ಯುವಕನ ಮೇಲೆ ಯುವಕರಿಂದ ಹಲ್ಲೆ
ವಿಜಯಪುರ, 20 ಜನವರಿ (ಹಿ.ಸ.) : ಆ್ಯಂಕರ್ : ಐದಾರು ಯುವಕರಿಂದ ಓರ್ವ ಯುವಕನಿಗೆ ಅಮಾನವೀಯವಾಗಿ ಥಳಿಸಿ, ಮಾರಣಾಂತಿಕವಾಗಿ ಹಲ್ಲೆಗೈದಿರುವ ಘಟನೆ ವಿಜಯಪುರ ನಗರದ ಹೊರ ಭಾಗದ ರಂಭಾಪೂರ ಬಳಿಯ ನೂತನವಾಗಿ ನಿರ್ಮಾಣವಾದ ಬಡಾವಣೆಯಲ್ಲಿ ನಡೆದಿದೆ. ವಿಜಯಪುರ ನಗರ ನಿವಾಸಿ ಪೈಗಂಬರ್ ಮುಲ್ಲಾ ಎಂಬಾಂತನ ಮೇಲೆ ಯುವಕರ
ಹಲ್ಲೆ


ವಿಜಯಪುರ, 20 ಜನವರಿ (ಹಿ.ಸ.) :

ಆ್ಯಂಕರ್ : ಐದಾರು ಯುವಕರಿಂದ ಓರ್ವ ಯುವಕನಿಗೆ ಅಮಾನವೀಯವಾಗಿ ಥಳಿಸಿ, ಮಾರಣಾಂತಿಕವಾಗಿ ಹಲ್ಲೆಗೈದಿರುವ ಘಟನೆ ವಿಜಯಪುರ ನಗರದ ಹೊರ ಭಾಗದ ರಂಭಾಪೂರ ಬಳಿಯ ನೂತನವಾಗಿ ನಿರ್ಮಾಣವಾದ ಬಡಾವಣೆಯಲ್ಲಿ ನಡೆದಿದೆ.

ವಿಜಯಪುರ ನಗರ ನಿವಾಸಿ ಪೈಗಂಬರ್ ಮುಲ್ಲಾ ಎಂಬಾಂತನ ಮೇಲೆ ಯುವಕರ ಗ್ಯಾಂಗ್ ಹಲ್ಲೆಗೈದಿದ್ದಾರೆ. ಜಾವೀದ್ ಸೌದಾಗರ್, ತೌಫೀಕ್ , ಬಿಲಾಲ್ ಹಾಗೂ ಇತರರಿಂದ ಕೃತ್ಯ ಎಸೆಗಿದ್ದಾರೆ.

ಇತ್ತೀಚೆಗೆ ಪೈಗಂಬರ್ ಮುಲ್ಲಾ ಕಲಬುರಗಿ ಜಿಲ್ಲೆಯ ಶಾಬಾದ್ ನಲ್ಲಿ ನೆಲೆಸಿದ್ದ. ಅಲ್ಲದೇ, 2023 ರಲ್ಲಿ ಹತ್ಯೆಯಾದ ರೌಡಿ ಶೀಟರ್ ಹೈದರ್‌ ನದಾಫ್ ನಿಕಟವರ್ತಿಯಾಗಿದ್ದ ಪೈಗಂಬರ್.

ಹೈದರ್ ನದಾಫ್ ಹತ್ಯೆ ಬಳಿಕ ಕಲಬುರಗಿಯ ಶಾಬಾದ್ ನಲ್ಲಿದ್ದ ಪೈಗಂಬರ್ ವಾಸಿಸುತ್ತಿದ್ದನು. ಇದೀಗ ವಿಜಯಪುರದ‌ ಯುವಕರ ಗ್ಯಾಂಗ್ ಪೈಗಂಬರ್ ಮೇಲೆ ಹಳೆಯ ವೈಷಮ್ಯದ ಕಾರಣ ಶಾಬಾದ್ ನಿಂದ ಕರೆ ತಂದು‌‌ ಹಲ್ಲೆ ಮಾಡಿದ್ದಾರೆ.

ಹಿಂದೆ ಹೈದರ್‌ ನದಾಫ್ ಜೊತೆ‌ ಗುರುತಿಸಿಕೊಂಡಿದಕ್ಕೆ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಪೈಗಂಬರ್ ಕಲಬುರಗಿ ಅಸ್ಪತ್ರೆಯಲ್ಲಿ ದಾಖಲಾಗಿರುವ ಮಾಹಿತಿ ಲಭ್ಯವಾಗಿದೆ.

ಗೋಲಗುಂಬಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಹಲ್ಲೆ ವಿಡಿಯೋ ಆಧರಿಸಿ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande