ಕೃಷಿ ಉದ್ಯಮಗಳಲ್ಲಿ ಮಹಿಳೆಯರ ಪಾತ್ರ ಪ್ರಮುಖ: ಡಾ. ರಮೇಶ ಎಂ.ಎನ್
ಬಳ್ಳಾರಿ, 16 ಅಕ್ಟೋಬರ್ (ಹಿ.ಸ.) ಮನೆ ನಿರ್ವಹಣೆ, ಕೃಷಿ ಚಟುವಟಿಕೆಗಳು ಹಾಗೂ ಕೃಷಿ ಉದ್ಯಮಗಳಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ ಎಂದು ಐಸಿಎಆರ್ ನ ಹಿರಿಯ ವಿಜ್ಞಾನಿ (ಅರಣ್ಯಶಾಸ್ತ) ಡಾ. ರಮೇಶ ಎಂ.ಎನ್. ಅವರು ಹೇಳಿದರು. ಐಸಿಎಆರ್-ಭಾರತೀಯ ಮಣ್ಣು ಮತ್ತು ಜಲ ಸಂರಕ್ಷಣಾ ಸಂಸ್ಥೆ, ಸಂಶೋಧನಾ ಕೇಂದ್ರದ
Role of women in agricultural industries important


Role of women in agricultural industries important


Role of women in agricultural industries important


Role of women in agricultural industries important


ಬಳ್ಳಾರಿ, 16 ಅಕ್ಟೋಬರ್ (ಹಿ.ಸ.)

ಮನೆ ನಿರ್ವಹಣೆ, ಕೃಷಿ ಚಟುವಟಿಕೆಗಳು ಹಾಗೂ ಕೃಷಿ ಉದ್ಯಮಗಳಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ ಎಂದು ಐಸಿಎಆರ್ ನ ಹಿರಿಯ ವಿಜ್ಞಾನಿ (ಅರಣ್ಯಶಾಸ್ತ) ಡಾ. ರಮೇಶ ಎಂ.ಎನ್. ಅವರು ಹೇಳಿದರು.

ಐಸಿಎಆರ್-ಭಾರತೀಯ ಮಣ್ಣು ಮತ್ತು ಜಲ ಸಂರಕ್ಷಣಾ ಸಂಸ್ಥೆ, ಸಂಶೋಧನಾ ಕೇಂದ್ರದ ವತಿಯಿಂದ, ಟಿಎಸ್ಪಿ (ಬುಡಕಟ್ಟು ಉಪ ಯೋಜನೆ) ಅಡಿಯಲ್ಲಿ ದತ್ತು ಪಡೆದ ಬಳ್ಳಾರಿ ತಾಲೂಕಿನ ತುಮಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ‘ಮಹಿಳಾ ರೈತರ ದಿನಾಚರಣೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅಡುಗೆಮನೆಯ ಪೌಷ್ಟಿಕಾಂಶವು ಕುಟುಂಬದ ಆರೋಗ್ಯ ಭದ್ರತೆಯನ್ನು ನಿರ್ಧರಿಸುತ್ತದೆ. ಕೃಷಿ ಆದಾಯ ವೃದ್ಧಿಗೆ ಮಹಿಳಾ ಕೇಂದ್ರಿತ ಉದ್ಯಮಗಳು ಸಹಕಾರಿಯಾಗಿದ್ದು, ಶ್ರೀಗಂಧ ಮತ್ತು ರಕ್ತಚಂದನದ0ತಹ ಕೃಷಿ-ಅರಣ್ಯ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದರಿಂದ ಹವಾಮಾನ ವೈಪರೀತ್ಯವನ್ನು ಎದುರಿಸುವ ಸುಸ್ಥಿರ ಕೃಷಿ ಮಾದರಿ ರೂಪಿಸಬಹುದು. ಟಿಎಸ್ಪಿ ಯೋಜನೆಯಡಿ ಸೌಲಭ್ಯಗಳನ್ನು ಪಡೆಯಲು ಮಹಿಳೆಯರು ಸ್ವಸಹಾಯ ಗುಂಪುಗಳನ್ನು ರಚಿಸಿಕೊಳ್ಳಬೇಕು ಕರೆ ನೀಡಿದರು.

ವಿಜ್ಞಾನಿ (ಹಣ್ಣು ವಿಜ್ಞಾನ) ಅನುಷಾ ಎನ್. ಎಂ. ಅವರು ‘ಒಣಭೂಮಿ ತೋಟಗಾರಿಕೆ ಮತ್ತು ಅಡುಗೆಮನೆ ತೋಟ' ಕುರಿತು ಮಾತನಾಡಿ, ನೀರಿನ ಕೊರತೆ, ಅನಿಶ್ಚಿತ ಮಳೆಯಂತಹ ಸವಾಲುಗಳಿರುವ ಒಣಭೂಮಿ ಪ್ರದೇಶಗಳಲ್ಲಿ ತೋಟಗಾರಿಕಾ ಬೆಳೆಗಳು ರೈತ ಕುಟುಂಬಗಳಿಗೆ ಪೌಷ್ಟಿಕಾಂಶ ಮತ್ತು ಆರ್ಥಿಕ ಭದ್ರತೆ ನೀಡುತ್ತವೆ. ಸ್ಥಳೀಯ ಮಣ್ಣಿಗೆ ಸೂಕ್ತವಾದ ಬೋರೆ, ನೆಲ್ಲಿ, ಸೀತಾಫಲ, ದಾಳಿಂಬೆ ಮತ್ತು ಹುಣಸೆಯಂತಹ ಬರ ನಿರೋಧಕ ಹಣ್ಣಿನ ಬೆಳೆಗಳನ್ನು ಬೆಳೆಯಬೇಕು ಎಂದು ಸಲಹೆ ನೀಡಿದರು.

ಮಣ್ಣು ವಿಜ್ಞಾನ ವಿಭಾಗದ ವಿಜ್ಞಾನಿ ಡಾ. ಕವಿತಾ ಪಿ. ಜಾಧವ್ ಅವರು ಮಾತನಾಡಿ, ಗ್ರಾಮೀಣ ಮಹಿಳೆಯರ ಸಬಲೀಕರಣ ಮತ್ತು ಆರ್ಥಿಕ ಸ್ವಾತಂತ್ರö್ಯಕ್ಕೆ ಸ್ವಸಹಾಯ ಸಂಘಗಳು ಮುಖ್ಯ. ಮಹಿಳೆಯರು ಒಗ್ಗೂಡಿ ಆದಾಯ ತರುವ ಚಟುವಟಿಕೆಗಳನ್ನು ಕೈಗೊಳ್ಳುವುದರ ಜೊತೆಗೆ ಕೃಷಿ ನಿರ್ಧಾರಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ತಿಳಿಸಿದರು.

*ಸಾಧಕ ಮಹಿಳೆಯರಿಗೆ ಸನ್ಮಾನ:*

ಕೃಷಿ ಕುಟುಂಬ ನಿರ್ವಹಣೆ, ಕೃಷಿ ಕಾಯಕ ಹಾಗೂ ಮಕ್ಕಳ ವಿದ್ಯಾಭ್ಯಾಸದಲ್ಲಿ ಶ್ರಮಿಸಿದ ತುಮಟಿ ಗ್ರಾಮದ ಮಲ್ಲಮ್ಮ, ಶಿವಗಂಗಮ್ಮ ಹಾಗೂ ತುಮಟಿ ತಾಂಡಾದ ಲಕ್ಷಿಬಾಯಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ನಂತರ ವಿಜ್ಞಾನಿಗಳ ತಂಡ ಹಾಗೂ ಗ್ರಾಮಸ್ಥರು ಮಲ್ಲಮ್ಮ ಅವರ ಜಮೀನಿಗೆ ಭೇಟಿ ನೀಡಿ ಕೃಷಿ ಮಾಹಿತಿ ವಿನಿಮಯ ಮಾಡಿಕೊಂಡರು.

ಜಾಗೃತಿ ಕಾರ್ಯಕ್ರಮದಲ್ಲಿ 62 ಮಹಿಳಾ ರೈತರು, 30ಕ್ಕೂ ಹೆಚ್ಚು ಪುರುಷ ರೈತರು ಹಾಗೂ ಮಕ್ಕಳು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande