ಸೋಮನಾಥ ದೇವಾಲಯದ ಮೊದಲ ದಾಳಿಗೆ ೧೦೦೦ ವರ್ಷ
ನವದೆಹಲಿ, 05 ಜನವರಿ (ಹಿ.ಸ.) : ಆ್ಯಂಕರ್ : ಕ್ರಿ.ಶ. 1026ರಲ್ಲಿ ಸೋಮನಾಥ ದೇವಾಲಯದ ಮೇಲೆ ನಡೆದ ಮೊದಲ ದಾಳಿಗೆ ಇದೀಗ 1000 ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆ, ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಸೋಮನಾಥ ದೇವಾಲಯಕ್ಕೆ ಗೌರವ ಸಲ್ಲಿಸುವ ವಿಶೇಷ ಲೇಖನವನ್ನು ಹಂಚಿಕೊಂಡಿದ್ದಾರೆ. ಶತಮಾನಗಳ
Pm


ನವದೆಹಲಿ, 05 ಜನವರಿ (ಹಿ.ಸ.) :

ಆ್ಯಂಕರ್ : ಕ್ರಿ.ಶ. 1026ರಲ್ಲಿ ಸೋಮನಾಥ ದೇವಾಲಯದ ಮೇಲೆ ನಡೆದ ಮೊದಲ ದಾಳಿಗೆ ಇದೀಗ 1000 ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆ, ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಸೋಮನಾಥ ದೇವಾಲಯಕ್ಕೆ ಗೌರವ ಸಲ್ಲಿಸುವ ವಿಶೇಷ ಲೇಖನವನ್ನು ಹಂಚಿಕೊಂಡಿದ್ದಾರೆ.

ಶತಮಾನಗಳ ಕಾಲ ಪುನರಾವರ್ತಿತ ದಾಳಿಗಳು ನಡೆದಿದ್ದರೂ, ಸೋಮನಾಥ ದೇವಾಲಯವು ಭಾರತದ ಅದಮ್ಯ ಸಾಂಸ್ಕೃತಿಕ ಪ್ರಜ್ಞೆ, ನಂಬಿಕೆ ಮತ್ತು ಧೈರ್ಯದ ಜೀವಂತ ಸಂಕೇತವಾಗಿ ಇಂದಿಗೂ ಗರ್ವದಿಂದ ನಿಂತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ ಪ್ರತ್ಯೇಕ ಪೋಸ್ಟ್‌ಗಳಲ್ಲಿ ಪ್ರಧಾನಿ ಮೋದಿ, 2026ನೇ ವರ್ಷವು ಸೋಮನಾಥ ದೇವಾಲಯದ ಮೇಲಿನ ಮೊದಲ ದಾಳಿಯ 1000ನೇ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.

ಆ ನಂತರ ಅನೇಕ ಬಾರಿ ದಾಳಿಗಳು ನಡೆದರೂ ಸೋಮನಾಥ ದೇವಾಲಯ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ನಿಂತಿದೆ. ಇದು ಕೇವಲ ಒಂದು ದೇವಾಲಯದ ಕಥೆಯಲ್ಲ; ಭಾರತ ಮಾತೆಯ ಸಂಸ್ಕೃತಿ ಮತ್ತು ನಾಗರಿಕತೆಯನ್ನು ರಕ್ಷಿಸಲು ತಮ್ಮ ಜೀವನವನ್ನೇ ಸಮರ್ಪಿಸಿದ ಅಸಂಖ್ಯಾತ ಭಾರತೀಯರ ಅಚಲ ಧೈರ್ಯದ ಕಥೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಧಾನಿ ಮೋದಿ ಹಂಚಿಕೊಂಡ ಲೇಖನದಲ್ಲಿ, ಸೋಮನಾಥ ದೇವಾಲಯದ ಐತಿಹಾಸಿಕ ಹೋರಾಟ, ಪುನರ್ನಿರ್ಮಾಣ ಮತ್ತು ಸಾಂಸ್ಕೃತಿಕ ಪುನರುಜ್ಜೀವನವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರ ನಿರ್ಮಾಣದತ್ತ ಭಾರತದ ದೃಢ ಸಂಕಲ್ಪದ ಪ್ರತಿಬಿಂಬವಾಗಿ ವರ್ಣಿಸಲಾಗಿದೆ. ಸಹಸ್ರಾರು ವರ್ಷಗಳ ಕಾಲ ಸೋಮನಾಥ ನಡೆಸಿಕೊಂಡು ಬಂದ ಪ್ರಯಾಣವು ನಂಬಿಕೆ, ಏಕತೆ ಮತ್ತು ಸಾಂಸ್ಕೃತಿಕ ಬೇರುಗಳ ಶಕ್ತಿ ಯಾವುದೇ ಪ್ರತಿಕೂಲತೆಯಿಗಿಂತ ಶ್ರೇಷ್ಠ ಎಂಬುದನ್ನು ನಮಗೆ ಕಲಿಸುತ್ತದೆ ಎಂದು ಅವರು ಹೇಳಿದ್ದಾರೆ.

ಇದಲ್ಲದೆ, ಇತ್ತೀಚಿನ ವರ್ಷಗಳಲ್ಲಿ ಸೋಮನಾಥ ದೇವಾಲಯದ ಪುನರಾಭಿವೃದ್ಧಿ ಯೋಜನೆಯ ಭಾಗವಾಗಿ ಕೈಗೊಂಡ ವಿವಿಧ ಕಾರ್ಯಗಳನ್ನು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿ, ಇವು ರಾಷ್ಟ್ರೀಯ ಪರಂಪರೆ ಸಂರಕ್ಷಣೆಗೆ ನಿರಂತರ ಪ್ರೇರಣೆಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande