ರಾಜೌರಿಯ ಕಲ್ಲಾರ್ ಅರಣ್ಯದಲ್ಲಿ ಐಇಡಿ ಪತ್ತೆ ;ನಿಷ್ಕ್ರಿಯಗೊಳಿಸಿದ ಭದ್ರತಾ ಪಡೆಗಳು
ರಾಜೌರಿ, 08 ಜನವರಿ (ಹಿ.ಸ.) : ಆ್ಯಂಕರ್ : ಜಮ್ಮು–ಕಾಶ್ಮೀರದ ರಾಜೌರಿ ಜಿಲ್ಲೆಯ ಥನ್ನಮಂಡಿ ವ್ಯಾಪ್ತಿಯ ಡೋರಿ ಮಾಲ್‌ನ ಕಲ್ಲಾರ್ ಅರಣ್ಯ ಪ್ರದೇಶದಲ್ಲಿ ನಡೆದ ಜಂಟಿ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಶಂಕಿತ ಸುಧಾರಿತ ಸ್ಫೋಟಕ ಸಾಧನ ಪತ್ತೆಹಚ್ಚಿ, ನಿಯಂತ್ರಿತ ವಿಧಾನದಲ್ಲಿ ಸುರಕ್
ರಾಜೌರಿಯ ಕಲ್ಲಾರ್ ಅರಣ್ಯದಲ್ಲಿ ಐಇಡಿ ಪತ್ತೆ ;ನಿಷ್ಕ್ರಿಯಗೊಳಿಸಿದ ಭದ್ರತಾ ಪಡೆಗಳು


ರಾಜೌರಿ, 08 ಜನವರಿ (ಹಿ.ಸ.) :

ಆ್ಯಂಕರ್ : ಜಮ್ಮು–ಕಾಶ್ಮೀರದ ರಾಜೌರಿ ಜಿಲ್ಲೆಯ ಥನ್ನಮಂಡಿ ವ್ಯಾಪ್ತಿಯ ಡೋರಿ ಮಾಲ್‌ನ ಕಲ್ಲಾರ್ ಅರಣ್ಯ ಪ್ರದೇಶದಲ್ಲಿ ನಡೆದ ಜಂಟಿ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಶಂಕಿತ ಸುಧಾರಿತ ಸ್ಫೋಟಕ ಸಾಧನ ಪತ್ತೆಹಚ್ಚಿ, ನಿಯಂತ್ರಿತ ವಿಧಾನದಲ್ಲಿ ಸುರಕ್ಷಿತವಾಗಿ ನಿಷ್ಕ್ರಿಯಗೊಳಿಸಿವೆ.

ಅನುಮಾನಾಸ್ಪದ ಚಟುವಟಿಕೆ ಬಗ್ಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಸೇನೆ ಹಾಗೂ ಪೊಲೀಸರು ಬುಧವಾರ ಜಂಟಿ ಕಾರ್ಯಾಚರಣೆ ಆರಂಭಿಸಿದರು. ಶೋಧದ ವೇಳೆ ಪತ್ತೆಯಾದ ವಸ್ತುಗಳನ್ನು ಪರಿಶೀಲಿಸಿದಾಗ ಸುಮಾರು ನಾಲ್ಕು ಕಿಲೋಗ್ರಾಂ ತೂಕದ ಶಂಕಿತ ಐಇಡಿ ಎಂದು ದೃಢಪಟ್ಟಿತು. ಬಳಿಕ ಸ್ಫೋಟಕ ನಿಷ್ಕ್ರಿಯಗೊಳಿಸುವ ದಳದಿಂದ ಅದನ್ನು ಸುರಕ್ಷಿತವಾಗಿ ನಾಶಪಡಿಸಲಾಯಿತು. ಸ್ಥಳದಿಂದ ಕೆಲವು ಖಾಲಿ ಚಿಪ್ಪುಗಳನ್ನೂ ವಶಪಡಿಸಿಕೊಳ್ಳಲಾಗಿದೆ.

ಪ್ರದೇಶದಲ್ಲಿ ಸಂಪೂರ್ಣ ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande