ಗುರುವಿಗೆ ಗುರುವಾದ ಶ್ರೀ ಗವಿಸಿದ್ಧೇಶ್ವರರು
ಶಿವಭಕ್ತನಿದ್ದ ಠಾವೆ ದೇವಲೋಕ, ಭಕ್ತನಂಗಳವೆ ವಾರಣಾಸಿ, ಶಿವ ಭಕ್ತನಕಾಯವೇ ಕೈಲಾಸ ಎಂದು ಭಾವಿಸಿ ಶಿವಜೀವನಗೈದವರು, ಮಹಾತಪಸ್ವಿಗಳು ಸಂಸ್ಥಾನ ಶ್ರೀ ಗವಿಮಠದ 11ನೇ ಪೀಠಾಧಿಪತಿಗಳಾದ, ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳವರ ಕರ್ತೃ ಗದ್ದುಗೆಯೇ ಶ್ರೀ ಗವಿಮಠದ ಕೇಂದ್ರಸ್ಥಾನ. ಸದ್ಗುರು ಶ್ರೀ ಗವಿಸಿದ್ಧೇಶ್ವರರ
ಗುರುವಿಗೆ ಗುರುವಾದ ಶ್ರೀ ಗವಿಸಿದ್ಧೇಶ್ವರರು


ಗುರುವಿಗೆ ಗುರುವಾದ ಶ್ರೀ ಗವಿಸಿದ್ಧೇಶ್ವರರು


ಗುರುವಿಗೆ ಗುರುವಾದ ಶ್ರೀ ಗವಿಸಿದ್ಧೇಶ್ವರರು


ಗುರುವಿಗೆ ಗುರುವಾದ ಶ್ರೀ ಗವಿಸಿದ್ಧೇಶ್ವರರು


ಶಿವಭಕ್ತನಿದ್ದ ಠಾವೆ ದೇವಲೋಕ, ಭಕ್ತನಂಗಳವೆ ವಾರಣಾಸಿ, ಶಿವ ಭಕ್ತನಕಾಯವೇ ಕೈಲಾಸ ಎಂದು ಭಾವಿಸಿ ಶಿವಜೀವನಗೈದವರು, ಮಹಾತಪಸ್ವಿಗಳು ಸಂಸ್ಥಾನ ಶ್ರೀ ಗವಿಮಠದ 11ನೇ ಪೀಠಾಧಿಪತಿಗಳಾದ, ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳವರ ಕರ್ತೃ ಗದ್ದುಗೆಯೇ ಶ್ರೀ ಗವಿಮಠದ ಕೇಂದ್ರಸ್ಥಾನ. ಸದ್ಗುರು ಶ್ರೀ ಗವಿಸಿದ್ಧೇಶ್ವರರ ಮೂಲ ನಾಮ ಗುಡದಯ್ಯ. ಕೊಪ್ಪಳಕ್ಕೆ ಸಮೀಪವಿರುವ ಮಂಗಳಾಪುರ ಗ್ರಾಮದವರು. ಗುರುಲಿಂಗಮ್ಮ ಮಹಾದೇವಯ್ಯ ಎಂಬ ಪುಣ್ಯ ದಂಪತಿಗಳ ಉದರದಲ್ಲಿ ಜನಿಸಿ ಬಂದವರು.

ಬೆಳೆಯುವ ಸಿರಿ ಮೋಳಕೆಯಲ್ಲಿ ಎನ್ನುವಂತೆ ಶಿಶುವಿರುವಾಗಲೆ ತಮ ್ಮಉಜ್ವಲ ಪ್ರಭೆಯಿಂದ ಎಲ್ಲರನ್ನು ಬೆರಗುಗೂಳಿಸಿದವರು. ಶ್ರೀ ಗವಿಸಿದ್ಧೇಶ್ವರರು ಬಾಲ್ಯದಲ್ಲಿ ಸದಾ ಏಕಾಂತವಾಗಿ ಅಡವಿ, ಗುಡ್ಡದಲ್ಲೆಲ್ಲಾ ಅಲೆಯುತ್ತಾ, ಮಳಲ ಮಲ್ಲೇಶ್ವರರ ಸ್ಮರಣೆಯಲ್ಲಿ ಸದಾ ತಪಸ್ಸು, ತ್ರಿಕಾಲ ಪೂಜೆಯಲ್ಲಿ ನಿರತರಾಗಿ ಶಿವ ಜೀವನಗೈದವರು. ಒಂದು ದಿನ ಅವರ ಮಹಾಮಹಿಮೆ ಪ್ರಜ್ವಲಿಸುವ ಸಮಯ ಬಂದೊದಗಿತು. ಮಹಾಮಹಿಮ ಶ್ರೀ ಗವಿಸಿದ್ಧೇಶ್ವರರು ಶಿವ ಜೀವನಗೈಯುವ ತಾಣದಲ್ಲಿ ಮೇಯುತ್ತಿದ್ದ ಕೊಪ್ಪಳದ ಬಸನಗೌಡರ ಆಕಳು ಆಕಸ್ಮಿಕವಾಗಿ ಮರಣಹೊಂದಿತು.

ಆಕಳು ಕಳೆದುಕೊಂಡು ವಿಚಲಿತರಾದ ದನಗಾಹಿಗಳ ಚೀರಾಟ, ಬಸನಗೌಡರ ಆಕ್ರಂದನ ಕೇಳಿ ಪೂಜಾ ನಿರತರಾಗಿದ್ದ ಸದ್ಗುರು ಶ್ರೀ ಗವಿಸಿದ್ಧೇಶ್ವರರು ಕಣ್ಣು ತೆರೆದು ಸಕಲವನ್ನು ವೀಕ್ಷಿಸಿ, ಎಲ್ಲಿ ಜೀವವಿದೆಯೋ ಅಲ್ಲಿ ದೇವರ ಅಸ್ತಿತ್ವ ಅನುಭವಿಸಿದ ಅವರು ಮರಣ ಹೊಂದಿದ ಗೋವಿಗೆ ಜಲ-ಭಸ್ಮಾದಿಗಳನ್ನು ಲೇಪಿಸಿ ಭಗವಂತನ ನಾಮ ಸ್ಮರಣೆಗೈದರು. ಆಗ ಮರಣ ಹೊಂದಿದ ಆಕಳು ಜೀವದಳೆಯಿತು.

ಈ ಪವಾಡ ಸದೃಶ್ಯ ಕಣ್ಣಾರೆ ಕಂಡ ಬಸನಗೌಡರು ಪೂಜ್ಯರನ್ನು ತಮ್ಮ ಮನೆಗೆ ಕರೆತಂದರು. ಪೂಜ್ಯರು ಪರರ ಹಿತಕ್ಕಾಗಿ ತಮ್ಮ ಸಮಸ್ತ ಬದುಕನ್ನು ಧಾರೆ ಎರೆದು ಬಳಲಿ ಬಂದ ಭಕ್ತರ ಇಷ್ಟಾರ್ಥಗಳನ್ನು ಪೂರೈಸಿದರು. ಗೌಡರ ಮನೆಯೇ ಮಠದ ಸದೃಶ್ಯವಾಯಿತು. ಈ ಎಲ್ಲಾ ವಿಷಯಗಳನ್ನು ಹೇಳುತ್ತಾ ಸಂಸ್ಥಾನ ಶ್ರೀ ಗವಿಮಠದ 10ನೇ ಪಿಠಾಧೀಪತಿಗಳಾದ ಶ್ರೀ ಚನ್ನಬಸವ ಮಹಾಸ್ವಾಮಿಗಳು ಗವಿಸಿದ್ಧೇಶ್ವರರನ್ನು ಶ್ರೀಮಠಕ್ಕೆ ಆಮಂತ್ರಿಸಿದರು. ಭಕ್ತಿಯಿಂದ ಬೇಡಿದರೆ ಕರುಣಿಸನೆ ಶಿವನು ಎನ್ನುವ ಹಾಗೆ ಶ್ರೀ ಗವಿಸಿದ್ಧೇಶ್ವರರಿಗೂ ಸಹ ಶ್ರೀಮಠಕ್ಕೆ ಬರುವ ಭಕ್ತಿಯ ಸದಾಶಯವಿತ್ತು. ಶ್ರೀ ಗವಿಸಿದ್ಧೇಶ್ವರರ ಪೂರ್ವನಾಮ ಗುಡದಯ್ಯವೆಂಬುದಾಗಿತ್ತು.

ಶ್ರೀ ಚನ್ನಬಸವ ಮಹಾಸ್ವಾಮಿಗಳವರು ಗುಡದಯ್ಯನಿಗೆ ಸಕಲ ಸಂಸ್ಕಾರವನ್ನು ನೀಡಿ ಶ್ರೀಮಠದ 11ನೇ ಅಧಿಪತಿಯನ್ನಾಗಿ ನೇಮಿಸಿ, ಜ. ಶ್ರಿ. ಗವಿಸಿದ್ಧೇಶ್ವರ ಮಹಾಸ್ವಾಮಿಗಳೆಂದು ಅಭಿದಾನವನ್ನಿತ್ತರು. ಆಧ್ಯಾತ್ಮ, ಅನ್ನ, ಅಕ್ಷರ ತ್ರಿವಿಧ ದಾಸೋಹಗಳನ್ನು ನಿತ್ಯ ನಿರಂತರ ತಮ್ಮ ಕಾಯಕವನ್ನಾಗಿ ಮಾಡಿಕೊಂಡು ಬಂದ ಪೂಜ್ಯರು ಗುರುಗಳಾಗಿದ್ದ ಶ್ರೀ ಚನ್ನಬಸವ ಮಹಾಸ್ವಾಮಿಗಳು ತಮಗಾಗಿಯೇ ಸಿದ್ಧಪಡಿಸಿದ್ದ ಸಮಾಧಿಯಲ್ಲಿ ಶ್ರೀ ಗವಿಸಿದ್ಧೇಶ್ವರರು ಧ್ಯಾನ ಗೈಯುತ್ತಲೇ ಲಿಂಗೈಕ್ಯರಾದರು.

ಹೀಗೆ ತಮ್ಮ ಗುರುಗಳಿಗಾಗಿ ಸಿದ್ಧಪಡಿಸಿದ ಗದ್ದುಗೆಯಲ್ಲೇ ತಾವೇ ಪ್ರವೆಶಿಸಿ ಸಜೀವ ಗದ್ದುಗೆಗೊಂಡವರು. ಗುರು ಭಕ್ತಿ ಅರ್ಪಣೆಗೆ ಗುರುವಿಗೆ ಗುರುವಾದವರೂ ಶ್ರೀ ಗವಿಸಿದ್ಧೇಶ್ವರರು. ಸಜೀವ ಸಮಾಧಿಹೊಂದಿದ ಶ್ರೀ ಗವಿಸಿದ್ಧೇಶ್ವರರನ್ನು ಗುರುಗಳಾದ ಶ್ರೀ ಚನ್ನಬಸವ ಮಹಾಸ್ವಾಮಿಗಳವರು ಮುಂದಿನ ಶಿವ ಕಾರ್ಯವನ್ನು ನೆರವೇರಿಸಿದರು. ಅಂದಿನಿಂದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಶ್ರೀ ಗವಿಸಿದ್ದೇಶ್ವರರು ಲಿಂಗೈಕ್ಯರಾಗಿ ಶತಶತಮಾನಗಳು ಸಂದಿದ್ದರೂ ಇಂದಿಗೂ ಅವರು ಭಕ್ತ ಮಾನಸದಲ್ಲಿ ಆರಾಧ್ಯದೈವರಾಗಿ ನೆಲೆನಿಂತದ್ದಾರೆ. ತಮ್ಮಜೀವನದಲ್ಲಿ ಸರ್ವ ಸಂಪತ್ತು ಶ್ರೀ ಗವಿಸಿದ್ಧೇಶ್ವರ ಆಶಿರ್ವಾದದಿಂದ ಪ್ರಾಪ್ತವಾಗಿದೆ ಅವರ ಕರುಣೆಯಿಂದ ಲಭಿಸಿದ ಫಲವೆಂದು ಭಾವಿಸಿದ ಲಕ್ಷಾನು ಲಕ್ಷ ಭಕ್ತರು ಕೃತಾರ್ಥ ಭಾವದೊಂದಿಗೆ ಶ್ರೀ ಗವಿಸಿದ್ಧೇಶ್ವರರ ಕತೃಗದ್ದುಗೆ ಸನ್ನಿಧಿಗೆ ಆಗಮಿಸಿ ಮಹಾದಾಸೋಹಗೈದು ಧನ್ಯರಾಗುತ್ತಾರೆ. ಸಾವಿರರು ವರ್ಷಗಳ ಪ್ರಾಂಜಲ ಪರಂಪರೆ ಇತಿಹಾಸವಿರುವ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ನಿತ್ಯ ನಿರಂತರವಾಗಿ ಸಾಗಿ ಬಂದಿದೆ. ಪೂಜ್ಯಶ್ರೀ ರುದ್ರಮುನಿ ಶಿವಯೋಗಿಗಳವರಿಂದ ಆರಂಭಗೊಂಡ ಶ್ರೀಮಠದ ಭವ್ಯ ಪರಂಪರೆ ಈಗಾಗಲೇ 18 ಪೀಠಾಧೀಶ್ವರರನ್ನು ಹೊಂದಿದ ಪರಂಪರೆ ಅನನ್ಯ.

ಶ್ರೀ ಗವಿಸಿದ್ಧೇಶ್ವರ ಸ್ವಾಮಿಜಿಯವರ ಪುಣ್ಯಪರಂಪರೆಯನ್ನು ಮುಂದುವರೆಸಿಕೊಂಡು ಹೋದವವ ಸಾಲಿನಲ್ಲಿ 16ನೇ ಪೀಠಾಧಿಕಾರಿಯಾಗಿದ್ದ ಶ್ರೀ ಮರಿಶಾಂತವೀರ ಮಾಹಾಸ್ವಾಮಿಗಳು. ವಿದ್ವಾಂಸರಾದ ಇವರು ಜನತೆಯ ಉದ್ಧಾರ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದರಿತು ಸುತ್ತಮುತ್ತಲಿನ ಹಳ್ಳಿಗಳ ಕಡುಬಡವ ವಿದ್ಯಾರ್ಥಿಗಳಿಗೆ ಶ್ರೀ ಗವಿಸಿದ್ಧೇಶ್ವರ ಶಾಲೆ 1951ರಲ್ಲಿ ಸ್ಥಾಪಿಸಿದರು. ಇದು ಕಲ್ಯಾಣಕ ರ್ನಾಟಕದಲ್ಲಿ ಸ್ಥಾಪಿತವಾದ ಪ್ರಥಮ ಖಾಸಗಿ ಶಾಲೆ. ಶೈಕ್ಷಣಿಕ ಕಾಳಜಿಯಿಂದ ಇವರು ಶ್ರೀ ಗವಿಸಿದ್ಧೇಶ್ವರ ವಿದ್ಯಾವರ್ಧಕ ಟ್ರಸ್ಟನ್ನು ಸ್ಥಾಪಿಸಿ ಶ್ರೀಮಠದ ಆಸ್ತಿಯನಲ್ಲ ಟ್ರಸ್ಟಿಗೆ ದಾನ ನೀಡಿದರು.

ಅದರ ಫಲವಾಗಿ ಅನೇಕ ಸಂಸ್ಥೆಗಳು ಸಾಕಾರಗೊಂಡವು. ಇವರ ನಂತರ ಮಠದ ಸತ್ ಸಂಪ್ರದಾಯವನ್ನು ಜೀವಂತವಾಗಿಟ್ಟವರು ಸಂಸ್ಥಾನದ 17ನೇ ಪೀಠಾಧಿಪತಿಗಳು ಶ್ರೀ ಶಿವಶಾಂತವೀರ ಮಾಹಾಸ್ವಾಮಿಗಳು ಇವರು 1998ರಲ್ಲಿ ಕೊಪ್ಪಳದಲ್ಲಿ ಶ್ರೀ ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಯುರ್ವೇದ ಆಸ್ಪತ್ರೆಯನ್ನು ಸ್ಥಾಪಿಸಿ, ಬಡವರಿಗೆ ಉಚಿತವಾಗಿ ಚಿಕಿತ್ಸೆ ಮತ್ತು ಔಷದಿ ಲಭ್ಯವಾಗುವಂತೆ ಮಾಡಿದರು. ಶ್ರೀ ಅಭಿನವ ಗವಿಸಿದ್ಧೇಶ್ವರ ಮಾಹಾಸ್ವಾಮಿಗಳು ಪ್ರಸ್ತುತ ಪೀಠಾಧೀಶರಾಗಿದ್ದಾರೆ.

ಪ್ರಗತಿಪರ ಧೋರಣೆಗಳಿಂದ ಪೂರ್ವ ಪೀಠಗಳ ಸಂಕಲ್ಪಗಳನ್ನು ಸಾಕಾರಗೂಳಿಸಲು ಅವಿರತ ಪರಿಶ್ರಮಿಸುತ್ತಿರುವ ಶ್ರೀಗಳೂ ತಮ್ಮನ್ನು ತಾವು ಶ್ರೀಮಠದ ಸೇವಕನಂತೆ ಸಮರ್ಪಿಸಿಕೊಂಡಿದ್ದಾರೆ. ಪೂಜ್ಯ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಜೀವಕ್ಕಾಗಿ ಅನ್ನ, ಜೀವನಕ್ಕಾಗಿ ಶಿಕ್ಷಣ, ಶಕ್ತಿಗಾಗಿ ಆರೋಗ್ಯ ಆತ್ಮದ ಅರಿವಿಗಾಗಿ ಆಧ್ಯಾತ್ಮ ಇವರ ಧ್ಯೇಯ ಮಂದಿರಗಳಾಗಿಸಿ, ಆಚಾರಗೂಳಿಸಿ, ಮಠದ ಆಶ್ರಯದಲ್ಲಿ ಶೈಕ್ಷಣೀಕ ಕ್ರಾಂತಿಯ ಫಲದಿಂದ ಶೈಕ್ಷಣಿಕ ಹಾಗೂ ಇತರ ಸಂಸ್ಥೆಗಳು ಸೇವೆಯಲ್ಲಿ ನಿರತವಾಗಿವೆ. ಶ್ರೀಮಠದ ಮಹಾಶಿವಯೋಗಿಗಳ ತಪಃಶಕ್ತಿಯಿಂದ ಶ್ರೀಮಠವು ನಾಡಿನ ಬಹುದೊಡ್ಡ ಆಧ್ಯಾತ್ಮಿಕ, ಶೈಕ್ಷಣಿಕ ಕೇಂದ್ರವಾಗಿ ಬೆಳೆದಿದೆ.

ಶ್ರೀ ಗವಿಸಿದ್ಧೇಶ್ವರರ ಮಹಾರಥೋತ್ಸವ ಈ ನಾಡಿನ ಬಹುದೊಡ್ಡ ಹಬ್ಬವಾಗಿ ಪರಿಣಮಿಸಿದೆ. ಅನ್ನ, ಅರಿವು, ಆಧ್ಯಾತ್ಮ, ಆಶ್ರಯ, ಹಾಗೂ ಆರೋಗ್ಯ ಪಂಚವಿಧ ದಾಸೋಹ ಕೇಂದ್ರವಾಗಿದೆ. ಬಹು ವಿಜೃಂಭಣೆಯಿಂದ ಜರಗುವ ಮಹಾರಥೋತ್ಸವದಲಿ ್ಲಆಕರ್ಷಕ ನಂದಿಕೋಲು, ಪಂಜು, ಇಲಾಲುಗಳು, ವಾದ್ಯಗಳು, ಭಕ್ತರ ಜಯಘೋಷಗಳು ಮುಗಿಲು ಮುಟ್ಟುತ್ತವೆ. ಲಕ್ಷೋಪಲಕ್ಷ ಭಕ್ತರು ಸಾಕ್ಷೀಯಾಗಿ ಶ್ರೀ ಗವಿಸಿದ್ಧನ ಕೃಪೆಗೆ ಕೃತಾರ್ಥರಾಗುತ್ತಾರೆ. ಇಂತಹ ಪವಿತ್ರವಾಗಿರುವ ಕೊಪ್ಪಳ ಶ್ರೀ ಗವಿಸಿದ್ಧೇಶ್ವರರ ಮಹಾರಥೋತ್ಸವದಲ್ಲಿ ಭಕ್ತಗಣಗಳಲ್ಲಿ ನಾವು ಒಂದಾಗೋಣ! ಭಕ್ತಿ ಭಾವದಲ್ಲಿ ತನ್ಮಯ ರಾಗೋಣ! ಶ್ರೀ ಗವಿಸಿದ್ಧೇಶ್ವರರ ದರ್ಶನಗೈದು ಪಾವನರಾಗೋಣ!.

ಡಾ. ನಾಗರಾಜ ದಂಡೋತಿ

ಲೇಖಕ, ಸಹಾಯಕ ಪ್ರಾಧ್ಯಾಪಕ

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande