ಫೆಬ್ರವರಿ 3ರಿಂದ ರಾಷ್ಟ್ರಪತಿ ಭವನದ ಅಮೃತ್ ಉದ್ಯಾನ ಸಾರ್ವಜನಿಕರಿಗೆ ಮುಕ್ತ
ನವದೆಹಲಿ, 21 ಜನವರಿ (ಹಿ.ಸ.) : ಆ್ಯಂಕರ್ : ರಾಷ್ಟ್ರಪತಿ ಭವನದ ಆವರಣದಲ್ಲಿರುವ ಪ್ರಸಿದ್ಧ ಅಮೃತ್ ಉದ್ಯಾನವನ್ನು ಫೆಬ್ರವರಿ 3ರಿಂದ ಮಾರ್ಚ್ 31ರವರೆಗೆ ಸಾರ್ವಜನಿಕರಿಗೆ ತೆರೆಯಲಾಗುತ್ತದೆ. ಸಾರ್ವಜನಿಕರು ವಾರದಲ್ಲಿ ಆರು ದಿನಗಳು ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಉದ್ಯಾನಕ್ಕೆ ಭೇಟಿ ನೀಡಬಹುದಾಗಿದೆ. ಕ
Garden


ನವದೆಹಲಿ, 21 ಜನವರಿ (ಹಿ.ಸ.) :

ಆ್ಯಂಕರ್ : ರಾಷ್ಟ್ರಪತಿ ಭವನದ ಆವರಣದಲ್ಲಿರುವ ಪ್ರಸಿದ್ಧ ಅಮೃತ್ ಉದ್ಯಾನವನ್ನು ಫೆಬ್ರವರಿ 3ರಿಂದ ಮಾರ್ಚ್ 31ರವರೆಗೆ ಸಾರ್ವಜನಿಕರಿಗೆ ತೆರೆಯಲಾಗುತ್ತದೆ. ಸಾರ್ವಜನಿಕರು ವಾರದಲ್ಲಿ ಆರು ದಿನಗಳು ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಉದ್ಯಾನಕ್ಕೆ ಭೇಟಿ ನೀಡಬಹುದಾಗಿದೆ. ಕೊನೆಯ ಪ್ರವೇಶ ಸಮಯ ಸಂಜೆ 5.15 ಆಗಿರುತ್ತದೆ. ನಿರ್ವಹಣಾ ಕಾರ್ಯಗಳ ಹಿನ್ನೆಲೆಯಲ್ಲಿ ಪ್ರತೀ ಸೋಮವಾರ ಅಮೃತ್ ಉದ್ಯಾನ ಮುಚ್ಚಿರಲಿದೆ. ಜೊತೆಗೆ, ಮಾರ್ಚ್ 4ರಂದು ಹೋಳಿ ಹಬ್ಬದ ಪ್ರಯುಕ್ತ ಉದ್ಯಾನಕ್ಕೆ ಪ್ರವೇಶ ಇರುವುದಿಲ್ಲ ಎಂದು ತಿಳಿಸಲಾಗಿದೆ.

ರಾಷ್ಟ್ರಪತಿ ಭವನ ಇಂದು ಪ್ರಕಟಿಸಿದ ಅಧಿಕೃತ ಪ್ರಕಟಣೆಯ ಪ್ರಕಾರ, ಅಮೃತ್ ಉದ್ಯಾನಕ್ಕೆ ಪ್ರವೇಶ ಸಂಪೂರ್ಣ ಉಚಿತವಾಗಿದ್ದು, ಬುಕಿಂಗ್ ಪ್ರಕ್ರಿಯೆಯೂ ಉಚಿತವಾಗಿರುತ್ತದೆ. ಆಸಕ್ತ ನಾಗರಿಕರು ರಾಷ್ಟ್ರಪತಿ ಭವನದ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಮುಂಗಡ ಬುಕ್ಕಿಂಗ್ ಮಾಡಿಕೊಳ್ಳಬಹುದು. ಪೂರ್ವ ಬುಕಿಂಗ್ ಇಲ್ಲದೆ ಆಗಮಿಸುವ ಸಂದರ್ಶಕರಿಗಾಗಿ ಪ್ರವೇಶದ್ವಾರದ ಬಳಿ ಸ್ವಯಂ ಸೇವಾ ನೋಂದಣಿ ಕಿಯೋಸ್ಕ್‌ಗಳ ವ್ಯವಸ್ಥೆಯನ್ನೂ ಮಾಡಲಾಗಿದೆ.

ಎಲ್ಲಾ ಸಂದರ್ಶಕರು ನಾರ್ತ್ ಅವೆನ್ಯೂ ಹಾಗೂ ರಾಷ್ಟ್ರಪತಿ ಭವನದ ಸಮೀಪದಲ್ಲಿರುವ ಪ್ರೆಸಿಡೆಂಟ್ಸ್ ಎಸ್ಟೇಟ್‌ನ ಗೇಟ್ ಸಂಖ್ಯೆ 35 ಮೂಲಕ ಪ್ರವೇಶಿಸಿ, ಅದೇ ಗೇಟ್ ಮೂಲಕ ನಿರ್ಗಮಿಸಬೇಕು. ಸಂದರ್ಶಕರ ಅನುಕೂಲಕ್ಕಾಗಿ ಸೆಂಟ್ರಲ್ ಸೆಕ್ರೆಟರಿಯೇಟ್ ಮೆಟ್ರೋ ನಿಲ್ದಾಣದಿಂದ ಗೇಟ್ ಸಂಖ್ಯೆ 35ರವರೆಗೆ ಪ್ರತಿ 30 ನಿಮಿಷಕ್ಕೊಮ್ಮೆ ಶಟಲ್ ಬಸ್ ಸೇವೆಯನ್ನು ಒದಗಿಸಲಾಗುತ್ತದೆ. ಈ ಶಟಲ್ ಸೇವೆ ಬೆಳಿಗ್ಗೆ 9.30ರಿಂದ ಸಂಜೆ 6ರವರೆಗೆ ಲಭ್ಯವಿರುತ್ತದೆ. ಬಸ್‌ಗಳನ್ನು “ಶಟಲ್ ಸರ್ವಿಸ್ ಫಾರ್ ಅಮೃತ್ ಉದ್ಯಾನ” ಎಂಬ ಬ್ಯಾನರ್ ಮೂಲಕ ಗುರುತಿಸಬಹುದಾಗಿದೆ.

ಈ ಅವಧಿಯಲ್ಲಿ ಅಮೃತ್ ಉದ್ಯಾನಕ್ಕೆ ಭೇಟಿ ನೀಡಿ ಅದರ ವಿಶಿಷ್ಟ ನೈಸರ್ಗಿಕ ಸೌಂದರ್ಯವನ್ನು ಆಸ್ವಾದಿಸುವಂತೆ ರಾಷ್ಟ್ರಪತಿ ಭವನದ ಆಡಳಿತವು ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande