
ನವದೆಹಲಿ, 19 ಅಕ್ಟೋಬರ್ (ಹಿ.ಸ.):
ಶಾರಧೀಯ ನವರಾತ್ರಿಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬೆಳಗ್ಗೆ ದುರ್ಗಾದೇವಿಯ ಎಂಟನೇ ರೂಪವಾದ ಮಹಾಗೌರಿಯನ್ನು ಸ್ಮರಿಸಿ, ದೇಶದ ಸಮಸ್ತ ಜನರ ಉಜ್ವಲ ಭವಿಷ್ಯಕ್ಕಾಗಿ ಪ್ರಾರ್ಥಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ತ್ಯಾಗ ಮತ್ತು ತಪಸ್ಸಿನ ದೇವತೆಯಾದ ಮಹಾಗೌರಿಯ ಆಶೀರ್ವಾದದಿಂದ ಎಲ್ಲರ ಭವಿಷ್ಯ ಉಜ್ವಲವಾಗಲಿ. ಪ್ರತಿಯೊಬ್ಬರೂ ಜೀವನದಲ್ಲಿ ಯಶಸ್ಸು ಮತ್ತು ಕೀರ್ತಿಯನ್ನು ಗಳಿಸಲಿ ಎಂದು ಹಾರೈಸಿದ್ದಾರೆ.
ಇನ್ನೊಂದು ಸಂದೇಶದಲ್ಲಿ ಪ್ರಧಾನಿ ಮೋದಿ ಅವರು ದುರ್ಗಾ ಸಪ್ತಶತಿಯ ದೇವೀ ಕವಚದಲ್ಲಿನ ಶ್ಲೋಕವನ್ನು ಹಂಚಿಕೊಂಡಿದ್ದಾರೆ.
ಶ್ಲೋಕದ ಅರ್ಥವೇನು?
ಭಕ್ತಿಯಿಂದ ದೇವಿಯನ್ನು ಸ್ಮರಿಸುವವರಿಗೆ ಉನ್ನತಿ ಮತ್ತು ಅಭಿವೃದ್ಧಿ ದೊರೆಯುತ್ತದೆ. ದೇವೇಶ್ವರಿಯಾದ ದೇವಿಯನ್ನು ಸ್ಮರಿಸುವವರನ್ನು ಆಕೆ ನಿಸ್ಸಂದೇಹವಾಗಿ ರಕ್ಷಿಸುತ್ತಾಳೆ ಎಂಬುದು ಈ ಶ್ಲೋಕದ ಅರ್ಥವಾಗಿದೆ.
ಸನಾತನ ಧರ್ಮದ ಪ್ರಸಿದ್ಧ ಗ್ರಂಥವಾದ ದುರ್ಗಾ ಸಪ್ತಶತಿಯ ದೇವೀ ಕವಚದಲ್ಲಿರುವ ಈ ಶ್ಲೋಕವು ದೇವಿಯ ಆರಾಧನೆ ಮತ್ತು ಆಕೆಯ ರಕ್ಷಣೆಯ ಮಹತ್ವವನ್ನು ಸಾರುತ್ತದೆ. ದೇವೀ ಕವಚವನ್ನು ಪಠಿಸುವುದರಿಂದ ಸಾಧಕರಿಗೆ ವಿವಿಧ ಸಂದರ್ಭಗಳಲ್ಲಿ ಎದುರಾಗುವ ನಕಾರಾತ್ಮಕ ಶಕ್ತಿಗಳು, ಭಯ, ದುಃಖ ಮತ್ತು ಸಂಕಷ್ಟಗಳಿಂದ ರಕ್ಷಣೆ ದೊರೆಯುತ್ತದೆ ಎಂಬ ನಂಬಿಕೆ ಹಿಂದಿನಿಂದಲೂ ಇದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.