

ಬಳ್ಳಾರಿ, 17 ಅಕ್ಟೋಬರ್ (ಹಿ.ಸ.)
ಬಳ್ಳಾರಿ ನಗರದ ಕಪ್ಪಗಲ್ಲು ರಸ್ತೆಯ ಎಸ್.ಆರ್. ಲೇಔಟ್ನ ಜಿ. ಮಲ್ಲಯ್ಯ ಅವರ ಮನೆಯಿಂದ 15 ಕ್ವಿಂಟಾಲ್ ಅಕ್ಕಿ, 50 ಕೆ.ಜಿ ಬೇಳೆ ಹಾಗೂ 53 ಇಂಚಿನ ಟಿವಿ ಸೇರಿ ಒಟ್ಟು 1,37,000/- ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ಸುಮನ್ ಡಿ.ಪೆನ್ನೇಕರ್ ಅವರು ಮಾಹಿತಿ ನೀಡಿದ್ದು, ಬಂಧಿತ ಆರೋಪಿಯು ಬಳ್ಳಾರಿಯ ರೂಪನಗುಡಿ ರಸ್ತೆಯ ನಿವಾಸಿ, ಲಾರಿ ಚಾಲಕ ಎನ್. ರಾಜೇಶ ನಾಯ್ಕ್ @ ರಾಜೇಶ, (22). ಆರೋಪಿಯಿಂದ ದ್ವಿಚಕ್ರ ವಾಹನ, 12 ಕ್ವಿಂಟಾಲ್ ಅಕ್ಕಿ, 53 ಇಂಚಿನ ಟಿವಿ ಸೇರಿ ಒಟ್ಟು 2,98,000/- ರೂಪಾಯಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯ ಜೊತೆಯಲ್ಲಿದ್ದ ಮೂರು ಆರೋಪಿಗಳ ಬಂಧನಕ್ಕಾಗಿ ಪೊಲೀಸರು ತಂಡಗಳನ್ನು ರಚಿಸಿದ್ದು, ಶೀಘ್ರದಲ್ಲೇ ಮೂವರನ್ನೂ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಗಾಂಧಿನಗರ ಮತ್ತು ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್