



ಬಳ್ಳಾರಿ, 12 ಅಕ್ಟೋಬರ್ (ಹಿ.ಸ.)
ಬೆಂಗಳೂರಿನ ಯಲಹಂಕದ ‘ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್'ನಲ್ಲಿ ಅಕ್ಟೋಬರ್ 4 ರಿಂದ 10 ರವರೆಗೆ ನಡೆದ 2ನೇ ಏಷ್ಯನ್ ಮಾಸ್ಟರ್ಸ್ ಸ್ವಿಮ್ಮಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಬಳ್ಳಾರಿಯ ರಜನಿ ಲಕ್ಕ ಅವರು 4 ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
65 ರಿಂದ 69 ವರ್ಷ ವಯಸ್ಸಿನ ವಿಭಾಗದಲ್ಲಿ ಸ್ಪರ್ಧಿಸಿದ್ದ ರಜನಿ ಲಕ್ಕ ಅವರು ಅತ್ಯುತ್ತಮ ಪ್ರದರ್ಶನ ನೀಡಿ ಒಟ್ಟು 1 ಚಿನ್ನ, 2 ಬೆಳ್ಳಿ ಹಾಗೂ 1 ಕಂಚಿನ ಪದಕ ಗೆದ್ದು ಕೀರ್ತಿ ತಂದಿದ್ದಾರೆ.
*ಗೆದ್ದ ಪದಕಗಳ ವಿವರ:*
200 ಮೀಟರ್ ಬಟರ್ ಫ್ಲೆ- ಚಿನ್ನದ ಪದಕ
100 ಮೀಟರ್ ಬಟರ್ ಫ್ಲೆ- ಬೆಳ್ಳಿ ಪದಕ
400 ಮೀಟರ್ ಐ.ಎಂ (ಇಂಡಿವಿಜುಯಲ್ ಮೆಡ್ಲೆ)- ಬೆಳ್ಳಿ ಪದಕ
200 ಮೀಟರ್ ಐ.ಎಂ-ಕ0ಚಿನ ಪದಕ
ಈ ಪ್ರತಿಷ್ಠಿತ ಅಂತರರಾಷ್ಟಿಯ ಕೂಟದಲ್ಲಿ ಭಾರತ, ಜಪಾನ್, ಚೀನಾ, ಮಲೇಷಿಯಾ, ಶ್ರೀಲಂಕಾ, ಇರಾನ್, ಥೈಲ್ಯಾಂಡ್, ಓಮನ್ ಹಾಗೂ ದಕ್ಷಿಣ ಕೊರಿಯಾ ಸೇರಿದಂತೆ 9 ದೇಶಗಳ ಒಟ್ಟು 1,320 ಸ್ಪರ್ಧಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ರಜನಿ ಲಕ್ಕ ಅವರಿಗೆ ಜಿಲ್ಲಾಡಳಿತ ಅಭಿನಂದನೆ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್