ಕೊಪ್ಪಳ : ಅಂತರಂಗದ ಅರಿವು –ಆಧ್ಯಾತ್ಮದ ತೇರು
ಕೊಪ್ಪಳ, 02 ಜನವರಿ (ಹಿ.ಸ.) : ಆ್ಯಂಕರ್ : ದಕ್ಷಿಣ ಭಾರತದ ಕುಂಭಮೇಳವೆಂದೇ ಪ್ರಸಿದ್ಧವಾದ ಗವಿಮಠ ಜಾತ್ರೋತ್ಸವು ಪ್ರತಿ ವರ್ಷ ಒಂದಿಲ್ಲೊಂದು ಹೊಸತನದೊಂದಿಗೆ ನಡೆಯುತ್ತಿರುವುದು ವೈಶಿಷ್ಠಪೂರ್ಣವಾಗಿದೆ. ಜನವರಿ 5 ರಂದು ನಡೆಯುವ ರಥೋತ್ಸವಕ್ಕೆ ಚಾಲನೆ ನೀಡಲು ಮೂಲತಃ ಕೊಪ್ಪಳ ಜಿಲ್ಲೆ ಕೂಕನೂರ ತಾಲೂಕಿನ
ಕೊಪ್ಪಳ : ಅಂತರಂಗದ ಅರಿವು –ಆಧ್ಯಾತ್ಮದ ತೇರು


ಕೊಪ್ಪಳ, 02 ಜನವರಿ (ಹಿ.ಸ.) :

ಆ್ಯಂಕರ್ : ದಕ್ಷಿಣ ಭಾರತದ ಕುಂಭಮೇಳವೆಂದೇ ಪ್ರಸಿದ್ಧವಾದ ಗವಿಮಠ ಜಾತ್ರೋತ್ಸವು ಪ್ರತಿ ವರ್ಷ ಒಂದಿಲ್ಲೊಂದು ಹೊಸತನದೊಂದಿಗೆ ನಡೆಯುತ್ತಿರುವುದು ವೈಶಿಷ್ಠಪೂರ್ಣವಾಗಿದೆ. ಜನವರಿ 5 ರಂದು ನಡೆಯುವ ರಥೋತ್ಸವಕ್ಕೆ ಚಾಲನೆ ನೀಡಲು ಮೂಲತಃ ಕೊಪ್ಪಳ ಜಿಲ್ಲೆ ಕೂಕನೂರ ತಾಲೂಕಿನ ಬಿನ್ನಾಳ ಗ್ರಾಮದವರು ಹಾಗೂ ಪ್ರಸ್ತುತ ಮೇಘಾಲಯದ ಗೌರವಾನ್ವಿತ ರಾಜಪಾಲರಾದ ಸಿ.ಎಚ್.ವಿಜಯ ಶಂಕರರವರು ಆಗಮಿಸುತ್ತುರುವುದು ವಿಶೇಷ ಹಾಗೂ ಹೆಮ್ಮೆಯ ಸಂಗತಿಯಾಗಿದೆ.

ಜಾತ್ರಾ ಮಹೋತ್ಸವದ ಹಿನ್ನಲೆಯಲ್ಲಿಯೇ ಪೂಜ್ಯ ಗವಿಸಿದ್ಧೇಶ್ವರ ಮಹಾಸ್ವಾಮಿಗಳವರು ಪ್ರತಿ ವರ್ಷ ನಾಡಿನ ನಾನಾ ಭಾಗಗಳ ಗ್ರಾಮೀಣ ಪ್ರದೇಶಗಳಲ್ಲಿ ಪ್ರವಚನ ಹಾಗೂ ಪಾದ ಯಾತ್ರೆಗಳಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನ ಜಾಗೃತಿಯನ್ನುಂಟು ಮಾಡುತ್ತಿದ್ದಾರೆ.

ಕಳೆದ ತಿಂಗಳ ವಿಜಯಪುರ ಜಿಲ್ಲೆಯ ಮಹಾಲಿಂಗಪೂರ ಗ್ರಾಮದಲ್ಲಿ ಹತ್ತು ದಿನಗಳ ಕಾಲ ನಿತ್ಯ ಸಾಯಂಕಾಲ ಪ್ರವಚನ ಹಾಗೂ ಬೆಳಿಗಿನ ಜಾವ ಪಾದಯಾತ್ರೆ ಕೈಗೊಂಡರು ವಿವಿಧ ಕ್ಷೇತ್ರಗಳ ತಜ್ಞರು ಜನಸಾಮಾನ್ಯರು ಹಾಗೂ ವಿದ್ಯಾರ್ಥಿಗಳನು ಒಳಗೊಂಡ ಕಾರ್ಯಕ್ರಮ ಗ್ರಾಮೀಣ ಬದುಕು, ಸಾಧನೆ, ಬವಣೆ ಹಾಗೂ ಬೇಕು ಬೇಡಗಳ ಬಗ್ಗೆ ಅಲ್ಲಿ ಚಿಂತನ-ಮಂಥನ, ಧಾರ್ಮಿಕ ಉಪನ್ಯಾಸಗಳು ಅಲ್ಲಿ ಜರಗುತ್ತಿದ್ದವು ಇದೊಂದು ಆತ್ಮಾವಲೋಕನದ ಹೆಜ್ಜಿಯು ಸಹ ಆಗಿತ್ತು. ಹಳ್ಳಿಗಳ ಸಾಂಗತ್ಯದಲ್ಲಿ ನಿಸರ್ಗ ನಡಿಗೆ ಮಾಡಿದಾಗ ನಿತ್ಯದ ಅವರ ದೈಹಿಕ ಶ್ರಮಗಳನ್ನು ಗಮನಿಸುತ್ತಾ ಅವರ ಮೌಖಿಕ ಕಥಾನಕಗಳನ್ನು ಅನುಭವಾಮೃತವನ್ನು ಕೇಳುತ್ತಲೆ ಭಾಗಿಗಳಾಗಿದಂತವರು ಅನೇಕರು.ಗ್ರಾಮಿಣ ಪ್ರದೇಶಗಳಲ್ಲಿ ಗ್ರಾಮಗಳ ಜನತೆಯೊಂದಿಗೆ ವಂದು ಹೊಸ ಸಾಧ್ಯತೆ ಅನುಭವವು ಸಹ ಕಂಡು ಬರುತ್ತದೆ ಸಮುದಾಯಗಳು ಜ್ಞಾನದ ಭಂಡಾರವಾಗಿರುತ್ತವೆ.

ಪಾದಯಾತ್ರೆಗಳಿಂದ ದೇಹಾಲಸ್ಯ ಮತ್ತು ಮನಸ್ಸಿನ ಉದ್ವೇಗವನ್ನು ನಾಶಗೊಳಿಸುತ್ತದೆ.ಮನಸ್ಸು ಸ್ಥಿರವಾಗುತ್ತದೆ ಜನರಲ್ಲಿ ಜ್ಞಾನ ವಿವೇಚನೆಯನ್ನು ಉದ್ದೀಪಿಸುವ ಉದ್ದೇಶವನ್ನು ಹೊಂದಿತ್ತು ಗೌಜು ಗದ್ದಲಗಳಿಂದ ದೂರವಿರಲು ಇಂತಹ ಅವಕಾಶವನ್ನು ಪೂಜ್ಯರು ಕೈಗೊಂಡರು. ಗ್ರಾಮ್ಯ ಜೀವನದ ಸೊಗಡನ್ನು ತಿಳಿಯಲು ಜೊತೆಗೆ ಸಾಮರಸ್ಯದ ಸುಂದರ ಶಾಂತ ಬದುಕನ್ನು ಕಾಣಬಹುದೆಂದು ಶ್ರೀಗಳವರು ಈ ಪಾದಯಾತ್ರೆ ಮೂಲಕ ತೊರಿಸಿಕೊಟ್ಟರು.ಇದು ಅಕ್ಷರಶಃ ನಮ್ಮ ನಡೆ ಅಂತರಂಗದ ಕಡೆಗೆ ಯೆಂದು ವ್ಯಾಖ್ಯಾನಿಸಬಹುದಾಗಿದೆ.

ಒಂದುಸಾವಿರದÀ ಎಂಟರ ಪೂರ್ವದಲ್ಲಿಯೇ ನಿರ್ಮಾಣಗೊಂಡ ಗವಿಮಠಕ್ಕೆ ಅನನ್ಯವಾದ ಸಂಪ್ರದಾಯವು ಇದೆ. ರುದ್ರಮುನಿ ಸ್ವಾಮಿಗಳವರಿಂದ ಮೊದಲು ಗೊಂಡು ಇಂದಿನ ವರೆಗೂ 18 ಪೀಠಾಧೀಶರನ್ನು ಹೊಂದಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಪರಂಪರೆಯಲ್ಲಿ ಸಾಗಿಬಂದ ಗವಿಸಿದ್ಧೇಶ್ವರ ಸ್ವಾಮಿಗಳವರು 11 ನೇ ಪೀಠಾಧೀಶರಾಗಿದ್ದಾರೆ. ಆದರೆ ಜನಮಾನಸದಲ್ಲಿ ಇವರೇ ಶ್ರೀಮಠದ ಸ್ಥಾಪಕರು ಎಂದು ಜನವಾಡಿಕೆಆಗಿದೆ, ಕಾರಣವೆನದರೆ, ಇವರು ಧಾರ್ಮಿಕ ಸಾಮಾಜಿಕ, ಸಾಹಿತ್ಯಿಕ, ಸಾಂಸ್ಕøತಿಕ ಕಾರ್ಯಗಳನ್ನು ಮಾಡಿ ಜನಮಾನಸದಲ್ಲಿ ಬೇರುರಿದಿದ್ದಾರೆ.

ಗವಿಸಿದ್ದೇಶ್ವರರು ಕೊಪ್ಪಳ ನೆರೆಯ ಮಂಗಳಾಪುರದ ಗುರುಲಿಂಗಮ್ಮ ಹಾಗೂ ಮಹಾದೇವಯ್ಯ ಇವರುಗಳಲ್ಲಿ ಜನಿಸಿ ಬಂದವರು. ಬಾಲ್ಯದ ನಾಮ ಗುಡ್ಡದಯ್ಯ ಆಗಿತ್ತು.ಕೊಪ್ಪಳದ ಬಸವನಗೌಡರ ಆಕಳು ಮಳಲಮಲ್ಲೇಶನ ತಾಣದಲ್ಲಿ ಅಸು ನೀಗಿದಾಗ, ಗುಡ್ಡದಯ್ಯನು ಗುರು ಧ್ಯಾನಗೈದು ತನ್ನ ತಪಃ ಶಕ್ತಿಯಿಂದ ಸತ್ತ ಆಕಳನ್ನು ಬದುಕಿಸಿದನು. ಗೌಡರು ಗುಡ್ಡದಯ್ಯನನ್ನು ತಮ್ಮ ಮನೆಗೆ ಕರೆದುಕೊಂಡು ಬಂದರು. ಗುಡ್ಡದಯ್ಯನು ಗೌಡರ ಮನೆಯಿಂದ ಗವಿಮಠಕ್ಕೆ ಬರುವಾಗ ತನ್ನ ಶಿಖೆ(ಕೂದಲು)ಯನ್ನು ಗೌಡರ ಧರ್ಮಪತ್ನಿಯರಿಗೆ ಆಶೀರ್ವದಿಸಿದನು. ನಂತರ ಇವರಿಗೆ ಸಂತಾನ ಪ್ರಾಪ್ತಿಯಾಯಿತು. ಅಂದಿನಿಂದ ಜಡೇಗೌಡರು ಎಂಬ ಹೆಸರು ಬಂದಿತು.

ಗವಿಮಠಕ್ಕೆ ಗುಡ್ಡದಯ್ಯನು ಬಂದ ನಂತರ ಗುರುಗಳಾಗಿದಂತಹ ಚೆನ್ನಬಸವಸ್ವಾಮಿಗಳು ಸಕಲ ಸಂಸ್ಕಾರಗಳನ್ನಿತ್ತರು. ಅಕ್ಷರ,ಅನ್ನ,ಆಧ್ಯಾತ್ಮ ದಾಸೋಹಗಳನ್ನು ಗುಡ್ಡದಯ್ಯನು ಚೆನ್ನಾಗಿ ನಿರ್ವಹಿಸಿದನು. ಪೂಜ್ಯರ ಕೃಪೆಗೆ ಪಾತ್ರನಾಗಿ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿ ಎಂಬ ಅಭಿನಾಮದಿಂದ ಶ್ರೀಗವಿಮಠದ ಅಧಿಪತಿಯಾದನು. ಹೈದರಾಬಾದ ನಿಜಾಮನ ಕುಷ್ಠರೋಗವನ್ನು ನಿವಾರಿಸಿದನು, ಅಮವಾಸ್ಯೆಯಂದು ಹುಣ್ಣಿಮೆಯನ್ನು ತೋರಿಸಿದನು, ಹುಣಸಿಹಾಳ ಗೌಡರ ಹೆಣ್ಣು ಕೂಸನ್ನು ಗಂಡು ಕೂಸನ್ನಾಗಿ ಪರಿವರ್ತಿಸಿದನು, ಕುರಡರಿಗೆ ಕಣ್ಣು, ಮೂಕರಿಗೆ ಬಾಯಿ, ಇತ್ಯಾದಿ ಕಾರ್ಯಗಳನ್ನು ಮಾಡಿದನು.

ಸಂತೋಷಗೊಂಡ ಗುರು ಚೆನ್ನಬಸವಸ್ವಾಮಿಗಳು ಒಂದು ಸಂದರ್ಭದಲ್ಲಿ” ನಾನು ಬಂದ ಕಾರ್ಯ ಮುಗಿಯಿತು ಮುಂದಿನ ಶ್ರೀ ಮಠದ ಜವಾಬ್ದಾರಿ ನಿನ್ನದೇ ಎಂದು ಹೇಳಿದರು. ಇದನು ಕೇಳಿದ ಗವಿಸಿದ್ಧೇಶ ಮನನೊಂದು, ನಾಳೆಯಿಂದ ಗುರುಗಳ ಸೇವಾಭಾಗ್ಯ ದೊರೆಯಲಾರದೆಂದು ತಿಳಿದು, ಈಗಾಗಲೇ ಗುರುಗಳಾಗಿಯೇ ನಿರ್ಮಾಣವಾಗಿದ್ದ ಗದ್ದುಗೆಯನ್ನೇರಿ ಧ್ಯಾನಾಸಕ್ತನಾದನು. ಗುರುಗಳು ಎಷ್ಟು ಕರೆದರು ಓಗೊಡದೆ ಲಿಂಗ ಧ್ಯಾನದಲ್ಲಿ ನಿರತನಾಗಿ ಶಾ.ಶ.1735 (ಕ್ರಿ.ಶ. 1816) ಶ್ರೀಮುಖ ನಾಮ ಸಂವತ್ಸರ ಪುಷ್ಯ ಬಹುಳ ಬಿದಗಿಯೆಂದು ಪ್ರಾಣವನ್ನು ಬ್ರಹ್ಮಸ್ಥಾನಕ್ಕೇರಿಸಿ ಸಜೀವ ಸಮಾಧಿ ಸ್ಥಿತಿಯನ್ನು ಹೊಂದಿದನು. ಗುರುಗಳು ನಿಂತು ಮುಂದಿನ ಕಾರ್ಯ ನೆರೆವೆರಿಸದರು. ಅಂದಿನಿಂದ ಜಾತ್ರಾ ಮಹೋತ್ಸವ ನಿರಂತರವಾಗಿ ಸಾಗಿ ಬಂದಿದೆ. ಇದು 210ನೇ ರಥೋತ್ಸವವಾಗಿದೆ.

ಈ ಜಾತ್ರೆಯನ್ನು ಅನೇಕ ಧಾರ್ಮಿಕ ಸಾಮಾಜಿಕ, ಸಾಹಿತ್ಯಿಕ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜಾತ್ರೆಯನ್ನು ಸರಳ,ಸುಭಗ,ಸಾಮಾಜಿಕರಣ ಗೊಳಿಸಿದ್ದಾರೆ ಶ್ರೀಮಠದ ಇಂದಿನ ಪೂಜ್ಯರು. ಕೆರೆ-ಹಳ್ಳಗಳ ಸ್ವಚ್ಛತೆ ರಕ್ತದಾನ ಶಿಬಿರ, ಅಂಗವಿಕರಲ ಕಲ್ಯಾಣ, ಗ್ರಾಮಗಳ ದತ್ತು ತೆಗೆದುಕೊಳ್ಳುವುಕೆ ಹೀಗೆ ಹತ್ತಾರು ವೈವಿಧ್ಯಮಯ ಕಾರ್ಯಗಳನ್ನು ಹಮ್ಮಿಕೊಂಡು ಜಾತ್ರೆಯೆಂಬ ಶಬ್ದಕ್ಕೆ ಹೊಸ ವ್ಯಾಖ್ಯಾನವನ್ನು ಪೂಜ್ಯರು ನೀಡಿದ್ದಾರೆ. 15 ದಿನಗಳ ಕಾಲ ಜರಗುವ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ವಿಶೇಷವಾದ ಪ್ರಸಾದ ವ್ಯವಸ್ಥೆಯನ್ನು ಶ್ರೀಮಠವು ಕೈಗೊಂಡಿರುವುದು.

ಇಂತಹ ಜಾತ್ರಾ ಮಹೋತ್ಸವವನ್ನು ನೋಡಿ ಕಣ್ಣು ತುಂಬಿಕೊಳ್ಳುವುದು ಗವೀಶನ ಆಶೀರ್ವಾದ ಪಡೆದು ನಾವು ಎಲ್ಲರೂ ಪುನೀತರಾಗೋಣ, ಪಾವನರಾಗೋಣ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande