
ನವದೆಹಲಿ, 03 ಜನವರಿ (ಹಿ.ಸ.) :
ಆ್ಯಂಕರ್ : ರಾಣಿ ವೇಲು ನಾಚಿಯಾರ್ ಅವರ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್’ ಮೂಲಕ ಅವರಿಗೆ ಗೌರವ ನಮನ ಸಲ್ಲಿಸಿದರು.
ಧೈರ್ಯ, ಯುದ್ಧತಂತ್ರದ ಪಾಂಡಿತ್ಯ ಮತ್ತು ಅಪಾರ ಸಾಹಸವನ್ನು ಮೈಗೂಡಿಸಿಕೊಂಡ ಭಾರತದ ಅತ್ಯಂತ ಧೀರ ಯೋಧರಲ್ಲಿ ರಾಣಿ ವೇಲು ನಾಚಿಯಾರ್ ಒಬ್ಬರಾಗಿದ್ದಾರೆ ಎಂದು ಪ್ರಧಾನಿ ಸ್ಮರಿಸಿದರು.
ವಸಾಹತುಶಾಹಿ ದಬ್ಬಾಳಿಕೆಯ ವಿರುದ್ಧ ಅವರು ಧೈರ್ಯವಾಗಿ ಬಂಡೆದ್ದು, ಭಾರತೀಯರು ತಮ್ಮನ್ನು ತಾವು ಆಳುವ ಹಕ್ಕನ್ನು ದೃಢವಾಗಿ ಪ್ರತಿಪಾದಿಸಿದ ಮಹಾನ್ ನಾಯಕಿ ಎಂದು ಮೋದಿ ಹೇಳಿದರು.
ಉತ್ತಮ ಆಡಳಿತ ವ್ಯವಸ್ಥೆ ಹಾಗೂ ಸಾಂಸ್ಕೃತಿಕ ಹೆಮ್ಮೆಯ ರಕ್ಷಣೆಯತ್ತ ಅವರ ಬದ್ಧತೆ ಶ್ಲಾಘನೀಯವಾಗಿದ್ದು, ಅವರ ತ್ಯಾಗ ಮತ್ತು ದೂರದೃಷ್ಟಿಯ ನಾಯಕತ್ವವು ಪೀಳಿಗೆಯಿಂದ ಪೀಳಿಗೆಗೆ ದೇಶಭಕ್ತರಿಗೆ ಪ್ರೇರಣೆಯಾಗಿ ಮುಂದುವರಿಯಲಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa