ಕನ್ನಡ ಜಾನಪದ ಪರಿಷತ್ ಮುಧೋಳ ತಾಲೂಕು ಅಧ್ಯಕ್ಷೆಗೆ ಬೆಂಗಳೂರಿನಲ್ಲಿ ಗೌರವ
ಬಾಗಲಕೋಟೆ , 11 ಅಕ್ಟೋಬರ್ (ಹಿ.ಸ.) ಕನ್ನಡ ಜಾನಪದ ಪರಿಷತ್ ಮುಧೋಳ ತಾಲೂಕು ಅಧ್ಯಕ್ಷೆ, ಜಾನಪದ ಕಲೆ ಹಾಗೂ ಕನ್ನಡ ನಾಡು-ನುಡಿಯ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಲಕ್ಷ್ಮಿ ಹಾರೋಗೊಪ್ಪ ಅವರಿಗೆ ಪ್ರತಿಷ್ಠಿತ ‘ಧೀಮಂತ ಕನ್ನಡತಿ’ ಪ್ರಶಸ್ತಿ ಲಭಿಸಿದೆ. ಅಕ್ಕಮಹಾದೇವಿ ಸಭಾಭವನದಲ್ಲಿ ಭಾನುವಾರ ನಡ
ಸನ್ಮಾನ


ಬಾಗಲಕೋಟೆ , 11 ಅಕ್ಟೋಬರ್ (ಹಿ.ಸ.)

ಕನ್ನಡ ಜಾನಪದ ಪರಿಷತ್ ಮುಧೋಳ ತಾಲೂಕು ಅಧ್ಯಕ್ಷೆ, ಜಾನಪದ ಕಲೆ ಹಾಗೂ ಕನ್ನಡ ನಾಡು-ನುಡಿಯ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಲಕ್ಷ್ಮಿ ಹಾರೋಗೊಪ್ಪ ಅವರಿಗೆ ಪ್ರತಿಷ್ಠಿತ ‘ಧೀಮಂತ ಕನ್ನಡತಿ’ ಪ್ರಶಸ್ತಿ ಲಭಿಸಿದೆ.

ಅಕ್ಕಮಹಾದೇವಿ ಸಭಾಭವನದಲ್ಲಿ ಭಾನುವಾರ ನಡೆದ ‘ಕನ್ನಡ ಸಾಹಿತ್ಯ ಸಂಭ್ರಮ’ ಕಾರ್ಯಕ್ರಮದಲ್ಲಿ ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ಹಾಗೂ ಚೇತನ ಫೌಂಡೇಶನ್ ಸಹಯೋಗದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅದ್ಧೂರಿಯಾಗಿ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಲಕ್ಷ್ಮಿ ಹಾರೋಗೊಪ್ಪ ಅವರ ಕನ್ನಡ ಭಾಷೆ, ಸಾಹಿತ್ಯ, ಜಾನಪದ ಸಂಸ್ಕೃತಿ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿನ ಸೇವೆಯನ್ನು ಗುರುತಿಸಿ ‘ಧೀಮಂತ ಕನ್ನಡತಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜಾನಪದ ಪರಂಪರೆ, ಗ್ರಾಮೀಣ ಸಂಸ್ಕೃತಿ ಹಾಗೂ ಕನ್ನಡದ ಸಾಂಸ್ಕೃತಿಕ ವೈಭವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಲಕ್ಷ್ಮಿ ಹಾರೋಗೊಪ್ಪ ಅವರು ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

ವಿಶೇಷವಾಗಿ ಕನ್ನಡ ಜಾನಪದ ಪರಿಷತ್ ಮುಧೋಳ ತಾಲೂಕು ಅಧ್ಯಕ್ಷೆಯಾಗಿ ಜಾನಪದ ಕಲೆ, ಕಲಾವಿದರು ಮತ್ತು ಸ್ಥಳೀಯ ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಕನ್ನಡ ನಾಡಿನ ವಿವಿಧ ಭಾಗಗಳಲ್ಲಿ ಜೀವಂತವಾಗಿರುವ ಜನಪದ ಕಲೆ, ಆಚರಣೆ, ಸಂಪ್ರದಾಯ, ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಮಹಿಳೆಯರ ಪಾತ್ರವೂ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಜಾನಪದ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ಲಕ್ಷ್ಮಿ ಹಾರೋಗೊಪ್ಪ ಅವರಿಗೆ ಪ್ರಶಸ್ತಿ ನೀಡಿರುವುದು ಮುಧೋಳ ತಾಲೂಕಿನ ಕನ್ನಡಾಭಿಮಾನಿಗಳು ಹಾಗೂ ಜಾನಪದ ವಲಯದಲ್ಲಿ ಸಂತಸಕ್ಕೆ ಕಾರಣವಾಗಿದೆ ಎಂದು ಸಾಹಿತಿ ಬೃಂಗಿಮಠ ತಿಳಿಸಿದರು.

ಪಟ್ಟಣದಲ್ಲಿ ನಡೆದ ಸಮಾರಂಭದಲ್ಲಿ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿ ಲಕ್ಷ್ಮಿ ಹಾರೋಗೊಪ್ಪ ಅವರನ್ನು ಸನ್ಮಾನಿಸಿದರು. ಪ್ರಶಸ್ತಿ ಸ್ವೀಕರಿಸಿದ ಅವರು, ಕನ್ನಡ ಭಾಷೆ ಮತ್ತು ಜಾನಪದ ಸಂಸ್ಕೃತಿಯ ಸೇವೆಗೆ ದೊರೆತ ಈ ಗೌರವವು ಮತ್ತಷ್ಟು ಉತ್ಸಾಹದಿಂದ ಕೆಲಸ ಮಾಡಲು ಪ್ರೇರಣೆ ನೀಡಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು

ಕನ್ನಡ ಸಾಹಿತ್ಯ ಸಂಭ್ರಮದ ವೇದಿಕೆಯಲ್ಲಿ ಜಾನಪದ ಕ್ಷೇತ್ರದ ಸೇವೆಗೆ ದೊರೆತ ಈ ಗೌರವವು ತಾಲೂಕಿಗೆ ಹೆಮ್ಮೆಯ ಸಂಗತಿಯಾಗಿದೆ. ಲಕ್ಷ್ಮಿ ಹಾರೋಗೊಪ್ಪ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದ್ದು, ಕನ್ನಡ ಸಾಹಿತ್ಯ ಹಾಗೂ ಜಾನಪದ ಕ್ಷೇತ್ರದಲ್ಲಿ ಅವರ ಸೇವೆ ಇನ್ನಷ್ಟು ವಿಸ್ತರಿಸಲಿ ಎಂದು ಕನ್ನಡಾಭಿಮಾನಿಗಳು ಹಾರೈಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande