ಕ್ಯಾಪ್ಟನ್ ಸ್ಮಿತ್ ಮಚಾರ್ ಅವರ ಧೈರ್ಯಕ್ಕೆ ಭಾರತ, ಇಸ್ರೇಲ್, ಅಮೆರಿಕ, ಆರ್.ಎಸ್.ಎಸ್ ಮೆಚ್ಚುಗೆ
ನವದೆಹಲಿ, 01 ಅಕ್ಟೋಬರ್ (ಹಿ.ಸ.): ದುಬೈನಿಂದ ಇಸ್ರೇಲ್‌ ನ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ನಡೆದ ಘಟನೆಯ ಸಂದರ್ಭದಲ್ಲಿ ಅಸಾಧಾರಣ ಧೈರ್ಯ ಪ್ರದರ್ಶಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚಾರ್‌ ಅವರ ಸಾಹಸಕ್ಕೆ ಭಾರತ, ಇಸ್ರೇಲ್, ಅಮೆರಿಕ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘ
कैप्टन स्मित मछार। फोटो - इंटरनेट मीडिया


ನವದೆಹಲಿ, 01 ಅಕ್ಟೋಬರ್ (ಹಿ.ಸ.):

ದುಬೈನಿಂದ ಇಸ್ರೇಲ್‌ ನ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ನಡೆದ ಘಟನೆಯ ಸಂದರ್ಭದಲ್ಲಿ ಅಸಾಧಾರಣ ಧೈರ್ಯ ಪ್ರದರ್ಶಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚಾರ್‌ ಅವರ ಸಾಹಸಕ್ಕೆ ಭಾರತ, ಇಸ್ರೇಲ್, ಅಮೆರಿಕ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘ ಮೆಚ್ಚುಗೆ ವ್ಯಕ್ತಪಡಿಸಿವೆ. ಕ್ಯಾಪ್ಟನ್ ಸ್ಮಿತ್ ಮಚಾರ್‌ ಅವರು ಶೀಘ್ರವಾಗಿ ಸಂಪೂರ್ಣ ಚೇತರಿಸಿಕೊಳ್ಳಲಿ ಎಂದು ಹಾರೈಸಿವೆ.

ಈ ಘಟನೆ ಬಳಿಕ ಕ್ಯಾಪ್ಟನ್ ಸ್ಮಿತ್ ಮಚಾರ್‌ ಅವರು ಚರ್ಚೆಯ ಕೇಂದ್ರವಾಗಿದ್ದು, ಸಂಕಷ್ಟದ ಸಂದರ್ಭದಲ್ಲಿ ಅವರು ತೋರಿದ ಧೈರ್ಯ ಮತ್ತು ಸಮಯೋಚಿತ ಕ್ರಮಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಕ್ಯಾಪ್ಟನ್ ಸ್ಮಿತ್ ಮಚಾರ್‌ ಅವರ ಅಸಾಧಾರಣ ಧೈರ್ಯವನ್ನು ಶ್ಲಾಘಿಸಿದ್ದಾರೆ. ಕಠಿಣ ಪರಿಸ್ಥಿತಿಯಲ್ಲೂ ಅವರು ತೋರಿದ ಸಮಯಪ್ರಜ್ಞೆ ಹಾಗೂ ವಿವೇಚನೆಯಿಂದ ನೂರಾರು ಜನರ ಜೀವ ಉಳಿಯಲು ಸಾಧ್ಯವಾಯಿತು ಮತ್ತು ದೊಡ್ಡ ದುರಂತವೊಂದು ತಪ್ಪಿತು ಎಂದು ಅವರು ಹೇಳಿದ್ದಾರೆ. ಕ್ಯಾಪ್ಟನ್ ಸ್ಮಿತ್ ಅವರ ಧೈರ್ಯಕ್ಕೆ ಗೌರವ ಸಲ್ಲಿಸುವುದರ ಜೊತೆಗೆ ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುವುದಾಗಿ ಜೈಶಂಕರ್ ತಿಳಿಸಿದ್ದಾರೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಕೂಡ ಕ್ಯಾಪ್ಟನ್ ಸ್ಮಿತ್ ಮಚಾರ್‌ ಅವರ ಸಾಹಸವನ್ನು ಶ್ಲಾಘಿಸಿದ್ದಾರೆ. ಚಾಕುವಿನಿಂದ ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದರೂ ಅವರು ದಾಳಿಕೋರನನ್ನು ಎದುರಿಸಿದರು. ಬಳಿಕ ಕಾಕ್‌ಪಿಟ್ ಬಾಗಿಲು ತೆರೆದು, ಪ್ರಯಾಣಿಕರು ಮತ್ತು ಸಿಬ್ಬಂದಿ ದಾಳಿಕೋರನನ್ನು ನಿಯಂತ್ರಿಸಲು ನೆರವಾಗುವಂತೆ ಮಾಡಿದರು. ಇದರಿಂದ ವಿಮಾನದಲ್ಲಿದ್ದ 174 ಜನರ ಜೀವ ಉಳಿಯಲು ಸಾಧ್ಯವಾಯಿತು ಎಂದು ನೆತನ್ಯಾಹು ಹೇಳಿದ್ದಾರೆ. ಕ್ಯಾಪ್ಟನ್ ಸ್ಮಿತ್ ಅವರು ನಿಜವಾದ ಹೀರೋ ಎಂದು ಬಣ್ಣಿಸಿರುವ ಅವರು, ಅವರು ಶೀಘ್ರ ಹಾಗೂ ಸಂಪೂರ್ಣವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

ಇಸ್ರೇಲ್‌ನಲ್ಲಿರುವ ಭಾರತದ ರಾಯಭಾರಿ ರೂವೆನ್ ಅಜಾರ್ ಅವರು ಕೂಡ ಕ್ಯಾಪ್ಟನ್ ಸ್ಮಿತ್ ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ. ಫ್ಲೈದುಬೈಯ ಎಫ್‌ಝಡ್1073 ವಿಮಾನದ ಅನುಭವಿ ಹಾಗೂ ಪ್ರತಿಭಾವಂತ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮತ್ತು ಇತರ ಇಸ್ರೇಲಿ, ಎಮಿರೇಟ್ ಪ್ರಯಾಣಿಕರು ಹಾಗೂ ಸಿಬ್ಬಂದಿಯ ಧೈರ್ಯದಿಂದ 180 ಜನರ ಜೀವ ಉಳಿಯಿತು ಎಂದು ಅವರು ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಕ್ಯಾಪ್ಟನ್ ಸ್ಮಿತ್ ಮಚಾರ್‌ ಅವರ ಧೈರ್ಯವನ್ನು ಪ್ರಶಂಸಿಸಿದ್ದಾರೆ. ಪೈಲಟ್ ಅವರ ಸ್ಥಿತಿ ಅತ್ಯಂತ ಗಂಭೀರವಾಗಿದ್ದರೂ ವಿಮಾನ ಅಪಘಾತಕ್ಕೀಡಾಗುವುದನ್ನು ತಡೆಯಲು ಅವರು ನೆರವಾದರು ಎಂದು ಟ್ರಂಪ್ ಹೇಳಿದ್ದಾರೆ. ಬುಧವಾರ ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಈ ಘಟನೆಯ ಬಗ್ಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಂದ ಮಾಹಿತಿ ಪಡೆದಿರುವುದಾಗಿ ತಿಳಿಸಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನಿಲ್ ಆಂಬೇಕರ್ ಕೂಡ ಕ್ಯಾಪ್ಟನ್ ಸ್ಮಿತ್ ಮಚಾರ್‌ ಅವರ ಅಸಾಧಾರಣ ಧೈರ್ಯವನ್ನು ಶ್ಲಾಘಿಸಿದ್ದಾರೆ. ಕರ್ತವ್ಯದ ಮಿತಿಯನ್ನು ಮೀರಿ 170ಕ್ಕೂ ಹೆಚ್ಚು ಜನರ ಜೀವ ಉಳಿಸಲು ಅವರು ನೆರವಾಗಿದ್ದಾರೆ. ಅವರ ಧೈರ್ಯ ಮತ್ತು ಸಮಯೋಚಿತ ಕ್ರಮದ ಬಗ್ಗೆ ಇಡೀ ದೇಶ ಹೆಮ್ಮೆಪಡುತ್ತದೆ ಎಂದು ಆಂಬೇಕರ್ ತಿಳಿಸಿದ್ದಾರೆ. ಕ್ಯಾಪ್ಟನ್ ಸ್ಮಿತ್ ಅವರು ಶೀಘ್ರ ಹಾಗೂ ಸಂಪೂರ್ಣವಾಗಿ ಚೇತರಿಸಿಕೊಳ್ಳಲಿ ಎಂದು ಅವರು ಹಾರೈಸಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande