡರಾತ್ರಿಯವರೆಗೂ ಅವರು ಠಾಣೆಯಲ್ಲಿಯೇ ಬೀಡುಬಿಟ್ಟಿದ್ದರು ಎಂದು ಹೇಳಲಾಗಿದೆ.

ಶಾಸಕ ನಾರಾ ಭರತರೆಡ್ಡಿ ಅವರು ಠಾಣೆಯಲ್ಲಿಯೇ ಬೀಡುಬಿಟ್ಟಿರುವ ವಿಷಯ ತಿಳಿದು ಹೆಚ್ಚುವರಿ ಎಸ್ಪಿ ನವೀನ್ ಕುಮಾರ್, ಡಿವೈಎಸ್ಪಿ ಸ್ಥಳಕ್ಕೆ ಬಂದು, ಸಿಪಿಐ ಮಹಾಂತೇಶ್ ಅವರಿಗೆ ತಕ್ಷಣವೇ ದೂರು ದಾಖಲಿಸಿಕೊಳ್ಳಲು ಆದೇಶ ನೀಡಿದರು. ಈ ಕುರಿತು ಎಫ್ಐಆರ್ ದಾಖಲಾದ ನಂತರ ಶಾಸಕರು ಮನೆಗೆ ಹೋದರು ಎಂದು ಠಾಣೆಯ ಮೂಲಗಳು ತಿಳಿಸಿವೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

 rajesh pande