
ವಿಜಯಪುರ, 21 ಜನವರಿ (ಹಿ.ಸ.) :
ಆ್ಯಂಕರ್ : ವಿಜಯಪುರ ಜಿಲ್ಲೆಯ ಸಿಂದಗಿ ವ್ಯಸನ ಮುಕ್ತ ಕೇಂದ್ರದಲ್ಲಿ ವ್ಯಕ್ತಿಯೋರ್ವನ ಮೇಲೆ ಮಾರಣಾಂತಿಕ ಹಲ್ಲೆಗೈದಿರುವ ಘಟನೆ ನಡೆದಿದೆ.
ಹುಚ್ಚಪ್ಪ ಡೋಣುರ ಎಂಬುವರಿಗೆ ವ್ಯಸನ ಮುಕ್ತ ಸಿಬ್ಬಂದಿಯಿಂದಲ್ಲೆ ಮನಸೋ ಇಚ್ಛೆ ಹಲ್ಲೆ ಮಾಡಲಾಗಿದೆ ಎಂದು ಆರೋಪ ಕೇಳಿಬಂದಿದೆ. ಮದ್ಯಪಾನ ಕುಡಿತದ ಚಟ ಬಿಡಿಸುವ ವ್ಯಸನ ಮುಕ್ತ ಕೇಂದ್ರ ವೈಷ್ಣವಿ ಆಸ್ಪತ್ರೆಯಲ್ಲಿ ಘಟನೆ ಆಗಿದೆ.
ಕುಡಿತ ಬಿಡಿಸುವ ನಶಾ ಮುಕ್ತ ಕೇಂದ್ರ ತೆಗೆದ ಪೊಲೀಸ್ ಸಿದ್ದು ಮುರಡಿ ತನ್ನ ಪತ್ನಿ ಹೆಸರಿನಲ್ಲಿ ಈ ಕೇಂದ್ರ ನಡೆಸುತ್ತಿದ್ದಾನೆ.
ಯಾವುದೇ ಪದವಿ ಮುಗಿಯದ ಪತ್ನಿ ವೈಷ್ಣವಿ ಹೆಸರಿನಲ್ಲಿ ಆಸ್ಪತ್ರೆ ನಡೆಸುತ್ತಿದ್ದಾನೆ. ಸಿದ್ದು ಅಧಿಕಾರ ದುರುಪಯೋಗ ಪಡಿಸಿಕೊಂಡು ಜನರಿಗೆ ಬೆದರಿಕೆ ಹಾಕುತ್ತಿದ್ದಾನೆ ಎಂದು ಆರೋಪಗಳು ಕೇಳಿಬಂದಿವೆ. ಸಾವಿರಾರು ರೂಪಾಯಿ ಪಡೆದು ವ್ಯಸನಿಗಳಿಗೆ ಸರಿಯಾದ ಮಾತ್ರೆ ಚಿಕಿತ್ಸೆ ನೀಡದೆ ಹೊಡೆದು ಬಡೆದು ಬೆದರಿಸಿ ಚಿಕಿತ್ಸೆ ನೀಡುತ್ತಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande