
ಬಳ್ಳಾರಿ, 16 ಅಕ್ಟೋಬರ್ (ಹಿ.ಸ.)
ಬಳ್ಳಾರಿ ತಾಲೂಕಿನ ಹರಗಿನಡೋಣಿ ಗ್ರಾಮದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಮೆ.ಗೋಲ್ಡನ್ ಲೈನ್ ಸಂಸ್ಥೆಯ ಕಬ್ಬಿಣದ ಅದಿರು ಬೆನಿಫಿಸಿಯೇಷನ್ ಘಟಕದ ಪರಿಸರ ಸಾರ್ವಜನಿಕ ಆಲಿಕೆ ಸಭೆಯನ್ನು ಮುಂದೂಡಲಾಗಿದ್ದು, ನವೆಂಬರ್ 17ರಂದು ನಡೆಸಲು ಮರುದಿನಾಂಕ ನಿಗದಿಪಡಿಸಲಾಗಿದೆ.
ಮೆ.ಗೋಲ್ಡನ್ ಲೈನ್ ಸಂಸ್ಥೆಯು ಹರಗಿನಡೋಣಿ ಗ್ರಾಮದ ಸರ್ವೆ ನಂ. 133/2, 133/3, 133/4, 121/2 ಮತ್ತು 121/1 ರಲ್ಲಿ ಒಟ್ಟು 14.04 ಎಕರೆ ಪ್ರದೇಶದಲ್ಲಿ ವಾರ್ಷಿಕ 10,00,000 ಟನ್ ಉತ್ಪಾದನಾ ಸಾಮರ್ಥ್ಯದ ಕಬ್ಬಿಣದ ಅದಿರು ಬೆನಿಫಿಸಿಯೇಷನ್ ಘಟಕ ಸ್ಥಾಪಿಸಲು ಪ್ರಸ್ತಾಪಿಸಿದೆ. ಈ ಹಿನ್ನೆಲೆಯಲ್ಲಿ ಈ ಹಿಂದೆ ಅಕ್ಟೋಬರ್ 27ರಂದು ವೇಣಿವೀರಾಪುರ ಗ್ರಾಮದ ಮೆ.ಹೊತ್ತೂರ್ ಇಸ್ಪಾತ್ ಪ್ರೆöÊವೇಟ್ ಲಿಮಿಟೆಡ್ ಆವರಣದಲ್ಲಿ ಸಾರ್ವಜನಿಕ ಆಲಿಕೆ ಸಭೆ ಆಯೋಜಿಸಲಾಗಿತ್ತು.
ಪ್ರಸ್ತುತ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮಾನ್ಯ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಸದರಿ ಸಭೆಯನ್ನು ಮುಂದೂಡಲಾಗಿದೆ. ಪರಿಷ್ಕೃತ ವೇಳಾಪಟ್ಟಿಯಂತೆ, ನವೆಂಬರ್ 17 ರಂದು ಬೆಳಿಗ್ಗೆ 11 ಗಂಟೆಗೆ ಯೋಜನಾ ಸ್ಥಳವಾದ ಹರಗಿನಡೋಣಿ ಗ್ರಾಮದ ಸರ್ವೆ ನಂ. 133/2, 133/3, 133/4, 121/2 ಮತ್ತು 121/1 ಆವರಣದಲ್ಲೇ ಸಾರ್ವಜನಿಕ ಆಲಿಕೆ ಸಭೆ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಬಳ್ಳಾರಿ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿಗಳು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್