ಭಕ್ತಿಪೂರ್ಣ ಸಂಗಮ : ಶ್ರೀ ಗವಿಸಿದ್ದೇಶ್ವರ ಜಾತ್ರಾ ವಿಹಂಗಮ
ಕೊಪ್ಪಳದ ಗವಿಮಠದಲ್ಲಿ ನಡೆಯುವ ಶ್ರೀ ಗವಿಸಿದ್ದೇಶ್ವರ ಜಾತ್ರೆ ದಕ್ಷಿಣ ಭಾರತದ ಧಾರ್ಮಿಕ–ಸಾಂಸ್ಕøತಿಕ ಬದುಕಿನ ಮಹತ್ವದ ಅಧ್ಯಾಯ. ವರ್ಷಕ್ಕೊಮ್ಮೆ ಬನದ ಹುಣ್ಣಿಮೆಯ ಎರಡು ದಿನದ ನಂತರ ನಡೆಯುವ ಈ ಜಾತ್ರೆ ಒಂದು ಧಾರ್ಮಿಕ ಆಚರಣೆಯಲ್ಲ ಭಕ್ತಿ, ಸೇವೆ, ಸಂಸ್ಕೃತಿ ಮತ್ತು ಸಾಮಾಜಿಕ ಸಮಾನತೆಯ ಮಹಾಸಂಗಮ.ಶರಣ ಸಂಸ್ಕ
ಭಕ್ತಿಪೂರ್ಣ ಸಂಗಮ : ಶ್ರೀ ಗವಿಸಿದ್ದೇಶ್ವರ ಜಾತ್ರಾ ವಿಹಂಗಮ


ಕೊಪ್ಪಳದ ಗವಿಮಠದಲ್ಲಿ ನಡೆಯುವ ಶ್ರೀ ಗವಿಸಿದ್ದೇಶ್ವರ ಜಾತ್ರೆ ದಕ್ಷಿಣ ಭಾರತದ ಧಾರ್ಮಿಕ–ಸಾಂಸ್ಕøತಿಕ ಬದುಕಿನ ಮಹತ್ವದ ಅಧ್ಯಾಯ. ವರ್ಷಕ್ಕೊಮ್ಮೆ ಬನದ ಹುಣ್ಣಿಮೆಯ ಎರಡು ದಿನದ ನಂತರ ನಡೆಯುವ ಈ ಜಾತ್ರೆ ಒಂದು ಧಾರ್ಮಿಕ ಆಚರಣೆಯಲ್ಲ ಭಕ್ತಿ, ಸೇವೆ, ಸಂಸ್ಕೃತಿ ಮತ್ತು ಸಾಮಾಜಿಕ ಸಮಾನತೆಯ ಮಹಾಸಂಗಮ.ಶರಣ ಸಂಸ್ಕೃತಿಯ ಮಹಾನ್ ದಾರ್ಶನಿಕರಾದ ಶ್ರೀ ಮಠದ ಎಲ್ಲಾ ಮಹಾಸ್ವಾಮಿಗಳ ತತ್ವಚಿಂತನೆಗಳೇ ಈ ಜಾತ್ರೆಯ ಆತ್ಮ. “ಸೇವೆ ದೇವರ ಪೂಜೆ” ಎಂಬ ಸಂದೇಶವನ್ನು ಬದುಕಿನ ಮೌಲ್ಯವಾಗಿಸಿಕೊಂಡ ಗವಿಮಠ, ಜಾತ್ರೆಯ ಮೂಲಕವೂ ಅದನ್ನೇ ಜನಮನಕ್ಕೆ ತಲುಪಿಸುತ್ತದೆ.

ಜಾತಿ, ಧರ್ಮ, ಭಾಷೆ, ಪ್ರಾಂತ್ಯಗಳ ಎಲ್ಲ ಗಡಿಗಳನ್ನು ಮೀರಿ ಲಕ್ಷಾಂತರ ಭಕ್ತರು ಇಲ್ಲಿ ಒಂದೇ ಭಕ್ತಿತಂತುವಿನಲ್ಲಿ ಪರಾವಶರಾಗಿರುತ್ತಾರೆ. ಜಾತ್ರೆಯ ದಿನಗಳಲ್ಲಿ ಗವಿಮಠದ ಆವರಣ ಭಕ್ತರ ಮಹಾಸಾಗರವಾಗುತ್ತದೆ. ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ.

ಯೋಗನೃತ್ಯ ನಾಟಕ ಜನಪದ ಗಾನ–ನೃತ್ಯಗಳು ಹಾಸ್ಯಕಾರ್ಯಕ್ರಮಗಳು ಮಠದ ಪರಿಸರವನ್ನು ಭಕ್ತಿಮಯವಾಗಿ ರೂಪಿಸುತ್ತವೆ. ಪ್ರತಿಯೊಂದು ನಾದದಲ್ಲೂ, ಪ್ರತಿಯೊಂದು ಹೆಜ್ಜೆಯಲ್ಲೂ ಭಕ್ತಿ ಮತ್ತು ಸಂಸ್ಕೃತಿಯ ಸ್ಪಂದನ ಕಂಡುಬರುತ್ತದೆ.

ಈ ಯುಗದಲ್ಲೂ ಗವಿಮಠದ ಜಾತ್ರೆ ಜನಮನ ಸೆಳೆಯುತ್ತಿರುವುದು ಅದರ ವೈಶಿಷ್ಟ್ಯ. ಹಿರಿಯರಿಂದ ಕಿರಿಯರ ತನಕ ಎಲ್ಲರೂ ಭಾಗವಹಿಸುವ ಮೂಲಕ ಶರಣ ಸಂಸ್ಕೃತಿ ಮತ್ತು ಜನಪದ ಪರಂಪರೆ ಮುಂದಿನ ತಲೆಮಾರಿಗೆ ಸಾಗುತ್ತಿದೆ. ಇದು ಕೇವಲ ಹಬ್ಬವಲ್ಲ; ನಮ್ಮ ಸಾಂಸ್ಕೃತಿಕ ಬೇರುಗಳನ್ನು ಗಟ್ಟಿಗೊಳಿಸುವ ಜೀವಂತ ಪರಂಪರೆ. ಜಾತ್ರೆಯ ದಿನಗಳಲ್ಲಿ ಮೇಲ್ನೋಟದಿಂದ ನೋಡಿದರೆ ಗವಿಮಠದ ಸುತ್ತಲೂ ಹರಡುವ ಭಕ್ತರ ಸಾಗರ, ಅನ್ನದಾನದ ಸಾಲುಗಳು, ಸಂಸ್ಕೃತಿಯ ವೇದಿಕೆಗಳು ಒಂದು ಮಹಾಕಾವ್ಯದ ದೃಶ್ಯವನ್ನೇ ಸೃಷ್ಟಿಸುತ್ತವೆ. ಅದಕ್ಕಾಗಿಯೇ ಈ ಜಾತ್ರೆ “ದಕ್ಷಿಣ ಭಾರತದ ಮಹಾ ಕುಂಭಮೇಳ” ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಶ್ರೀ ಗವಿಸಿದ್ದೇಶ್ವರ ರಥೋತ್ಸವ ಭಕ್ತಿ, ಸೇವೆ ಮತ್ತು ಮಾನವೀಯತೆಯ ಮಹೋತ್ಸವ. ಜಾತ್ರಾಪೂರ್ವ ಈ ವಿಹಂಗಮ ನೋಟ, ಜಾತ್ರೆಯ ಮಹತ್ವವನ್ನು ಅರಿಯುವಂತೆ ಮಾಡುತ್ತದೆ. ಗವಿಮಠದ ಜಾತ್ರೆ ಎಂದ ಧರ್ಮದ ಹೆಸರಿನಲ್ಲಿ ಮಾನವೀಯತೆಯನ್ನು ಆಚರಿಸುವ ಅಪರೂಪದ ಪರಂಪರೆ. ಜಾತ್ರೆಯ ಮೊದಲ ಮೂರು ದಿನಗಳಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿದ ಸಾಧಕರನ್ನು ಆಹ್ವಾನಿಸಿ, ಅವರ ಸಾಧನೆಗಳನ್ನು ಪರಿಚಯಿಸಿ ಭವ್ಯವಾಗಿ ಸನ್ಮಾನಿಸಲಾಗುತ್ತದೆ. ಇದರಿಂದ ಜಾತ್ರೆ ಕೇವಲ ಧಾರ್ಮಿಕ ಆಚರಣೆಯಲ್ಲದೆ, ಪ್ರತಿಭೆ ಮತ್ತು ಪರಿಶ್ರಮವನ್ನು ಗೌರವಿಸುವ ಮಹತ್ವದ ಸಾಮಾಜಿಕ ವೇದಿಕೆಯಾಗಿ ರೂಪುಗೊಂಡಿದೆ.

ರಾತ್ರಿಯ ಹೊತ್ತಿಗೆ ಗವಿಮಠದ ಆವರಣವೇ ಸಾಂಸ್ಕøತಿಕ ಲೋಕಕ್ಕೆ ದ್ವಾರವಾಗುತ್ತದೆ. ಸಂಗೀತ, ನೃತ್ಯ, ನಾಟಕ, ಜಾನಪದ ಕಲಾರೂಪಗಳು, ತತ್ವಪದಗಳ ಗಾಯನ ಮೊದಲಾದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ಕ್ಷಣ ಮಾತ್ರದಲ್ಲಿ ಬೇರೊಂದು ಲೋಕಕ್ಕೆ ಕರೆದೊಯ್ಯುತ್ತವೆ. ಈ ಕಾರ್ಯಕ್ರಮಗಳು ಮನ ರಂಜನೆಯ ಜೊತೆಗೆ ನಮ್ಮ ಜನಪದ ಸಂಸ್ಕೃತಿ ಮತ್ತು ಶರಣ ಪರಂಪರೆಯನ್ನು ಜೀವಂತವಾಗಿಟ್ಟುಕೊಳ್ಳುವ ಮಹತ್ವದ ಕಾರ್ಯವನ್ನು ನಿರ್ವಹಿಸುತ್ತವೆ.

ಇದಕ್ಕೆ ಪೂರಕವಾಗಿ ನಡೆಯುವ ಆಧ್ಯಾತ್ಮಿಕ ಚಿಂತನೆಗಳು, ಉಪನ್ಯಾಸಗಳು ಹಾಗೂ ಗೋಷ್ಠಿಗಳು ಮನುಷ್ಯನನ್ನು ಭೌತಿಕತೆಯಿಂದ ಪಾರಮಾರ್ಥಿಕತೆಯಡೆಗೆ ಕರೆದೊಯ್ಯುತ್ತವೆ. ವೈಚಾರಿಕತೆ, ಆಧ್ಯಾತ್ಮಿಕ ನಿಲುವು ಮತ್ತು ಧಾರ್ಮಿಕ ತಿಳುವಳಿಕೆಯನ್ನು ಜನರಲ್ಲಿ ಬೆಳೆಸುವ ಈ ಚರ್ಚೆಗಳು ಜಾತ್ರೆಗೆ ವಿಶೇಷವಾದ ಘನತೆಯನ್ನು ನೀಡುತ್ತವೆ.

ಈ ಎಲ್ಲ ಕಾರ್ಯಕ್ರಮಗಳಿಗೆ ಇನ್ನಷ್ಟು ಮೆರುಗು ನೀಡುವಂತೆ, ರಥೋತ್ಸವಸ ಮರುದಿನ ಇಲ್ಲಿ ಸಾಹಿತ್ಯಿಕ, ಭಾವಗಂಭೀರ ಹಾಗೂ ರೂಪಕ–ಪ್ರತೀಕಗಳಿಂದ ಸಮೃದ್ಧವಾದ “ಗವಿಮಠಕ್ಕೆ ಚಿಕೇನ್ ಕೊಪ್ಪ ಶರಣರ ದೀರ್ಘ ದಂಡ ನಮಸ್ಕಾರ ಈ ಮಣ್ಣಿನ ಮೇಲಿನ ಭಕ್ತಿಯ ಮಹಾಕಾವ್ಯ”ಭಕ್ತಿ ಕೆಲವೊಮ್ಮೆ ಮೌನವಾಗಿರುತ್ತದೆ.ಕೆಲವೊಮ್ಮೆ ಅದು ನೆಲದ ಮೇಲೆಯೇ ಬರೆಯಲ್ಪಡುವ ಪ್ರಾರ್ಥನೆಯಾಗುವ ಹಾಗೆ ಚಿಕೇನ್ ಕೊಪ್ಪದ ಶರಣರು ಗವಿಮಠಕ್ಕೆ ಸಲ್ಲಿಸುವ ದೀರ್ಘ ದಂಡ ನಮಸ್ಕಾರ ಅಂತಹದೇ ಮಾತಿಲ್ಲದ ಮಹಾಕಾವ್ಯ, ಈ ಸಮಪ್ರದಾಯವು 16ನೇ ಪೀಠಾಧಿಪತಿಗಳಾದ ಮರಿಶಾಂತವೀರ ಮಹಸ್ವಾಮಿಗಳಿಗೆ ಅನಾರೋಗ್ಯ ಉಂಟಾದಾಗ ಅವರ ಶಿಷ್ಯರಾದ ಚಿಕೇನಕೊಪ್ಪದ ಶ್ರೀ ಚೆನ್ನವೀರ ಶರಣರು ನನ್ನ ಗುರುಗಳಿಗೆ ಆರೋಗ್ಯ ಉಂಟಾಗಲಿ ಎಂಬ ಪ್ರಾರ್ಥನೆಯಿಮದ ಪ್ರಾರಂಭ ಮಾಡಿದರು ಅಂದಿನಿಂದ ಇದು ನಿರಂತರವಾಗಿ ಸಾಗಿ ಬಂದಿದೆ.

ಈ ನಮಸ್ಕಾರ ದೇಹದಿಂದಲೇ ಉಚ್ಚರಿಸುವ ಪ್ರಾರ್ಥನೆ. ನೆಲಕ್ಕೆ ಮಣಿದ ದೇಹದಲ್ಲಿ ಅಹಂಕಾರ ಕರಗುತ್ತದೆ, ಮೇಲಕ್ಕೆ ನೆಟ್ಟ ದೃಷ್ಟಿಯಲ್ಲಿ ಮಾತ್ರ ಭಕ್ತಿ ಹೊಳೆಯುತ್ತದೆ.ಪ್ರತಿಯೊಂದು ದಂಡ ನಮಸ್ಕಾರವೂ ಒಂದು ಧೀರ್ಘ ಪ್ರಾರ್ಥನೆ, ಒಂದು ಅಭಿವೃದ್ಧಿಯ ಸಂಕಲ್ಪ. ಈ ಪಯಣದಲ್ಲಿ ದೇಹವೇ ಭಾμÉ. ಗಾಯಗಳು ಅಕ್ಷರಗಳು,ಶ್ರಮವೇ ವಾಕ್ಯ,ನಿμÉ್ಠಯೇ ಅರ್ಥ. ಬಿಸಿಲು ತಾಪ ನೀಡಿದರೂ, ಚಳಿ ಕಂಪನ ತಂದರೂ, ಮಣ್ಣಿನ ಕಠಿಣತೆ ದೇಹವನ್ನು ಕುಗ್ಗಿಸಿದರೂ, ಮನಸ್ಸು ಮಾತ್ರ ಗವಿಮಠದ ಶಿಖರದಲ್ಲೇ ನೆಲೆಸಿರುತ್ತದೆ. ಧೀರ್ಘದಂಡ ನಮಸ್ಕಾರ ಎನ್ನುವುದು ದೇಹದ ದಣಿವಲ್ಲ ಅದು “ನಾನು” ಎಂಬ ಭಾವವನ್ನು ನೆಲಕ್ಕಿಟ್ಟು,“ಶರಣ” ಎಂಬ ಗುರುತನ್ನು ಎತ್ತಿಕೊಳ್ಳುವ ಸಾಧನೆ. ಶರಣರು ಪ್ರತಿ ದಂಡದಲ್ಲಿ ತಮ್ಮ ಕೃತಜ್ಞತೆಯನ್ನು ಈ ಮೂಲಕ ದೇವರಿಗೆ ಅರ್ಪಿಸುತ್ತಾರೆ.

ಇಲ್ಲಿ ಭಕ್ತಿ ಪ್ರದರ್ಶನವಲ್ಲ,ಅದು ಸಹನೆ.ಇಲ್ಲಿ ಶಕ್ತಿ ಗರ್ಜನೆಯಲ್ಲ, ಅದು ತಾಳ್ಮೆ.ಶರಣ ಸಂಸ್ಕøತಿಯ ಹರಿವುಈ ದಂಡ ನಮಸ್ಕಾರ ಯಾತ್ರೆ ಬಸವಣ್ಣನವರ ಕಾಯಕ–ದಾಸೋಹ–ದಯೆ ತತ್ವಗಳ ಜೀವಂತ ರೂಪ. ದೇಹದ ಶ್ರಮವೇ ಕಾಯಕ, ಗವಿಮಠದ ಅನ್ನವೇ ದಾಸೋಹ, ಮಾರ್ಗದಲ್ಲಿನ ಸಹಾನುಭೂತಿಯೇ ದಯೆ. ಶರಣರು ಸಾಗುವ ದಾರಿಯಲ್ಲಿ ಗ್ರಾಮಸ್ಥರು ನೀರು ಮತ್ತು ಹೂವನ್ನು ಹಾಕುತ್ತಾರೆ, ಮೌನವಾಗಿ ಕೈಜೋಡಿಸುತ್ತಾರೆ.

ಈ ಸಹಕಾರವೇ ಸಮಾಜ ಇನ್ನೂ ಆಧ್ಯಾತ್ಮಿಕತೆಯನ್ನು ಕಳೆದುಕೊಂಡಿಲ್ಲ ಎಂಬ ಭರವಸೆ ನೀಡುತ್ತದೆ. ಅನ್ನಪೂರ್ಣೇಶ್ವರಿ ಮತ್ತು ಶ್ರೀ ಗವಿಸಿದ್ದೇಶ್ವರರ ಮರೀಶಾಂತವೀರ ಶಿವಶಾಂತವೀರ ಗುರುಗಳ ಸಾನ್ನಿಧ್ಯದಲ್ಲಿ ಶರಣರು,. ಧೀರ್ಘ ದಂಡ ನಮಸ್ಕಾರ ಮುಗಿಸುತ್ತಾರೆ, ಆದರೆ ಭಕ್ತಿ ಇನ್ನೂ ಮುಂದುವರಿಯುತ್ತದೆ. ಕಾಲಕ್ಕೆ ಸಂದೇಶ ತ್ವರಿತ ಬದುಕಿನ ಈ ಯುಗದಲ್ಲಿ ಈ ದಂಡ ನಮಸ್ಕಾರ ಯಾತ್ರೆ ಆಳವಾದ ಪಾಠ ಕಲಿಸುತ್ತದೆ. ಭಕ್ತಿ ಅವಸರದ ದಾರಿ ಅಲ್ಲ, ಅದು ಶಿಸ್ತಿನ ದಾರಿ. ಶರಣ ಸಂಸ್ಕೃತಿ ಪುರಾತನವಲ್ಲ, ಅದು ಸದಾಕಾಲೀನದ ತತ್ವ.

ಒಟ್ಟಾರೆ, ಶ್ರೀ ಗವಿಸಿದ್ದೇಶ್ವರ ಜಾತ್ರೆ ಭಕ್ತಿ, ಸಂಸ್ಕೃತಿ, ಸೇವೆ ಮತ್ತು ಸಾಮಾಜಿಕ ಕಾಳಜಿಯ ಸಮನ್ವಯದ ಅಪರೂಪದ ಮಹೋತ್ಸವವಾಗಿ ರೂಪುಗೊಂಡಿದ್ದು, ಈ ಮಹೋತ್ಸವದ ಆಯಾಮದ ಉದಾಹರಣೆಗೆ ಬನ್ನಿ ನಾವೆಲ್ಲರೂ ಭಾಗಿಯಾಗೋಣ..

ಡಾ.ಶೈಲಜಾ ಅರಳಲೇಮಠ

ಸಹಾಯಕ ಪ್ರಾಧ್ಯಾಪಕರು

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande