
ಬಳ್ಳಾರಿ, 14 ಅಕ್ಟೋಬರ್ (ಹಿ.ಸ.)
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ‘ಕರಡು ಕ.ವಿ.ನಿ.ಆ. ವಿದ್ಯುಚ್ಛಕ್ತಿ ಸರಬರಾಜು ನಿಯಮಗಳು, 2026’ ಅನ್ನು ಅಧಿಸೂಚಿಸಿದ್ದು, ಈ ಸಂಬಂಧ ಪಾಲುದಾರರು ಹಾಗೂ ಆಸಕ್ತ ಸಾರ್ವಜನಿಕರಿಂದ ಅಭಿಪ್ರಾಯ, ಸಲಹೆ ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸಿದೆ.
ಕರಡು ನಿಯಮಾವಳಿಗಳ ಕುರಿತು ಸಾರ್ವಜನಿಕರಿಗೆ ಅನಿಸಿಕೆ ಮತ್ತು ಸಲಹೆಗಳನ್ನು ಮಂಡಿಸಲು ಅವಕಾಶ ಕಲ್ಪಿಸುವ ಸಲುವಾಗಿ, ಜೆಸ್ಕಾಂ ವ್ಯಾಪ್ತಿಯ ಬಳ್ಳಾರಿ, ಕೊಪ್ಪಳ, ವಿಜಯನಗರ ಮತ್ತು ರಾಯಚೂರು ಜಿಲ್ಲೆಗಳ ಸಾರ್ವಜನಿಕ ವಿಚಾರಣೆಯನ್ನು ಅಕ್ಟೋಬರ್ 22 ರಂದು ಬೆಳಗ್ಗೆ 11 ಗಂಟೆಗೆ ಹೆಚ್.ಎಸ್.ಕೆ. ಪಾಲಿಟೆಕ್ನಿಕ್ ಸಭಾಂಗಣ, ಮೊದಲನೇ ಮಹಡಿ, ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ಇಂಜಿನಿಯರಿ0ಗ್ ಕಾಲೇಜು ಕ್ಯಾಂಪಸ್, ಕಂಟೋನ್ಮೆಂಟ್, ಬಳ್ಳಾರಿ – 583104, ಇಲ್ಲಿ ಆಯೋಜಿಸಲಾಗಿದೆ.
ಸಂಬ0ಧಪಟ್ಟ ಜಿಲ್ಲೆಗಳ ಆಸಕ್ತ ಪಾಲುದಾರರು ಹಾಗೂ ಸಾರ್ವಜನಿಕರು ಈ ವಿಚಾರಣಾ ಸಭೆಯಲ್ಲಿ ಭಾಗವಹಿಸಿ, ಆಯೋಗದ ಮುಂದೆ ತಮ್ಮ ಅಭಿಪ್ರಾಯ, ಸಲಹೆ ಅಥವಾ ಆಕ್ಷೇಪಣೆಗಳನ್ನು ಮಂಡಿಸುವಂತೆ ಮುಖ್ಯ ಅಭಿಯಂತರರು (ವಿ), ಕಾ ಮತ್ತು ಪಾ ವಲಯ, ಜೆಸ್ಕಾಂ, ಬಳ್ಳಾರಿ ಇವರು ಕೋರಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್