

ಮಠವೆಂದರೆ ಪೂಜೆ-ಪುನಸ್ಕಾರ, ತೀರ್ಥ-ಪ್ರಸಾದದ ತಾಣವಾಗಿರುತ್ತದೆ ಇದು ನಿಜಕ್ಕೂ ಹೌದು. ಆದರೆ ಇದಕ್ಕೂ ಭಿನ್ನವೆಂಬಂತೆ ಇರುವ ಆಧ್ಯಾತ್ಮಿಕ, ಧಾರ್ಮಿಕ, ಶೈಕ್ಷಣಿಕ ಜೊತೆಗೆ ಸಾಮಾಜಿಕ ಕ್ಷೇತ್ರದಲ್ಲಿ ತನ್ನದೆ ಆದ ದಿಟ್ಟ ಹೆಜ್ಜೆಗಳನ್ನಿರಿಸಿ, ಬಹುತೇಕ ಯಶಸ್ವಿಗೊಳಿಸಿದೆ. ಭಕ್ತರ ಸೇವೆಯಲ್ಲಿ ಭಗವಂತನನ್ನು ಕಾಣುವ ಅಪರೂಪದ ಸಂಸ್ಥಾನ ಶ್ರೀ ಗವಿಮಠವಾಗಿದೆ. ಪ್ರಾಚೀನ ಪರಂಪರೆವಿರುವ ದಕ್ಷಿಣ ಭಾರತದ ಕುಂಭಮೇಳವಾಗಿದೆ.
ಪ್ರವಾಸಕ್ಕೆಂದು ನಾಡಿನ ಸಾವಿರಾರು ಶಾಲಾ ಮಕ್ಕಳಿಗೆ ಪ್ರಸಾದ ಮತ್ತು ವಸತಿ ಕಲ್ಪಿಸುವ ಶ್ರೀ ಗವಿಮಠದ ಸೇವೆ ಬಹಳ ಶ್ರೇಷ್ಟವಾದದು. ಪ್ರತಿವರ್ಷದ ಡಿಸೆಂಬರ್ ತಿಂಗಳು ಆರಂಭವಾದರೆ ಸಾಕು ಸಾಲು ಸಾಲು ಶಾಲಾ ಮಕ್ಕಳಗಳ ದಂಡು ಆಗಮಿಸುತ್ತದೆ. ಆ ಶಾಲಾ ಶಿಕ್ಷಕರಿಗೆ ಒಂದು ನಂಬಿಕೆ ಗವಿಮಠಕ್ಕೆ ಹೋದರೆ ವಸತಿ ಮತ್ತು ಪ್ರಸಾದಕ್ಕೆ ವಿದ್ಯಾರ್ಥಿಗಳಿಗೆ ತೊಂದರೆಯಾಗಲಾರದು ಎಂದು. ಎಷ್ಟೇ ವಿದ್ಯಾರ್ಥಿಗಳು ಎಷ್ಯೋತ್ತಿಗೆ ಬಂದರೂ ಅವರಿಗೆ ಪ್ರಸಾದ ಮತ್ತು ವಸತಿ ಕಲ್ಪಿಸಿಸುವ ಅಪರೂಪದ ಸಂಸ್ಥಾನ ಶ್ರೀ ಗವಿಮಠವಾಗಿದೆ.
ಅಲ್ಲದೇ ಶ್ರೀ ಮಠಕ್ಕೆ ಬರುವ ಪ್ರತಿ ಭಕ್ತರಿಗೂ ಪ್ರಸಾದ ಮತ್ತು ವಸತಿ ಕಲ್ಪಿಸುತ್ತದೆ. ಜೊತೆಗೆ ಅತ್ಯಂತ ಮಹತ್ವದ ಸಂಗತಿಯಂದರೆ ಎಲ್ಲ ಭಕ್ತರಿಗೆ ಶ್ರೀ ಮಠದ ವಾಹನದ ಮೂಲಕ ಉಚಿತವಾಗಿ ವಸತಿನಿಲಯಕ್ಕೆ ಕರೆದುಕೊಂಡು ಹೋಗುವ ಮತ್ತು ಮರಳಿ ತರುವ ಸೇವೆಯು ಶ್ರೀಮಠ ಮಾಡುತ್ತದೆ. ಉತ್ತರ ಕರ್ನಾಟಕದ ದೊಡ್ಡ ಪ್ರವಾಸಿ ಕೇಂದ್ರ ಶ್ರೀ ಗವಿಮಠವಾಗಿದೆ.
ಶ್ರೀಮಠದ ಸೇವೆಗೆ ಮತ್ತೊಂದು ಗರಿವೆನ್ನುವಂತೆ ಬಡಮಕ್ಕಳ ಶೈಕ್ಷಣಿಕ ಬೆಳವಣಿಗೆಗಾಗಿ ಕೊಪ್ಪಳದಿಂದ 8ಕಿ.ಮಿ ಅಂತರದಲ್ಲಿರುವ ಕಾಟ್ರಳ್ಳಿಯಲ್ಲಿ ಗುರುಕುಲ ಪದವಿಪೂರ್ವ ಮಹಾವಿದ್ಯಾಲಯ ಸ್ಥಾಪಿಸಲಾಗಿದೆ. 40ಕ್ಕಿಂತಲೂ ಹೆಚ್ಚಿನ ವಿಸ್ತಾರವಾದ ಪ್ರದೇಶದಲ್ಲಿ ಈ ಭಾಗದ ಪ್ರತಿಭಾವಂತ ಬಡ ಹೆಣ್ಣು ಮಕ್ಕಳಿಗಾಗಿ ಸ್ಥಾಪಿಸಲಾಗಿದೆ. ಇದು ಸಂಪೂರ್ಣವಾಗಿ ಉಚಿತವಾಗಿದ್ದು, ನಾಡಿನ ಬಡ ಹೆಣ್ಣು ಮಕ್ಕಳಿಗೆ ಆಶಾಕಿರಣವಾಗಲಿದೆ. ವಿದ್ಯೆಯಲ್ಲಿ ಪ್ರಭುದ್ಧರಿದ್ದು ಆರ್ಥಿಕ ತೊಂದರೆಯಿಂದ, ಉನ್ನತ ಶಿಕ್ಷಣದಿಂದ ವಂಚಿತವಾಗುವ ವಿದ್ಯಾರ್ಥಿನಿಯರಿಗೆ ಆಸರೆಯಾಗಿದೆ. ಇಂತಹ ಹತ್ತು ಹಲವಾರು ಜನಪರ ಜೀವಪರ ಕಾಳಜಿಯೊಂದಿಗೆ ಶ್ರೀಮಠವು ಸೇವೆಸಲ್ಲಿಸುತ್ತಿದೆ. ಭಕ್ತರಲ್ಲಿ ಭಗವಂತನನ್ನು ಕಾಣುವ ಶ್ರೀ ಗವಿಮಠದ ಸತ್ಕಾರ್ಯ ಸದಾ ಅನುಪಮ ಅನನ್ಯ.
ಹಸಿವು ಶಿಕ್ಷಣದಿಂದ ಯಾರನ್ನು ವಂಚಿಸಬಾರದು ಎಂಬ ಘನ ಉದ್ಧೇಶದಿಂದ ಈ ಭಾಗದಕಡುಬಡವ, ಪ್ರತಿಭಾವಂತ ಮಕ್ಕಳ ಶೈಕ್ಷಣೀಕ ಭವಿಷ್ಯಕ್ಕಾಗಿ 5000 ವಿದ್ಯಾರ್ಥಿಗಳಿಗೆ ಉಚಿತ ವಸತಿ ಹಾಗೂ ಪ್ರಸಾದ ನಿಲಯವನ್ನು ಸ್ಥಾಪಿಸಿ ಸಾವಿರಾರು ಮಕ್ಕಳಿಗೆ ಆಸರೆಯಾಗಿ ನಿಂತಿದೆ. ಇದು ಎಷ್ಟೋ ಬಡ ಮಕ್ಕಳ ಶಿಕ್ಷಣದಿಂದ ವಂಚಿತರಾಗುವುದನ್ನು ತಪ್ಪಿಸಿದೆ. “ಸತ್ತವರನ್ನು ಬದುಕಿಸುವ ಶಕ್ತಿ ನಮಗಿಲ್ಲ ಆದರೆ ಸಾಯುತ್ತಿರುವವರನ್ನು ಬದುಕಿಸುವ ಶಕ್ತಿ ದೇವರು ನಮಗೆ ಕರುಣಿಸಿದ್ದಾನೆ. ಅದು ರಕ್ತದಾನ ಮಾಡುವುದರ ಮೂಲಕ ಜೀವ ಉಳಿಸುವ ಪುಣ್ಯಕಾರ್ಯದಲ್ಲಿ ಭಾಗಿಯಾಗೋಣ”ಎಂದು ನುಡಿದರು.
ಪೂಜ್ಯ ಶ್ರೀಗಳ ಕರೆಗೆ ಒಗೊಟ್ಟ ಭಕ್ತರು ಮಹಾರಕ್ತದಾನ ಕೊಪ್ಪಳ ಜಿಲ್ಲೆ ರಕ್ತ ಸಂಗ್ರಹಣೆಯಲ್ಲಿ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದೆ ಇದಕ್ಕೆ ಕಾರಣ ಶ್ರೀಮಠದ ಬೃಹತ್ ರಕ್ತದಾನ ಶಿಬಿರ. ಈ ಭಾಗದ ಜೀವನಾಡಿಯಾಗಿದ್ದ ಕೊಪ್ಪಳದ ಹಿರೇಹಳ್ಳದ ಸರಿ ಸುಮಾರು 26 ಕಿಲೋಮಿಟರ್ ಉದ್ದದ ಹಳ್ಳ, ಯಲಬುರ್ಗಾ ತಾಲೂಕಿನ ಕಲ್ಲಭಾವಿ ಕೆರೆ, ಕುಷ್ಟಗಿ ತಾಲೂಕಿನ ತಾವರಗೇರಿಯ ರಾಯನಕೆರೆ, ಹಲಗೇರಿ ಕೆರೆ, ಗಿಣಿಗೇರಾ ಕೆರೆ, ಪುನಶ್ಚೇತನಕ್ಕೆ ಶ್ರಮಿಸಿದ ರೈತರಿಗೆ, ಜನರಿಗೆ ಅನುಕೂಲ ಮಾಡಿದ ಈ ಭಾಗದ ಭಗೀರಥರು ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮೀಗಳವರು. ಸ್ವಾಸ್ಥ್ಯ ಸಮಾಜದಲ್ಲಿ ಸಧೃಡ ಮನಸ್ಸುಗಳನ್ನು ನಿರ್ಮಾಣ ಮಾಡುವ, ಜಾಗೃತಿ ಮೂಡಿಸುವ ಜಾಗೃತಿ ನಡಿಗೆ ಇದಾಗಿತ್ತು. ಸಶಕ್ತಮನ- ಸಂತೃಪ್ತಜೀವನ ಜಾಗೃತಿಯಿಂದ ಜನರಲ್ಲಿ ಮಾನಸಿಕ ಕಾಯಿಲೆಯ ಬಗ್ಗೆ ಅರಿವು ಮೂಡಿದ್ದು, ಆಪ್ತ ಸಮಾಲೋಚನೆ ಪಡೆಯುವವರ ಸಂಖ್ಯೆ ಹಿಂದಿನಿಗಿಂತಲೂ ಜಿಲ್ಲೆಯಲ್ಲಿ ಈಗ ಹೆಚ್ಚಾಗಿರುವುದು ಗಮನಾರ್ಹ. “ಇರುವಾಗ ಪ್ರಪಂಚವನ್ನು ನೋಡಿ ಆನಂದಿಸುತ್ತೆವೆ. ಸತ್ತ ಮೇಲೂ ಪ್ರಪಂಚ ನೋಡಬೇಕಾದರೆ ನೇತ್ರದಾನ ಮಾಡಿ, ಜಗತ್ತೆಕತ್ತಲಾದ ಸಾವಿರಾರು ಅಂಧರಿಗೆ ನಮ್ಮ ದೃಷ್ಟಿ ಬೆಳಕು ಕೊಡುವುದಾದರೆ ಈ ಹುಟ್ಟು ಸಾವಿನಲ್ಲೂ ಸಾರ್ಥಕವಾಗುವಕ್ಷಣ ನಮ್ಮದಾಗಲಿ” ಆಶೀರ್ವಚನ ನೀಡಿದ್ದು ಕೃಪಾದೃಷ್ಠಿ ಜಾಗೃತಿಯಿಂದ ನೇತ್ರದಾನ ಮಾಡುವುದರ ಮೂಲಕ ಸಾವಿನಲ್ಲೂ ಸಾರ್ಥಕತೆಯನ್ನು ಮೆರೆಯುತ್ತದ್ದಾರೆ. ಇದು ನೇತ್ರದಾನ ಮಹತ್ವದ ಅರಿವು ನೀಡಿತು. “ದೈವ ಸಾಕ್ಷಾತ್ಕಾರಕ್ಕೆ ಲಕ್ಷ ದೀಪೋತ್ಸವ, ಪ್ರಕೃತಿ ಸಾಕ್ಷಾತ್ಕಾರಕ್ಕೆ ¯ಕ್ಷ ವೃಕ್ಷೋತ್ಸವ”ಎಂಬ ಶ್ರೀಮಠದಿಂದ ಒಂದು ಲಕ್ಷಕ್ಕೂ ಹೆಚ್ಚಿನ ವಿವಿಧ ಸಸಿಗಳನ್ನು ಬೆಳೆಸಿ ವಿವಿಧ ಬಡಾವಣೆಳಲ್ಲಿ, ಪ್ರಮುಖ ರಸ್ತೆಗಳಲ್ಲಿ, ಜಿಲ್ಲೆಯ ವಿವಿಧ ಶಾಲಾ-ಕಾಲೇಜುಗಳಲ್ಲಿ ಸಸಿಗಳನ್ನು ನೆಡಲಾಗಿತ್ತು. ಹಾಗೂ ಶ್ರೀಮಠಕ್ಕೆ ಆಗಮಿಸಿದ ಭಕ್ತರಿಗೆ ಉಚಿತವಾಗಿ ಸಸಿಗಳನ್ನು ವಿತರಿಸಲಾಯಿತು.
ಇದು ಹಸಿರು ಜಾಗೃತಿಯ ಹೊಸ ಕ್ರಾಂತಿಯನ್ನು ಉಂಟು ಮಾಡಿತು. ಕೊಪ್ಪಳದ ಸುತ್ತಮುತ್ತಲೂ ಅಧಿಕವಾದ ಕೈಗಾರಿಕೆಗಳು ಕುಲುಷಿತ ವಾತಾವರಣ ತಡೆಯಲು ನಾಡನ್ನು ಹಸಿರಾಗಿಸಲು ಈ ಜಾಗೃತಿ ಮಹತ್ವದ ಪಾತ್ರ ವಹಿಸಿತು. 2021 ಮತ್ತು 2022ಮಹಾಮಾರಿ ಕೋವಿಡ್-19ರ ತುರ್ತು ಪರಿಸ್ಥಿತಿಯಲ್ಲಿ ಯಾವುದೇ ಸಾಮಾಜಿಕ ಜಾಗೃತಿ ಬಿಡಲಿಲ್ಲ, ಆದರೂ ಶ್ರೀಮಠವು ಸಮಾಜ ಸೇವೆಯನ್ನು ನಿಲ್ಲಿಸಲಿಲ್ಲ. ಕುಕನೂರು ತಾಲೂಕಿನ ಅಡವಿಹಳ್ಳಿ ಗ್ರಾಮವನ್ನು ದತ್ತು ಪಡೆದು ಮಾದರಿ ಗ್ರಾಮವನ್ನಾಗಿ ಮಾಡಲಾಗಿಯಿತು. ತುರ್ತು ಪರಿಸ್ಥಿತಿಯಲ್ಲಿ ಶ್ರೀಮಠದ ವೃದ್ಧಾಶ್ರಮದಲಿ ್ಲಕೋವಿಡ್ ರೋಗಿಗಳಿಗಾಗಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಉಚಿತ ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್‍ನ್ನು ನಿರ್ಮಿಸಿ ಅನೇಕ ಭಕ್ತರ ಜೀವ ರಕ್ಷಿಣೆಯಲ್ಲಿ ಶ್ರಿಮಠದ ಪಾತ್ರ ಅವಿಸ್ಮರಣೀಯ. ಸತ್ತ ಮೇಲೂ ಬದುಕುವಯೋಗ, ಸಾಯುವವನಿಗೆ ಅಂಗಾಂಗ ಯೋಗ’ ಎಂಬ ಘೋಷ ವಾಕ್ಯದೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾತ್ತು.
ಸದರಿ ಕಾರ್ಯಕ್ರಮವು ಅಂಗಾಂಗ ದಾನದ ಅರಿಯು ಮೂಡಿಸಿತು. ಮತ್ತು ವಿಕಳಚೇತನರಿಗೆ ಕೃತಕ ಕಾಲು ಜೋಡಣೆ ಮಾಡುವುದರ ಮೂಲಕ ವಿಕಲಚೇತನರಗೆ ಶ್ರೀಮಠವು ಉರುಗೋಲಾಯಿತು.
ಕಾಯಕದೇವೊಭವ ಜಾಗೃತಿ ಜಾಥಾ ‘ಸ್ವಾವಲಂಬಿ ಬದುಕು, ಸಮೃದ್ಧಿ ಬದುಕು, ಸಂತೋಷದ ಬದುಕು’ ಎಂಬ ಘೋಷವಾಕ್ಯದೊಂದಿಗೆ ಯಶಸ್ವಿಯಾಗಿ ಜರುಗಿತು.
ವಿಕಲ ಚೇತನರ ನಡೆ ಸಕಲ ಚೇತನರ ಕಡೆ’ ಅವರಿಗೆ ಚೈತನ್ಯ ಒದಗಿಸುವ ದೃಷ್ಠಿಯಿಂದ ಉಚಿತ ಸಾಮೂಹಿಕ ವಿವಾಹ ಮದುವೆಯ ನಂತರ ಉತ್ತಮ ಜೀವನ ನಿರ್ವಹಣೆಗೆ ಅನುಕೂಲವಾಗಲು ಜೀವನೋಪಾಯಕ್ಕಾಗಿ 1 ಝರಾಕ್ಸ್‍ಯಂತ್ರ, ಪೆಟ್ಟಿಶಾಪ್ (ಸಣ್ಣಅಂಗಡಿ) ಅವರ ಜೀವನಕ್ಕೆ ಅಸರೆಯಾಯಿತು. ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಂಗಣದಲ್ಲಿ ಮುದ್ರಿತ ಪುಸ್ತಕ, ಇ-ಪುಸ್ತಕ ಬೃಹತ್ ಮತ್ತು ಅತ್ಯಾಧುನಿಕ ಸೌಕರ್ಯವುಳ್ಳ ಗ್ರಂಥಾಲಯ ಇದಾಗಿದೆ. ದಿನದ 24 ಗಂಟೆಯು ತೆರೆದಿರುವ ಈ ಬೃಹತ್ ಗ್ರಂಥಾಲಯ ಸ್ಪರ್ದಾತ್ಮಕ ಪರೀಕ್ಷೆ ಎದುರಿಸುತ್ತಿರುವ ನೂರಾರು ಬಡ ವಿದ್ಯಾರ್ಥಿಗಳ ಜೀವನ ಯಶಸ್ವಿಗೆ ಕಾರಣವಾಗಿದೆ. ಹೀಗೆ ಹಲವಾರು ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡ ಭಕ್ತರಲ್ಲಿ ಭಗವಂತನನ್ನು ಕಾಣುವ ಶ್ರೀ ಗವಿಮಠದ ಸತ್ಕಾರ್ಯ ಸದಾ ಅನುಪಮ ಅನನ್ಯ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್