
ಕುರುಗೋಡು, 13 ಅಕ್ಟೋಬರ್ (ಹಿ.ಸ.)
ಅಮೃತ್ ನಗರೋತ್ಥಾನ ಹಂತ-4 ಯೋಜನೆಯಡಿ ಕುರುಗೋಡು ಪುರಸಭೆ ವ್ಯಾಪ್ತಿಯ ವಿಶೇಷಚೇತನ ಫಲಾನುಭವಿಗಳಿಗೆ ಜೀವನೋಪಾಯಕ್ಕಾಗಿ ಸ್ವಯಂ ವ್ಯಾಪಾರ ಮಾಡಿಕೊಳ್ಳಲು 5 ಟಿನ್ ಶೆಡ್ಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಅಕ್ಟೋಬರ್ 19 ಕೊನೆಯ ದಿನವಾಗಿದೆ. ನಿಗದಿತ ದಿನಾಂಕದ ನಂತರ ಬರುವ ಅರ್ಜಿಗಳನ್ನು ಯಾವುದೇ ಮುನ್ಸೂಚನೆ ನೀಡದೆ ತಿರಸ್ಕರಿಸಲಾಗುವುದು.
*ಅರ್ಹತೆ ಮತ್ತು ಅಗತ್ಯ ದಾಖಲೆಗಳು:*
ಅರ್ಜಿದಾರರು ಕುರುಗೋಡು ಪುರಸಭೆ ವ್ಯಾಪ್ತಿಯ ನಿವಾಸಿಯಾಗಿರಬೇಕು. ಪಡಿತರ ಚೀಟಿ, ಆಧಾರ್ ಕಾರ್ಡ್ ಅಥವಾ ಗುರುತಿನ ಚೀಟಿ. ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಪಾಸ್ಪೋರ್ಟ್ ಅಳತೆಯ ಭಾವಚಿತ್ರ. ಮುಚ್ಚಳಿಕೆ ಪ್ರಮಾಣ ಪತ್ರ. ಶೇ. 75ಕ್ಕಿಂತ ಹೆಚ್ಚು ದೈಹಿಕ ವಿಕಲಚೇತನರಾಗಿರಬೇಕು ಹಾಗೂ ತಾಲೂಕು/ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿಗಳಿಂದ ಪಡೆದ ಅಂಗವೈಕಲ್ಯ ಪ್ರಮಾಣ ಪತ್ರದ ಪ್ರತಿ ಲಗತ್ತಿಸಬೇಕು.
ಹೆಚ್ಚಿನ ವಿವರಗಳಿಗಾಗಿ ಪುರಸಭೆ ಕಾರ್ಯಾಲಯದ ಸೂಚನಾ ಫಲಕವನ್ನು ಪರಿಶೀಲಿಸಬಹುದು ಅಥವಾ ಸಂಬಂಧಪಟ್ಟ ಶಾಖೆಯ ಸಿಬ್ಬಂದಿಯನ್ನು ಸಂಪರ್ಕಿಸಬಹುದು ಎಂದು ಕುರುಗೋಡು ಪುರಸಭೆಯ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್