ಇರಾಕ್ ಉಪ ಪ್ರಧಾನಿಯಾಗಿ ಅಮೆರಿಕ–ಇಸ್ರೇಲ್ ವಿರೋಧಿ ಖಜಾಲಿ ನೇಮಕ
ಬಾಗ್ದಾದ್ 16 (ಇರಾಕ್),ಅಕ್ಟೋಬರ್ (ಹಿ.ಸ): ಇರಾಕ್ ಸಂಸತ್ತು ಇರಾನ್ ಬೆಂಬಲಿತ ‘ಅಸಾಯಿಬ್ ಅಹ್ಲ್ ಅಲ್-ಹಕ್’ ಸಂಘಟನೆಯ ಸದಸ್ಯ ಲೈತ್ ಅಲ್-ಖಜಾಲಿ ಅವರನ್ನು ಉಪ ಪ್ರಧಾನಿಯಾಗಿ ನೇಮಕ ಮಾಡಲು ಅನುಮೋದನೆ ನೀಡಿದೆ. ಅಮೆರಿಕ ಮತ್ತು ಇಸ್ರೇಲ್‌ನ ಪ್ರಬಲ ವಿರೋಧಿ ಎಂದು ಗುರುತಿಸಿಕೊಂಡಿರುವ ಲೈತ್ ಅಲ್-ಖಜಾಲಿ ಅವರ
बगदाद में प्रधानमंत्री अली अल-जैदी संसद सत्र में शामिल हुए। फोटो - इंटरनेट मीडिया


ಬಾಗ್ದಾದ್ 16 (ಇರಾಕ್),ಅಕ್ಟೋಬರ್ (ಹಿ.ಸ):

ಇರಾಕ್ ಸಂಸತ್ತು ಇರಾನ್ ಬೆಂಬಲಿತ ‘ಅಸಾಯಿಬ್ ಅಹ್ಲ್ ಅಲ್-ಹಕ್’ ಸಂಘಟನೆಯ ಸದಸ್ಯ ಲೈತ್ ಅಲ್-ಖಜಾಲಿ ಅವರನ್ನು ಉಪ ಪ್ರಧಾನಿಯಾಗಿ ನೇಮಕ ಮಾಡಲು ಅನುಮೋದನೆ ನೀಡಿದೆ. ಅಮೆರಿಕ ಮತ್ತು ಇಸ್ರೇಲ್‌ನ ಪ್ರಬಲ ವಿರೋಧಿ ಎಂದು ಗುರುತಿಸಿಕೊಂಡಿರುವ ಲೈತ್ ಅಲ್-ಖಜಾಲಿ ಅವರ ನೇಮಕದೊಂದಿಗೆ ಪ್ರಧಾನಿ ಅಲಿ ಅಲ್-ಜೈದಿ ನೇತೃತ್ವದ ಸರ್ಕಾರದ ರಚನೆ ಪೂರ್ಣಗೊಂಡಿದೆ. ಅಮೆರಿಕ ಈ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ.

ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಯುದ್ಧದ ಪರಿಣಾಮಗಳನ್ನು ಇರಾಕ್ ಎದುರಿಸುತ್ತಿರುವ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿದೆ. ಗುರುವಾರ ಸಂಸದರು ಮೂವರು ಉಪ ಪ್ರಧಾನಿಗಳು ಹಾಗೂ 11 ಸಚಿವರ ನೇಮಕಕ್ಕೆ ಅನುಮೋದನೆ ನೀಡಿದ್ದಾರೆ. ನಯೀಫ್ ಅಲ್-ಶಮ್ಮರಿ ಅವರನ್ನು ರಕ್ಷಣಾ ಸಚಿವರನ್ನಾಗಿ ಹಾಗೂ ಯಾಸಿರ್ ಅಲ್-ಮಲಿಕಿ ಅವರನ್ನು ಆಂತರಿಕ ಸಚಿವರನ್ನಾಗಿ ನೇಮಿಸಲಾಗಿದೆ.

ಅಲ್-ಜಜೀರಾ ವರದಿಯ ಪ್ರಕಾರ, ಲೈತ್ ಅಲ್-ಖಜಾಲಿ ಅವರು ಸಂಘಟನೆಯ ನಾಯಕ ಕೈಸ್ ಅಲ್-ಖಜಾಲಿ ಅವರ ಸಹೋದರ. ಅಮೆರಿಕವು 2020ರಲ್ಲಿ ‘ಅಸಾಯಿಬ್ ಅಹ್ಲ್ ಅಲ್-ಹಕ್’ ಸಂಘಟನೆಯನ್ನು ವಿದೇಶಿ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿತ್ತು. ಅಲ್ಲದೆ, ಕೈಸ್ ಮತ್ತು ಲೈತ್ ಅಲ್-ಖಜಾಲಿ ಸಹೋದರರನ್ನು ವಿಶೇಷವಾಗಿ ಗುರುತಿಸಲಾದ ಜಾಗತಿಕ ಭಯೋತ್ಪಾದಕರು ಎಂದು ಘೋಷಿಸಿತ್ತು. 2007ರಲ್ಲಿ ಐವರು ಅಮೆರಿಕದ ಸೈನಿಕರು ಮೃತಪಟ್ಟ ದಾಳಿ ಸೇರಿದಂತೆ ವಿವಿಧ ದಾಳಿಗಳನ್ನು ಇದಕ್ಕೆ ಕಾರಣವಾಗಿ ಉಲ್ಲೇಖಿಸಿತ್ತು.

ಯುದ್ಧದಿಂದಾಗಿ ಇರಾಕ್ ಗಂಭೀರ ಆರ್ಥಿಕ ಮತ್ತು ಭದ್ರತಾ ಸವಾಲುಗಳನ್ನು ಎದುರಿಸುತ್ತಿದೆ ಎಂದು ಪ್ರಧಾನಿ ಅಲಿ ಅಲ್-ಜೈದಿ ಹೇಳಿದ್ದಾರೆ. ಯುದ್ಧ ಆರಂಭವಾಗುವ ಮೊದಲು ಇರಾಕ್ ಹಾರ್ಮುಜ್ ಜಲಸಂಧಿಯ ಮೂಲಕ ಪ್ರತಿದಿನ ಸುಮಾರು 35 ಲಕ್ಷ ಬ್ಯಾರೆಲ್ ತೈಲವನ್ನು ರಫ್ತು ಮಾಡುತ್ತಿತ್ತು. ಇದರಿಂದ ಸರ್ಕಾರಕ್ಕೆ ಶೇ. 90ರಷ್ಟು ಆದಾಯ ದೊರೆಯುತ್ತಿತ್ತು. ಯುದ್ಧದ ಪರಿಣಾಮವಾಗಿ ದೇಶದ ಆರ್ಥಿಕ ಸ್ಥಿತಿಯ ಮೇಲೂ ಒತ್ತಡ ಉಂಟಾಗಿದೆ.

ಸರ್ಕಾರೇತರ ಸಶಸ್ತ್ರ ಗುಂಪುಗಳಿಂದ ಶಸ್ತ್ರಾಸ್ತ್ರಗಳನ್ನು ಹಿಂಪಡೆಯುವ ಮತ್ತು ಇರಾಕ್‌ನಿಂದ ಅಮೆರಿಕದ ಸೇನೆಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಪ್ರಧಾನಿ ಭರವಸೆ ನೀಡಿದ್ದಾರೆ.

2006ರಲ್ಲಿ ಸಂಘಟನೆ ಸ್ಥಾಪನೆ

‘ಅಸಾಯಿಬ್ ಅಹ್ಲ್ ಅಲ್-ಹಕ್’ ಎಂಬ ಅರೇಬಿಕ್ ಹೆಸರಿನ ಅರ್ಥ ‘ನ್ಯಾಯವಂತರ ಒಕ್ಕೂಟ’ ಎಂದಾಗಿದೆ. ಇದು ಇರಾಕ್‌ನ ಪ್ರಮುಖ ಶಿಯಾ ಇಸ್ಲಾಮಿಕ್ ರಾಜಕೀಯ ಪಕ್ಷ ಹಾಗೂ ಅರೆಸೈನಿಕ ಸಂಘಟನೆಯಾಗಿದೆ. ‘ಖಜಾಲಿ ಜಾಲ’ ಎಂದೂ ಗುರುತಿಸಲಾಗುವ ಈ ಸಂಘಟನೆ ಇರಾಕ್‌ನ ರಾಜಕೀಯ ಮತ್ತು ಭದ್ರತಾ ವ್ಯವಸ್ಥೆಯಲ್ಲಿ ಗಮನಾರ್ಹ ಪ್ರಭಾವ ಹೊಂದಿದೆ.

ಕೈಸ್ ಅಲ್-ಖಜಾಲಿ ಅವರು 2006ರಲ್ಲಿ ಈ ಸಂಘಟನೆಯನ್ನು ಸ್ಥಾಪಿಸಿದರು. ಆರಂಭದಲ್ಲಿ ಇದು ಇರಾಕ್‌ನ ಮತ್ತೊಬ್ಬ ಪ್ರಭಾವಿ ನಾಯಕ ಮುಕ್ತದಾ ಅಲ್-ಸದರ್ ಅವರ ‘ಮಹ್ದಿ ಸೇನೆ’ ಸಂಘಟನೆಯ ಭಾಗವಾಗಿತ್ತು. ಬಳಿಕ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದ ಪ್ರತ್ಯೇಕಗೊಂಡು ಸ್ವತಂತ್ರ ಸಂಘಟನೆಯಾಯಿತು.

ಶಿಯಾ ಇಸ್ಲಾಮಿಕ್ ಸಿದ್ಧಾಂತ ಹಾಗೂ ಅಮೆರಿಕ ಮತ್ತು ಇಸ್ರೇಲ್ ವಿರೋಧಿ ನಿಲುವುಗಳನ್ನು ಹೊಂದಿರುವ ಈ ಸಂಘಟನೆಗೆ ಇರಾನ್‌ನ ಖುದ್ಸ್ ಪಡೆ ಮತ್ತು ಲೆಬನಾನ್‌ನ ಹಿಜ್ಬುಲ್ಲಾ ಸಂಘಟನೆಯಿಂದ ಆರ್ಥಿಕ ಹಾಗೂ ಸೇನಾ ನೆರವು ದೊರೆಯುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

-------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande