ಶ್ರೀನಗರ–ಬಾರಾಮುಲ್ಲಾ ಹೆದ್ದಾರಿಯಲ್ಲಿ ಐಇಡಿ ಪತ್ತೆ
ರಿ
Ied


ಶ್ರೀನಗರ, 20 ಜನವರಿ (ಹಿ.ಸ.) :

ಆ್ಯಂಕರ್ : ಶ್ರೀನಗರ–ಬಾರಾಮುಲ್ಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಭದ್ರತಾ ಪಡೆಗಳು ಸಮಯೋಚಿತವಾಗಿ ಕಾರ್ಯಾಚರಣೆ ನಡೆಸಿ, ಐಇಡಿ ಅನ್ನು ಪತ್ತೆಹಚ್ಚುವ ಮೂಲಕ ಭಾರಿ ದುರಂತವನ್ನು ತಪ್ಪಿಸಿವೆ.

ಬಾರಾಮುಲ್ಲಾ ಜಿಲ್ಲೆಯ ಪಟ್ಟಾನ್ ಪ್ರದೇಶದ ಟಕಿಯಾ ಟ್ಯಾಪರ್ ಬಳಿ ರಸ್ತೆಬದಿಯಲ್ಲಿ ಶಂಕಿತ ಉಗ್ರರು ಐಇಡಿಯನ್ನು ಇರಿಸಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಸಾಮಾನ್ಯ ಗಸ್ತು ಕಾರ್ಯದಲ್ಲಿದ್ದ ಭದ್ರತಾ ಪಡೆಗಳ ತಂಡಕ್ಕೆ ಶಂಕಾಸ್ಪದ ವಸ್ತು ಕಂಡುಬಂದಿದ್ದು, ತಕ್ಷಣವೇ ಸ್ಥಳವನ್ನು ಸುತ್ತುವರಿದು ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ನಂತರ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಿ ಐಇಡಿಯನ್ನು ಸುರಕ್ಷಿತವಾಗಿ ನಿಷ್ಕ್ರಿಯಗೊಳಿಸುವ ಕಾರ್ಯ ಕೈಗೊಳ್ಳಲಾಗಿದೆ.

ಗಣರಾಜ್ಯೋತ್ಸವ ಆಚರಣೆಗೆ ಒಂದು ವಾರಕ್ಕೂ ಕಡಿಮೆ ಸಮಯ ಬಾಕಿ ಇರುವ ಹಿನ್ನೆಲೆಯಲ್ಲಿ ಈ ಘಟನೆ ನಡೆದಿರುವುದು ಭದ್ರತಾ ವಲಯದಲ್ಲಿ ಗಂಭೀರ ಆತಂಕಕ್ಕೆ ಕಾರಣವಾಗಿದೆ. ಉಗ್ರರು ವಿಧ್ವಂಸಕ ಚಟುವಟಿಕೆಗಳನ್ನು ನಡೆಸಲು ಯತ್ನಿಸುತ್ತಿರುವ ಶಂಕೆಯ ಹಿನ್ನೆಲೆ, ಕಾಶ್ಮೀರ ಕಣಿವೆಯಾದ್ಯಂತ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗಿದೆ.

ಪ್ರಮುಖ ಹೆದ್ದಾರಿಗಳು, ಸಂವೇದನಾಶೀಲ ಪ್ರದೇಶಗಳು ಹಾಗೂ ಸಾರ್ವಜನಿಕ ಸಂಚಾರ ಕೇಂದ್ರಗಳಲ್ಲಿ ತೀವ್ರ ತಪಾಸಣೆ ನಡೆಸಲಾಗುತ್ತಿದ್ದು, ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ತನಿಖೆ ಆರಂಭಿಸಲಾಗಿದ್ದು, ಉಗ್ರ ಸಂಘಟನೆಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸಲಾಗಿದೆ ಎಂದು ಭದ್ರತಾ ಮೂಲಗಳು ತಿಳಿಸಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande