ಸವಾಲುಗಳನ್ನು ಎದುರಿಸುವ ಆತ್ಮಸ್ಥೈರ್ಯ ಎಲ್ಲರಿಗೂ ದೊರೆಯಲಿ: ಡಿ.ಕೆ. ಶಿವಕುಮಾರ್
ಬೆಂಗಳೂರು, 11 ಅಕ್ಟೋಬರ್ (ಹಿ.ಸ.): ನವರಾತ್ರಿ ಉತ್ಸವದ ಮೊದಲ ದಿನದಂದು ಪ್ರಕೃತಿಯ ಸ್ವರೂಪಿಣಿ ಹಾಗೂ ದೃಢಸಂಕಲ್ಪದ ಪ್ರತೀಕವಾದ ಮಾತೆ ಶೈಲಪುತ್ರಿಯನ್ನು ಪೂಜಿಸಲಾಗುತ್ತದೆ. ತಾಯಿಯು ನಾಡಿನ ಸಮಸ್ತ ಜನತೆಗೆ ಬದುಕಿನ ಸವಾಲುಗಳನ್ನು ಎದುರಿಸುವ ಆತ್ಮಸ್ಥೈರ್ಯ ಕರುಣಿಸಲಿ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾ
ಸಿಎಂ ಎಕ್ಸ್ ಪೋಸ್ಟ್


ಬೆಂಗಳೂರು, 11 ಅಕ್ಟೋಬರ್ (ಹಿ.ಸ.):

ನವರಾತ್ರಿ ಉತ್ಸವದ ಮೊದಲ ದಿನದಂದು ಪ್ರಕೃತಿಯ ಸ್ವರೂಪಿಣಿ ಹಾಗೂ ದೃಢಸಂಕಲ್ಪದ ಪ್ರತೀಕವಾದ ಮಾತೆ ಶೈಲಪುತ್ರಿಯನ್ನು ಪೂಜಿಸಲಾಗುತ್ತದೆ. ತಾಯಿಯು ನಾಡಿನ ಸಮಸ್ತ ಜನತೆಗೆ ಬದುಕಿನ ಸವಾಲುಗಳನ್ನು ಎದುರಿಸುವ ಆತ್ಮಸ್ಥೈರ್ಯ ಕರುಣಿಸಲಿ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾರೈಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ಹಿಮವಂತನ ಮಗಳಾದ ಮಾತೆ ಶೈಲಪುತ್ರಿ ಸ್ಥಿರತೆ ಮತ್ತು ಅಚಲ ಭಕ್ತಿಯನ್ನು ಬೋಧಿಸುತ್ತಾಳೆ. ಸಂಕಷ್ಟಗಳ ಎದುರು ಧೃತಿಗೆಡದೆ ಮುನ್ನಡೆಯುವ ಸಂಕಲ್ಪಶಕ್ತಿ ಎಲ್ಲರಲ್ಲೂ ಜಾಗೃತವಾಗಲಿ ಎಂದು ಆಶಿಸಿ, ನಾಡಿನ ಜನತೆಗೆ ನವರಾತ್ರಿಯ ಮೊದಲ ದಿನದ ಶುಭಾಶಯಗಳನ್ನು ಮುಖ್ಯಮಂತ್ರಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande