ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಪುರುಷ ಬಂದಿಗಳಿಗೆ ಹೊಲಿಗೆ ತರಬೇತಿ
ಬಳ್ಳಾರಿ, 16 ಅಕ್ಟೋಬರ್ (ಹಿ.ಸ.) ಕೇಂದ್ರ ಕಾರಾಗೃಹ ಆವರಣದಲ್ಲಿ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ಸಹಯೋಗದೊಂದಿಗೆ ಪುರುಷ ಬಂದಿಗಳಿಗೆ ಆಯೋಜಿಸಲಾಗಿದ್ದ 30 ದಿನಗಳ ಉಚಿತ ಟೈಲರಿಂಗ್ (ಹೊಲಿಗೆ) ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭವು ನೆರವೇರಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿ
ಬಳ್ಳಾರಿ ಕೇಂದ್ರ ಕಾರಾಗೃಹ : ಪುರುಷ ಬಂದಿಗಳಿಗೆ ಹೊಲಿಗೆ ತರಬೇತಿ


ಬಳ್ಳಾರಿ ಕೇಂದ್ರ ಕಾರಾಗೃಹ : ಪುರುಷ ಬಂದಿಗಳಿಗೆ ಹೊಲಿಗೆ ತರಬೇತಿ


ಬಳ್ಳಾರಿ ಕೇಂದ್ರ ಕಾರಾಗೃಹ : ಪುರುಷ ಬಂದಿಗಳಿಗೆ ಹೊಲಿಗೆ ತರಬೇತಿ


ಬಳ್ಳಾರಿ ಕೇಂದ್ರ ಕಾರಾಗೃಹ : ಪುರುಷ ಬಂದಿಗಳಿಗೆ ಹೊಲಿಗೆ ತರಬೇತಿ


ಬಳ್ಳಾರಿ, 16 ಅಕ್ಟೋಬರ್ (ಹಿ.ಸ.)

ಕೇಂದ್ರ ಕಾರಾಗೃಹ ಆವರಣದಲ್ಲಿ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ಸಹಯೋಗದೊಂದಿಗೆ ಪುರುಷ ಬಂದಿಗಳಿಗೆ ಆಯೋಜಿಸಲಾಗಿದ್ದ 30 ದಿನಗಳ ಉಚಿತ ಟೈಲರಿಂಗ್ (ಹೊಲಿಗೆ) ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭವು ನೆರವೇರಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಕೆನರಾ ಬ್ಯಾಂಕ್ನ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾಪ್ರಬಂಧಕ ಅರುಣ್ ಕುಮಾರ್ ಅವರು, ಶಿಬಿರಾರ್ಥಿಗಳು ಅತ್ಯಂತ ಆಸಕ್ತಿಯಿಂದ ತರಬೇತಿ ಪಡೆದು ಕೇವಲ ಒಂದು ತಿಂಗಳ ಅವಧಿಯಲ್ಲಿ ಜೀನ್ಸ್ ಪ್ಯಾಂಟ್ ಹೊಲೆಯುವುದನ್ನು ಕಲಿತಿರುವುದು ಶ್ಲಾಘನೀಯ. ಮಾನವ ಸಂಪನ್ಮೂಲವು ವ್ಯರ್ಥವಾಗದೆ, ಸಮಾಜದ ಮುಖ್ಯವಾಹಿನಿಗೆ ಬಂದ ನಂತರ ಈ ಕೌಶಲ್ಯವನ್ನು ಜೀವನ ನಿರ್ವಹಣೆಗೆ ಅಳವಡಿಸಿಕೊಂಡು ಆರ್ಥಿಕವಾಗಿ ಸಬಲರಾಗಲು ಈ ತರಬೇತಿ ನೆರವಾಗಲಿದೆ ಎಂದು ತಿಳಿಸಿದರು.

ಬಳ್ಳಾರಿ ಕೇಂದ್ರ ಕಾರಾಗೃಹದ ಅಧೀಕ್ಷಕ ವಿ. ಕೃಷ್ಣಮೂರ್ತಿ ಅವರು ಮಾತನಾಡಿ, ಬಂದಿಗಳಿಗೆ ಇಂತಹ ಸ್ವ-ಉದ್ಯೋಗ ತರಬೇತಿಗಳನ್ನು ನೀಡುವುದರಿಂದ ಕಾರಾಗೃಹದಲ್ಲಿ ಜೀನ್ಸ್ ಗಾರ್ಮೆಂಟ್ ಘಟಕವನ್ನು ಪ್ರಾರಂಭಿಸಿ ಉದ್ಯೋಗ ಕಲ್ಪಿಸಲು ಸಹಕಾರಿಯಾಗುತ್ತದೆ. ಅಲ್ಲದೆ, ಬಿಡುಗಡೆಯ ನಂತರ ಸ್ವಂತ ಉದ್ಯೋಗ ಮಾಡಿಕೊಂಡು ಗೌರವಯುತ ಹಾಗೂ ಸ್ವಾಭಿಮಾನದ ಜೀವನ ನಡೆಸಲು ಇದು ದಾರಿದೀಪವಾಗಲಿದೆ ಎಂದರು. ಜೊತೆಗೆ, ಇಂತಹ ಉಪಯುಕ್ತ ತರಬೇತಿ ನೀಡಿದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.

ಕೆನರಾ ಬ್ಯಾಂಕ್ನ ಜಿಲ್ಲಾ ಲೀಡ್ ವ್ಯವಸ್ಥಾಪಕ ಗಿರೀಶ್ ವಿ. ಕುಲಕರ್ಣಿ ಅವರು ವಿವಿಧ ಬ್ಯಾಂಕುಗಳಲ್ಲಿ ಲಭ್ಯವಿರುವ ಸಾಲ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ತರಬೇತಿ ಪೂರ್ಣಗೊಳಿಸಿದ 25 ಜನ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ಸಮಾರಂಭದಲ್ಲಿ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ವಿನಯ್ ಕುಮಾರ್ ಬಿ. ಕೊಳ್ಳೂರುಮಠ್, ಕೇಂದ್ರ ಕಾರಾಗೃಹದ ಸಹಾಯಕ ಅಧೀಕ್ಷಕ ಟಿ. ಬಿ. ಭಜಂತ್ರಿ, ಜೈಲರ್ ಪ್ರಕಾಶ್ ಶಿಂಧೆ, ತರಬೇತಿಯ ಸಂಪನ್ಮೂಲ ವ್ಯಕ್ತಿ ಅಕ್ಬರ್ ಬಾಷಾ ಹಾಗೂ ಜಡೆಪ್ಪ ಜಿ., ಶೈಲಜಾ, ಸಿದ್ದಲಿಂಗಮ್ಮ, ಸಂತೋಷ್ ಕುಮಾರ್, ಪರಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande