ಭಾರತ ವೆಸ್ಟ್ ಇಂಡಿಸ್ ಪಂದ್ಯಕ್ಕೆ ಮಳೆ ಅಡ್ಡಿ : ಬೆಂಗಳೂರಲ್ಲಿ ಸುರಿಯುತ್ತಿದೆ ಧಾರಾಕಾರ ಮಳೆ
ಬೆಂಗಳೂರಲ್ಲಿ ಸುರಿಯುತ್ತಿದೆ ಧಾರಾಕಾರ ಮಳೆ
West Indies cricket match


ಬೆಂಗಳೂರು, 17 ಅಕ್ಟೋಬರ್ (ಹಿ.ಸ.):

ಭಾರತ ಹಾಗೂ ವೆಸ್ಟ್ ಇಂಡಿಸ್ ತಂಡಗಳ ನಡುವಿನ ಅಂತಿಮ ಟಿ20 ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ.

ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು, ಪಂದ್ಯ ಆರಂಭಕ್ಕೂ ಮೊದಲೇ ಸಿಲಿಕಾನ್ ಸಿಟಿಯಲ್ಲಿ ಧಾರಾಕಾರವಾಗಿ ಮಳೆ ಸುರಿಯಲು ಆರಂಭಿಸಿದೆ.

ವೆಸ್ಟ್ ಇಂಡಿಸ್ ವಿರುದ್ದ ಐದು ಟಿ20 ಪಂದ್ಯಗಳ ಪೈಕಿ ಭಾರತ ಹಾಗೂ ವೆಸ್ಟ್ ಇಂಡಿಸ್ ತಂಡಗಳು ತಲಾ 2 ಪಂದ್ಯಗಳನ್ನು ಜಯಿಸುವ ಮೂಲಕ ಸರಣಿಯಲ್ಲಿ 2-2ರ ಸಮಬಲ ಸಾಧಿಸಿಕೊಂಡಿವೆ. ಇಂದು ಬೆಂಗಳೂರಿನಲ್ಲಿ ನಿರ್ಣಾಯಕ ಪಂದ್ಯ ನಡೆಯಬೇಕಾಗಿದೆ. ಇಂದಿನ ಪಂದ್ಯವನ್ನು ಜಯಿಸುವ ತಂಡ ಸರಣಿಯನ್ನು ತನ್ನ ಕೈವಶ ಮಾಡಿಕೊಳ್ಳಲಿದೆ.

ಕಳೆದ ಎರಡು ದಿನಗಳಿಂದಲೂ ಬೆಂಗಳೂರಿನಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಆದರೆ ಇಂದು ಕೂಡ ಸಂಜೆಯ ಹೊತ್ತಲೇ ಮಳೆ ಆರಂಭಗೊಂಡಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಅಕ್ಟೋಬರ್ 22ರ ವರೆಗೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಾರೀ ಮಳೆಯಾಗುವ ಕುರಿತು ಎಚ್ಚರಿಸಿದೆ.

ಇಂದು ಸಂಜೆ 7.30ಕ್ಕೆ ಪಂದ್ಯ ಆರಂಭಗೊಳ್ಳಲಿದೆ. ಆದರೆ ಇಂದು ರಾತ್ರಿಯ ವೇಳೆಯಲ್ಲಿ ಭಾರೀ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಸೂಚನೆ ನೀಡಿದೆ. ಒಂದೊಮ್ಮೆ ಮಳೆ ಬಿಡುವು ಪಡೆದ್ರೆ ಮಾತ್ರವೇ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅತ್ಯಾಧುನಿಕ ಅಂಡರ್ಗ್ರೌಂಡ್ ಚರಂಡಿ ವ್ಯವಸ್ಥೆಯನ್ನು ಮಾಡಲಾಗಿದೆ. ಹೀಗಾಗಿ ಧಾರಾಕಾರ ಮಳೆ ಸುರಿದರೂ ಕೂಡ ಮಳೆ ಬಿಡುವು ಕೊಟ್ಟ ಕೇವಲ ಅರ್ಧ ಗಂಟೆಯಲ್ಲಿಯೇ ಪಂದ್ಯಾವಳಿಯನ್ನು ಆರಂಭಿಸೋದಕ್ಕೆ ಸಾಧ್ಯವಿದೆ. ಹೀಗಾಗಿ ಮಳೆಯ ನಡುವಲ್ಲೇ ಇಂದು ಬೆಂಗಳೂರಲ್ಲಿ ಪಂದ್ಯ ನಡೆಯುವ ಸಾಧ್ಯತೆಯಿದೆ.

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬರೋಬ್ಬರಿ ಎರಡು ವರ್ಷಗಳ ನಂತರ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆಯತ್ತಿದೆ. 2024ರಲ್ಲಿ ನ್ಯೂಜಿಲೆಂಡ್ ವಿರುದ್ದದ ಟೆಸ್ಟ್ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕೊನೆಯ ಪಂದ್ಯವಾಗಿತ್ತು. ಇದೀಗ ಟಿ20 ಪಂದ್ಯಕ್ಕೆ ಬೆಂಗಳೂರಿಗರ ನೆಚ್ಚಿನ ಕ್ರೀಡಾಂಗಣ ವೇದಿಕೆಯಾಗುತ್ತಿದೆ.

2023ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣ ಆಸ್ಟ್ರೇಲಿಯಾ ಹಾಗೂ ಅಪ್ಘಾನಿಸ್ತಾನ ತಂಡಗಳ ನಡುವಿನ ಟಿ20 ಪಂದ್ಯಕ್ಕೆ ವೇದಿಕೆಯಾಗಿತ್ತು. ಆದರೆ ಇಂದು ಭಾರತ ಹಾಗೂ ವೆಸ್ಟ್ ಇಂಡಿಸ್ ನಡುವೆ ಪಂದ್ಯ ನಡೆಯುತ್ತಿದೆ. ಆದರೆ ನಿರ್ಣಾಯಕ ಪಂದ್ಯ ಆರಂಭವಾಗುವ ಮೊದಲೇ ಬೆಂಗಳೂರಿನಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ.

ಭಾರತ ಸಂಭಾವ್ಯ XI: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್ ), ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ (ನಾಯಕ ), ತಿಲಕ್ ವರ್ಮಾ, ನಮನ್ ಧೀರ್, ನಿತೀಶ್ ರೆಡ್ಡಿ, ಅಕ್ಷರ್ ಪಟೇಲ್, ಕುಲದೀಪ್ ಯಾದವ್ ಅಥವಾ ರವಿ ಬಿಷ್ಣೋಯ್, ಪ್ರಿನ್ಸ್ ಯಾದವ್, ಮಯಾಂಕ್ ಯಾದವ್

ವೆಸ್ಟ್ ಇಂಡಿಸ್ ಸಂಭಾವ್ಯ XI: ಶಾಯ್ ಹೋಪ್ ( ನಾಯಕ, ವಿಕೀ) ), ಜ್ಯುವೆಲ್ ಆಂಡ್ರ್ಯೂ, ಶಿಮ್ರಾನ್ ಹೆಟ್ಮೆಯರ್, ರೋವ್ಮನ್ ಪೊವೆಲ್, ಶೆರ್ಫೇನ್ ರುದರ್ಫೋರ್ಡ್, ರೊಮಾರಿಯೋ ಶೆಫರ್ಡ್, ಕೀಮೋ ಪಾಲ್, ಶಮರ್ ಸ್ಪ್ರಿಂಗರ್, ರೋಸ್ಟನ್ ಚೇಸ್, ಗುಡಾಕೇಶ್ ಮೋಟಿ, ಶಮರ್ ಜೋಸೆಫ್ ಅಥವಾ ಮ್ಯಾಥ್ಯೂ ಫೋರ್ಡ್

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande