
ಬಳ್ಳಾರಿ, 16 ಅಕ್ಟೋಬರ್ (ಹಿ.ಸ.)
ಬಳ್ಳಾರಿ ತಾಲೂಕಿನ ವೇಣಿವೀರಾಪುರ ಗ್ರಾಮದ ವ್ಯಾಪ್ತಿಯಲ್ಲಿ ಮೆ.ಹೊತ್ತೂರ್ ಇಸ್ಪಾತ್ ಪ್ರೆವೇಟ್ ಲಿಮಿಟೆಡ್ ವತಿಯಿಂದ ಸ್ಥಾಪಿಸಲು ಉದ್ದೇಶಿಸಲಾಗಿರುವ ‘ವೆಟ್ ಮಿನರಲ್ ಬೆನಿಫಿಶಿಯೇಷನ್' ಘಟಕಕ್ಕೆ ಸಂಬ0ಧಿಸಿದ0ತೆ ಕರೆಯಲಾಗಿದ್ದ ಪರಿಸರ ಸಾರ್ವಜನಿಕ ಆಲಿಕೆ ಸಭೆಯನ್ನು ನವೆಂಬರ್ 18ಕ್ಕೆ ಮುಂದೂಡಲಾಗಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳು ತಿಳಿಸಿದ್ದಾರೆ.
ಮೆ.ಹೊತ್ತೂರ್ ಇಸ್ಪಾತ್ ಪ್ರೆöÊವೇಟ್ ಲಿಮಿಟೆಡ್ ಕಂಪನಿಯು ವೇಣಿವೀರಾಪುರ ಗ್ರಾಮದ ಸರ್ವೆ ನಂ. 287/ಎ, 287/ಬಿ, 289/1, 289/2, 290/1, 290/2, 290/3 ಮತ್ತು 290/4 ರಲ್ಲಿ ಒಟ್ಟು 34.50 ಎಕರೆ ಭೂಮಿಯಲ್ಲಿ ವಾರ್ಷಿಕ 1.0 ಮಿಲಿಯನ್ ಮೆಟ್ರಿಕ್ ಟನ್ ಉತ್ಪಾದನಾ ಸಾಮರ್ಥ್ಯದ ಘಟಕ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಿದೆ.
ಈ ಯೋಜನೆಯ ಕುರಿತು ಈ ಹಿಂದೆ ಅಕ್ಟೋಬರ್ 31 ರಂದು ಯೋಜನಾ ಸ್ಥಳದಲ್ಲಿ ಪರಿಸರ ಸಾರ್ವಜನಿಕ ಆಲಿಕೆ ಸಭೆಯನ್ನು ಆಯೋಜಿಸಲಾಗಿತ್ತು. ಆದರೆ ಪ್ರಸ್ತುತ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ, ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಸಭೆಯನ್ನು ಮುಂದೂಡಲಾಗಿದೆ.
ಮರು ನಿಗದಿಪಡಿಸಲಾದ ಸಭೆಯು ನವೆಂಬರ್ 18 ರಂದು ಬೆಳಗ್ಗೆ 11 ಗಂಟೆಗೆ ವೇಣಿವೀರಾಪುರ ಗ್ರಾಮದ ಯೋಜನಾ ಸ್ಥಳದಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್