ಇಂದಿನಿಂದ ನವರಾತ್ರಿ ಆರಂಭ: ಒಂಬತ್ತು ದಿನ ದುರ್ಗಾದೇವಿಯ ನವಸ್ವರೂಪಗಳ ಆರಾಧನೆ
ನವದೆಹಲಿ, 11ಅಕ್ಟೋಬರ್ (ಹಿ.ಸ.): ಶರನ್ನ ನವರಾತ್ರಿ ಇಂದಿನಿಂದ ಆರಂಭವಾಗುತ್ತಿದ್ದು, ಒಂಬತ್ತು ದಿನಗಳ ಕಾಲ ದುರ್ಗಾದೇವಿಯ ಒಂಬತ್ತು ಸ್ವರೂಪಗಳನ್ನು ವಿಧಿವಿಧಾನಗಳೊಂದಿಗೆ ಪೂಜಿಸಲಾಗುತ್ತದೆ. ಪ್ರತಿ ವರ್ಷ ಆಶ್ವಯುಜ ಮಾಸದ ಶುಕ್ಲ ಪಕ್ಷದ ಪಾಡ್ಯಮಿಯಿಂದ ಶಾರದೀಯ ನವರಾತ್ರಿ ಆರಂಭವಾಗುತ್ತದೆ. ಮೊದಲ ದಿನ ದೇ
दिल्ली का झंडेवाला मंदिर। माता का यह मंदिर करोलबाग के पास है। फोटो -  इंटरनेट मीडिया


ನವದೆಹಲಿ, 11ಅಕ್ಟೋಬರ್ (ಹಿ.ಸ.):

ಶರನ್ನ ನವರಾತ್ರಿ ಇಂದಿನಿಂದ ಆರಂಭವಾಗುತ್ತಿದ್ದು, ಒಂಬತ್ತು ದಿನಗಳ ಕಾಲ ದುರ್ಗಾದೇವಿಯ ಒಂಬತ್ತು ಸ್ವರೂಪಗಳನ್ನು ವಿಧಿವಿಧಾನಗಳೊಂದಿಗೆ ಪೂಜಿಸಲಾಗುತ್ತದೆ.

ಪ್ರತಿ ವರ್ಷ ಆಶ್ವಯುಜ ಮಾಸದ ಶುಕ್ಲ ಪಕ್ಷದ ಪಾಡ್ಯಮಿಯಿಂದ ಶಾರದೀಯ ನವರಾತ್ರಿ ಆರಂಭವಾಗುತ್ತದೆ. ಮೊದಲ ದಿನ ದೇವಿಯನ್ನು ಸ್ವಾಗತಿಸಿ, ಕಲಶ ಸ್ಥಾಪನೆ ನೆರವೇರಿಸಲಾಗುತ್ತದೆ. ಬಳಿಕ ದುರ್ಗಾದೇವಿಯ ಮೊದಲ ಸ್ವರೂಪವಾದ ಶೈಲಪುತ್ರಿ ದೇವಿಯನ್ನು ಪೂಜಿಸಿ ಆರಾಧಿಸಲಾಗುತ್ತದೆ.

ನವರಾತ್ರಿಯ ಸಂದರ್ಭದಲ್ಲಿ ಉಪವಾಸ ಆಚರಿಸುವ ಭಕ್ತರು ಪ್ರತಿದಿನ ದೇವಿಯ ಮಂತ್ರಗಳನ್ನು ಪಠಿಸುವುದರ ಜತೆಗೆ ಆರತಿ ಹಾಗೂ ಚಾಲೀಸಾ ಪಠಣ ಮಾಡುತ್ತಾರೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ನವರಾತ್ರಿಯಲ್ಲಿ ದುರ್ಗಾ ಚಾಲೀಸಾ ಪಠಿಸುವುದರಿಂದ ಸುಖ, ಸಮೃದ್ಧಿ ಹಾಗೂ ಸಕಾರಾತ್ಮಕ ಶಕ್ತಿಯ ವೃದ್ಧಿಯಾಗುತ್ತದೆ.

ಶಾಸ್ತ್ರಗಳ ಪ್ರಕಾರ, ಬೆಳಗಿನ ಸಮಯದಲ್ಲಿ ದೇವಿಯನ್ನು ಆವಾಹಿಸಿ ಘಟಸ್ಥಾಪನೆ ಮಾಡುವ ಸಂಪ್ರದಾಯವಿದೆ. ಇಂದು ರಾತ್ರಿ 10.32ರವರೆಗೆ ಚಿತ್ರಾ ನಕ್ಷತ್ರ ಹಾಗೂ ರಾತ್ರಿ 9.05ರವರೆಗೆ ವೈಧೃತಿ ಯೋಗ ಇರಲಿದೆ.

ಚಿತ್ರಾ ನಕ್ಷತ್ರದ ಮೊದಲ ಎರಡು ಚರಣಗಳನ್ನು ಹೊರತುಪಡಿಸಿ, ಅಭಿಜಿತ್ ಮುಹೂರ್ತದಲ್ಲಿ ಕಲಶ ಸ್ಥಾಪನೆ ಮಾಡುವುದು ಶ್ರೇಷ್ಠವೆಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande