
ಗಂಗಾವತಿ, 19 ಜನವರಿ (ಹಿ.ಸ.) :
ಆ್ಯಂಕರ್ : ಹಾವೇರಿ ತಾಲೂಕಿನ ನಾಗೇನಮಟ್ಟಿಯ ಸತೀಶ(27) ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನಲ್ಲಿ ಕಾಣೆಯಾಗಿದ್ದು, ಯುವಕನ ಸಹೋದರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಕುರಿತು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 09/2026 ರಡಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕಾಣೆಯಾದ ಯುವಕನ ಚಹರೆ ವಿವರ: ಸತೀಶ, ವಯಸ್ಸು 27 ವರ್ಷ, 5.5 ಎತ್ತರ ಗೋದಿ ಮೈಬಣ್ಣ, ದುಂಡ ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಎಡಗೈ ತೋಳಿಗೆ ಮತ್ತು ಬಲ ಕುತ್ತಿಗೆಗೆ ಆಂಜನೇಯನ ಹಾಗೂ ಎಡಗೈಗೆ ಚೇಳಿನ ಟ್ಯಾಟೂ ಇರುತ್ತದೆ. ಈ ಯುವಕನು ಕನ್ನಡ, ಹಿಂದಿ, ಕುಂಚಿ ಕೊರವ ಭಾಷೆಯನ್ನು ಮಾತನಾಡುತ್ತಾನೆ.
ಈ ಯುವಕ ಯಾರಿಗಾದರು ಕಂಡುಬಂದಲ್ಲಿ ಅಥವಾ ಇತನ ಬಗ್ಗೆ ಮಾಹಿತಿ ದೊರೆತಲ್ಲಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ದೂ.ಸಂ: 08533230854, ಗಂಗಾವತಿ ಪಿ.ಐ. ಮೊ.ಸಂ: 9480803730 ಹಾಗೂ ಕೊಪ್ಪಳ ಕಂಟ್ರೋಲ್ ರೂಂ ದೂ.ಸಂ: 9480803700 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್