
ನವದೆಹಲಿ, 20 ಜನವರಿ (ಹಿ.ಸ.) :
ಆ್ಯಂಕರ್ : ಇಂದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿರುವ ನಿತಿನ್ ನಬಿನ್ ಅವರು ಬೆಳಿಗ್ಗೆ ರಾಜಧಾನಿ ದೆಹಲಿಯ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ, ದೆಹಲಿ ಸರ್ಕಾರದ ಸಚಿವರಾದ ಪರ್ವೇಶ್ ಸಾಹಿಬ್ ಸಿಂಗ್ ಹಾಗೂ ಮಂಜಿಂದರ್ ಸಿಂಗ್ ಸಿರ್ಸಾ, ಬಿಜೆಪಿ ರಾಷ್ಟ್ರೀಯ ಸಹ-ಮಾಧ್ಯಮ ಮುಖ್ಯಸ್ಥ ಸಂಜಯ್ ಮಯೂಖ್ ಸೇರಿದಂತೆ ಹಲವು ನಾಯಕರು ನಿತಿನ್ ನಬಿನ್ ಅವರೊಂದಿಗೆ ಉಪಸ್ಥಿತರಿದ್ದರು.
ನಿತಿನ್ ನಬಿನ್ ಅವರು ಮೊದಲಿಗೆ ಝಂದೇವಾಲನ್ ಪ್ರದೇಶದಲ್ಲಿರುವ ಮಾತಾ ಝಂದೇವಾಲನ್ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ಮಂದಿರ ಮಾರ್ಗದಲ್ಲಿರುವ ವಾಲ್ಮೀಕಿ ದೇವಸ್ಥಾನ, ಬಾಬಾ ಖಡ್ಗ್ ಸಿಂಗ್ ಮಾರ್ಗದ ಪ್ರಾಚೀನ ಹನುಮಾನ್ ದೇವಸ್ಥಾನ ಹಾಗೂ ಗುರುದ್ವಾರ ಬಾಂಗ್ಲಾ ಸಾಹಿಬ್‌ಗೆ ತೆರಳಿ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗವಹಿಸಿದರು.
ಬಿಜೆಪಿಯಲ್ಲಿ ಮಹತ್ವದ ಜವಾಬ್ದಾರಿ ಸ್ವೀಕರಿಸುವ ಮುನ್ನ ದೇವರ ಆಶೀರ್ವಾದ ಪಡೆಯುವ ಉದ್ದೇಶದಿಂದ ಈ ಧಾರ್ಮಿಕ ಭೇಟಿ ಕಾರ್ಯಕ್ರಮವನ್ನು ನಿತಿನ್ ನಬಿನ್ ಕೈಗೊಂಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa