
ಹುಬ್ಬಳ್ಳಿ, 14 ಅಕ್ಟೋಬರ್ (ಹಿ.ಸ.):
ಕೇಂದ್ರ ಸರ್ಕಾರ ಕೊಟ್ಟ ಭರವಸೆಯಂತೆ ರೈತರ ಬೇಡಿಕೆ ಈಡೇರಿಸುವ ವಿಶ್ವಾಸವಿದೆ. ಹೀಗಾಗಿ ರೈತರು ಹೋರಾಟವನ್ನು ಹಿಂಪಡೆಯಬೇಕೆಂದು ಬಿಜೆಪಿ ಹು-ಧಾ ಮಹಾನಗರ ರೈತ ಮೋರ್ಚಾ ಅಧ್ಯಕ್ಷ ಈಶ್ವರಗೌಡ ಪಾಟೀಲ್ ಮನವಿ ಮಾಡಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರು, ಸಚಿವರು ಕೊಟ್ಟ ಭರವಸೆಯಂತೆ ದೆಹಲಿಗೆ ರೈತರನ್ನು ಕರೆದುಕೊಂಡು ಹೋಗಿ ಸಭೆ ಮಾಡಿದ್ದಾರೆ. ಅಲ್ಲಿ ಚರ್ಚಿಸಿದಂತೆ ಸಮಿತಿ ರಚಿಸಿ ವರದಿ ಪಡೆದು ರೈತರ ಬೇಡಿಕೆ ಈಡೇರಿಸುವ ವಿಶ್ವಾಸವಿದೆ. ಹಾಗಾಗಿ ರೈತರು ಕೇವಲ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಹೋರಾಟ ಮಾಡುವುದು ಸರಿಯಲ್ಲ. ರೈತರ ಬೇಡಿಕೆ ನ್ಯಾಯಯುತವಾಗಿದ್ದು, ನಾವು ಕೂಡಾ ರೈತರ ಹೋರಾಟಕ್ಕೆ ಬೆಂಬಲವಾಗಿದ್ದೇವೆ. ಕೇಂದ್ರ ಬೇಡಿಕೆ ಈಡೇರಿಸುವವರೆಗೆ ಸಮಾಧಾನದಿಂದ ಇರಬೇಕು ಎಂದು ಮನವಿ ಮಾಡಿದರು.
ಕಬ್ಬು ಜೊತೆಗೆ ಇನ್ನಿತರ ಬೆಳೆಗಳಿಗೆ ಬೆಲೆ ನಿಗಧಿ ಪಡಿಸುವ ಅವಶ್ಯಕತೆ ಇದ್ದು, ಹೀಗಾಗಿ ತಜ್ಞರು ವರದಿ ಪಡೆದು ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುವ ವಿಶ್ವಾಸವಿದೆ ಎಂದು ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.