(ತಿದ್ದುಪಡಿ)ಆರು ತಿಂಗಳವರೆಗಿನ ಶಿಶು ಆಹಾರದಲ್ಲಿ ಸಕ್ಕರೆ ಸೇರ್ಪಡೆ ನಿಷೇಧಕ್ಕೆ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ ಪ್ರಸ್ತಾವ
ನವದೆಹಲಿ, 17 ಅಕ್ಟೋಬರ್ (ಹಿ.ಸ.): ಶಿಶುಗಳ ಪೌಷ್ಟಿಕಾಂಶ ಸುರಕ್ಷತೆಯನ್ನು ಬಲಪಡಿಸುವ ಉದ್ದೇಶದಿಂದ, ಆರು ತಿಂಗಳವರೆಗಿನ ಶಿಶುಗಳಿಗೆ ನೀಡುವ ಆಹಾರ ಉತ್ಪನ್ನಗಳಲ್ಲಿ ಸುಕ್ರೋಸ್ ಮತ್ತು ಫ್ರಕ್ಟೋಸ್ ಸೇರಿಸುವುದನ್ನು ನಿಷೇಧಿಸಲು ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ ಪ್ರಸ್ತಾವಿಸಿದೆ.
भारतीय खाद्य सुरक्षा एवं मानक प्राधिकरण  के शिशुओं के जारी दिशा-निर्देश का चित्र


ನವದೆಹಲಿ, 17 ಅಕ್ಟೋಬರ್ (ಹಿ.ಸ.):

ಶಿಶುಗಳ ಪೌಷ್ಟಿಕಾಂಶ ಸುರಕ್ಷತೆಯನ್ನು ಬಲಪಡಿಸುವ ಉದ್ದೇಶದಿಂದ, ಆರು ತಿಂಗಳವರೆಗಿನ ಶಿಶುಗಳಿಗೆ ನೀಡುವ ಆಹಾರ ಉತ್ಪನ್ನಗಳಲ್ಲಿ ಸುಕ್ರೋಸ್ ಮತ್ತು ಫ್ರಕ್ಟೋಸ್ ಸೇರಿಸುವುದನ್ನು ನಿಷೇಧಿಸಲು ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ ಪ್ರಸ್ತಾವಿಸಿದೆ.

ಈ ಕುರಿತು ಶನಿವಾರ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಾಧಿಕಾರ, ಆರು ತಿಂಗಳವರೆಗಿನ ಶಿಶುಗಳ ಆಹಾರ ಉತ್ಪನ್ನಗಳಲ್ಲಿ ಸುಕ್ರೋಸ್ ಮತ್ತು ಫ್ರಕ್ಟೋಸ್ ಸೇರ್ಪಡೆಗೆ ನಿರ್ಬಂಧ ವಿಧಿಸುವ ಮೂಲಕ ಶಿಶು ಪೌಷ್ಟಿಕಾಂಶದ ಮಾನದಂಡಗಳನ್ನು ಮತ್ತಷ್ಟು ಬಲಪಡಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದೆ.

ನಿಯಮಗಳ ತಿದ್ದುಪಡಿಗೆ ಕರಡು ಪ್ರಕಟ

ಆಹಾರ ಸುರಕ್ಷತೆ ಮತ್ತು ಮಾನದಂಡಗಳ (ಶಿಶು ಪೌಷ್ಟಿಕಾಂಶಕ್ಕಾಗಿ ಆಹಾರ ಪದಾರ್ಥಗಳು) ನಿಯಮಗಳು, 2020ಕ್ಕೆ ತಿದ್ದುಪಡಿ ತರುವ ಕರಡನ್ನು ಪ್ರಾಧಿಕಾರ ಪ್ರಕಟಿಸಿದೆ. ಇದರ ಪ್ರಕಾರ, ಆರು ತಿಂಗಳವರೆಗಿನ ಶಿಶುಗಳಿಗಾಗಿ ತಯಾರಿಸುವ ಆಹಾರ ಉತ್ಪನ್ನಗಳಲ್ಲಿ ಸುಕ್ರೋಸ್ ಮತ್ತು ಫ್ರಕ್ಟೋಸ್ ಸೇರಿಸುವುದನ್ನು ನಿಷೇಧಿಸಲು ಪ್ರಸ್ತಾವಿಸಲಾಗಿದೆ.

ಶಿಶುಗಳು ಜೀವನದ ಆರಂಭಿಕ ಹಂತದಲ್ಲಿಯೇ ಹೆಚ್ಚುವರಿ ಸಕ್ಕರೆಗೆ ಒಡ್ಡಿಕೊಳ್ಳುವುದನ್ನು ತಡೆಯುವುದು ಈ ಪ್ರಸ್ತಾವಿತ ತಿದ್ದುಪಡಿಯ ಮುಖ್ಯ ಉದ್ದೇಶವಾಗಿದೆ. ಮಕ್ಕಳ ಆರೋಗ್ಯವನ್ನು ರಕ್ಷಿಸುವುದು ಮತ್ತು ಬಾಲ್ಯದಲ್ಲಿನ ಸ್ಥೂಲಕಾಯ ಸಮಸ್ಯೆಯನ್ನು ತಡೆಗಟ್ಟುವುದು ಈ ಕ್ರಮದ ಗುರಿಯಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.

ಅಸ್ತಿತ್ವದಲ್ಲಿರುವ ನಿಯಮಗಳ ಬಲವರ್ಧನೆ

ಭಾರತದ ಅಧಿಕೃತ ರಾಜಪತ್ರದಲ್ಲಿ ಅಕ್ಟೋಬರ್ 16ರಂದು ಪ್ರಕಟಿಸಲಾದ ಆಹಾರ ಸುರಕ್ಷತೆ ಮತ್ತು ಮಾನದಂಡಗಳ (ಶಿಶು ಪೌಷ್ಟಿಕಾಂಶಕ್ಕಾಗಿ ಆಹಾರ ಪದಾರ್ಥಗಳು) ತಿದ್ದುಪಡಿ ನಿಯಮಗಳು, 2026ರ ಕರಡು, ಈಗಿರುವ ನಿಯಂತ್ರಣ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಿದೆ.

ಪ್ರಸ್ತುತ ನಿಯಮಗಳ ಅಡಿಯಲ್ಲಿ ಜನನದಿಂದ 24 ತಿಂಗಳವರೆಗಿನ ಮಕ್ಕಳಿಗಾಗಿ ತಯಾರಿಸುವ ವಿವಿಧ ವರ್ಗಗಳ ಶಿಶು ಆಹಾರ ಉತ್ಪನ್ನಗಳ ಪೌಷ್ಟಿಕಾಂಶ ಸಂಯೋಜನೆ, ಗುಣಮಟ್ಟ ಮತ್ತು ಸುರಕ್ಷತೆಗೆ ಸಂಬಂಧಿಸಿದ ಮಾನದಂಡಗಳನ್ನು ನಿಗದಿಪಡಿಸಲಾಗಿದೆ.

ಈಗಿರುವ ನಿಯಮಗಳ ಪ್ರಕಾರ, ಲ್ಯಾಕ್ಟೋಸ್ ಮತ್ತು ಗ್ಲೂಕೋಸ್ ಪಾಲಿಮರ್ಗಳನ್ನು ಕಾರ್ಬೊಹೈಡ್ರೇಟ್ಗಳ ಆದ್ಯತೆಯ ಮೂಲಗಳೆಂದು ಪರಿಗಣಿಸಲಾಗಿದೆ. ಸುಕ್ರೋಸ್ ಅಥವಾ ಫ್ರಕ್ಟೋಸ್ ಅನ್ನು ಕಾರ್ಬೊಹೈಡ್ರೇಟ್ನ ಮೂಲವಾಗಿ ಬಳಸುವ ಅಗತ್ಯವಿದ್ದಾಗ ಮಾತ್ರ, ನಿಗದಿತ ಮಿತಿಗಳಿಗೆ ಒಳಪಟ್ಟು ಸೇರಿಸಲು ಅವಕಾಶವಿದೆ.

ಪ್ರಾಧಿಕಾರದ ಪ್ರಸ್ತಾವಿತ ತಿದ್ದುಪಡಿ ಜಾರಿಗೆ ಬಂದಲ್ಲಿ, ಆರು ತಿಂಗಳವರೆಗಿನ ಶಿಶುಗಳ ಆಹಾರ ಉತ್ಪನ್ನಗಳಲ್ಲಿ ಈ ಎರಡು ಸಕ್ಕರೆಗಳ ಸೇರ್ಪಡೆಗೆ ನಿಷೇಧ ಜಾರಿಯಾಗಲಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande