ಏಷ್ಯನ್ ಪ್ಯಾರಾ ಗೇಮ್ಸ್ಗೆ ಬಳ್ಳಾರಿಯ ಈಜುಪಟು ಗೋಪಿಚಂದ್ ಲಿಂಗುಟ್ಲ ಆಯ್ಕೆ
ಬಳ್ಳಾರಿ, 17 ಅಕ್ಟೋಬರ್ (ಹಿ.ಸ.) ಜಪಾನ್ನ ಐಚಿ-ನಾಗೋಯಾದಲ್ಲಿ ಅಕ್ಟೋಬರ್ 18 ರಿಂದ 24 ರವರೆಗೆ ಆಯೋಜಿಸಲಾಗಿರುವ 5ನೇ ಏಷ್ಯನ್ ಪ್ಯಾರಾ ಗೇಮ್ಸ್–2026ರಲ್ಲಿ ಭಾರತವನ್ನು ಪ್ರತಿನಿಧಿಸಲು ಬಳ್ಳಾರಿ ಜಿಲ್ಲೆಯ ಪ್ಯಾರಾ ಈಜುಪಟು ಗೋಪಿಚಂದ್ ಲಿಂಗುಟ್ಲ ಆಯ್ಕೆಯಾಗಿದ್ದಾರೆ. ಅಂತಾರಾಷ್ಟಿಯ ಮಟ್ಟದಲ್ಲಿ ದೇಶದ ಕೀರ
ಏಷ್ಯನ್ ಪ್ಯಾರಾ ಗೇಮ್ಸ್ಗೆ ಬಳ್ಳಾರಿಯ ಈಜುಪಟು ಗೋಪಿಚಂದ್ ಲಿಂಗುಟ್ಲ ಆಯ್ಕೆ


ಏಷ್ಯನ್ ಪ್ಯಾರಾ ಗೇಮ್ಸ್ಗೆ ಬಳ್ಳಾರಿಯ ಈಜುಪಟು ಗೋಪಿಚಂದ್ ಲಿಂಗುಟ್ಲ ಆಯ್ಕೆ


ಬಳ್ಳಾರಿ, 17 ಅಕ್ಟೋಬರ್ (ಹಿ.ಸ.)

ಜಪಾನ್ನ ಐಚಿ-ನಾಗೋಯಾದಲ್ಲಿ ಅಕ್ಟೋಬರ್ 18 ರಿಂದ 24 ರವರೆಗೆ ಆಯೋಜಿಸಲಾಗಿರುವ 5ನೇ ಏಷ್ಯನ್ ಪ್ಯಾರಾ ಗೇಮ್ಸ್–2026ರಲ್ಲಿ ಭಾರತವನ್ನು ಪ್ರತಿನಿಧಿಸಲು ಬಳ್ಳಾರಿ ಜಿಲ್ಲೆಯ ಪ್ಯಾರಾ ಈಜುಪಟು ಗೋಪಿಚಂದ್ ಲಿಂಗುಟ್ಲ ಆಯ್ಕೆಯಾಗಿದ್ದಾರೆ.

ಅಂತಾರಾಷ್ಟಿಯ ಮಟ್ಟದಲ್ಲಿ ದೇಶದ ಕೀರ್ತಿಯನ್ನು ಹೆಚ್ಚಿಸುವ ಗುರಿ ಹೊಂದಿರುವ ಗೋಪಿಚಂದ್, ಮುಂಬರುವ ಕ್ರೀಡಾಕೂಟದಲ್ಲಿ 400 ಮೀಟರ್ ಫ್ರೀಸ್ಟೆöÊಲ್ ಹಾಗೂ 100 ಮೀಟರ್ ಬ್ಯಾಕ್sಸ್ಟೊಕ್ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.

ಉಚಿತ ತರಬೇತಿಯಿಂದ ಅಂತಾರಾಷ್ಟ್ರೀಯ ಮಟ್ಟದ ಸಾಧನೆ:*

ಗೋಪಿಚಂದ್ ಅವರು 2016ರಲ್ಲಿ ಬಳ್ಳಾರಿಯ ಸರ್ಕಾರಿ ಈಜುಕೊಳದಲ್ಲಿ ತರಬೇತುದಾರ ಲಕ್ಕ ರಜಿನಿ ಅವರ ಮಾರ್ಗದರ್ಶನದಲ್ಲಿ ಉಚಿತವಾಗಿ ಈಜು ತರಬೇತಿಯನ್ನು ಆರಂಭಿಸಿದರು. 2017 ರಿಂದ ರಾಜ್ಯ, ರಾಷ್ಟ ಹಾಗೂ ಅಂತಾರಾಷ್ಟ್ರೀಯ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಗಮನಾರ್ಹ ಸಾಧನೆ ಮಾಡಿರುವ ಇವರು, ಇದುವರೆಗೆ ಒಟ್ಟು 60 ಚಿನ್ನ ಹಾಗೂ 13 ಬೆಳ್ಳಿ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

2020 ರಿಂದ ಬೆಂಗಳೂರಿನ ‘ಜೀ ಅಕಾಡೆಮಿ’ಯಲ್ಲಿ ಪ್ಯಾರಾ ಈಜುಪಟು ಹಾಗೂ ಅರ್ಜುನ ಪ್ರಶಸ್ತಿ ಪುರಸ್ಕೃತ ಶರತ್ ಗಾಯಕ್ವಾಡ್ ಅವರ ಮಾರ್ಗದರ್ಶನದಲ್ಲಿ ಉನ್ನತ ತರಬೇತಿ ಪಡೆಯುತ್ತಿದ್ದಾರೆ.

ಇತ್ತೀಚೆಗೆ 2026ರ ಫೆಬ್ರವರಿಯಲ್ಲಿ ಆಸ್ಟೆಲಿಯಾದ ಗೋಲ್ಡ್ ಕೋಸ್ಟ್ನಲ್ಲಿ ನಡೆದ ‘ವಿಶ್ವ ಪ್ಯಾರಾ ಈಜು ಸರಣಿ’ ಸ್ಪರ್ಧೆಯ 4*100 ಮೀಟರ್ ಫ್ರೀಸ್ಟೆ ರಿಲೇ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿ ದೇಶಕ್ಕೆ ಹೆಮ್ಮೆ ತಂದಿದ್ದರು.

ಅ0ತರಾಷ್ಟಿಯ ಅನುಭವ:*

ಗೋಪಿಚಂದ್ ಲಿಂಗುಟ್ಲ ಅವರು ಈ ಹಿಂದೆಯೂ ಹಲವಾರು ಪ್ರಮುಖ ಜಾಗತಿಕ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಅನುಭವ ಗಳಿಸಿದ್ದಾರೆ.

2021: ಏಷ್ಯನ್ ಯೂತ್ ಪ್ಯಾರಾ ಗೇಮ್ಸ್ – ಬಹ್ರೇನ್

2022: ಓಪನ್ ಇಂಟರ್ನ್ಯಾಷ್ಯನಲ್ ಪ್ಯಾರಾ ಸ್ವಿಮ್ಮಿಂಗ್ – ಕೈರೋ, ಈಜಿಪ್ಟ್

2023: ಏಷ್ಯನ್ ಪ್ಯಾರಾ ಗೇಮ್ಸ್ – ಹ್ಯಾಂಗ್ಝೌ, ಚೀನಾ

2023: ಏಷ್ಯನ್ ಯೂತ್ ಪ್ಯಾರಾ ಸ್ಪೋರ್ಟ್ಸ್ ಕ್ಯಾಂಪ್ – ದಕ್ಷಿಣ ಕೊರಿಯಾ

2025: ವರ್ಲ್ಡ್ ಪ್ಯಾರಾ ಸ್ವಿಮ್ಮಿಂಗ್ ಸೀರೀಸ್ – ಬಾರ್ಸಿಲೋನಾ, ಸ್ಪೇನ್

2026: ವರ್ಲ್ಡ್ ಪ್ಯಾರಾ ಸ್ವಿಮ್ಮಿಂಗ್ ಸೀರೀಸ್ – ಗೋಲ್ಡ್ ಕೋಸ್ಟ್, ಆಸ್ಟೆಲಿಯಾ.

ಕಠಿಣ ಪರಿಶ್ರಮ, ನಿರಂತರ ಅಭ್ಯಾಸ ಹಾಗೂ ಆತ್ಮವಿಶ್ವಾಸದಿಂದ ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದಿರುವ ಗೋಪಿಚಂದ್ ಅವರ ಸಾಧನೆ ಯುವ ಕ್ರೀಡಾಪಟುಗಳಿಗೆ ಮಾದರಿಯಾಗಿದೆ.

ಇವರ ಸಾಧನೆಗೆ ಜಿಲ್ಲಾಡಳಿತ ಸೇರಿದಂತೆ ಜಿಲ್ಲೆಯ ಗಣ್ಯರು ಹಾಗೂ ಕ್ರೀಡಾಭಿಮಾನಿಗಳು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಗೋಪಿಚಂದ್ ಅತ್ಯುತ್ತಮ ಪ್ರದರ್ಶನ ನೀಡಿ, ಪದಕಗಳನ್ನು ಗೆದ್ದು ಭಾರತದ ಕೀರ್ತಿ ಪತಾಕೆಯನ್ನು ಹಾರಿಸಲಿ ಎಂದು ಶುಭ ಹಾರೈಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande