
ಬೆಂಗಳೂರು, 18 ಜನವರಿ (ಹಿ.ಸ.) :
ಆ್ಯಂಕರ್ : ಏಷ್ಯಾದ ಅತಿದೊಡ್ಡ ಹಾಗೂ ವಿಶ್ವದ ಪ್ರಮುಖ ಮ್ಯಾರಥಾನ್‌ಗಳಲ್ಲಿ ಒಂದಾದ ಟಾಟಾ ಮುಂಬೈ ಮ್ಯಾರಥಾನ್ ನಲ್ಲಿ ವಿಜಯಪುರದ 17 ಪ್ರತಿಭಾವಂತ ಓಟಗಾರರು ಪಾಲ್ಗೊಂಡು 42 ಕಿಲೋಮೀಟರ್ ಫುಲ್ ಮ್ಯಾರಥಾನ್ ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಜಿಲ್ಲೆಗೆ ಗೌರವ ತಂದಿದ್ದಾರೆ.
ಮುಂಬೈನಲ್ಲಿ ಇಂದು ಜರುಗಿದ ಈ ಪ್ರತಿಷ್ಠಿತ ಟಾಟಾ ಮುಂಬೈ ಫುಲ್ ಮ್ಯಾರಥಾನ್–2026ರಲ್ಲಿ ಭಾಗವಹಿಸಿ ವಿಜಯಪುರದ ಹೆಸರನ್ನು ವಿಶ್ವಮಟ್ಟದಲ್ಲಿ ಮೆರೆದ ಈ ಸಾಧಕರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ. ಪಾಟೀಲ ಅವರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.
ಮ್ಯಾರಥಾನ್‌ನಲ್ಲಿ ಪಾಲ್ಗೊಂಡ ವಿಜಯಪುರದ ಓಟಗಾರರು:
ಸಂಗನಗೌಡ ಹೊಸಳ್ಳಿ, ನಿರಂಜನ್ ಪಾಟೀಲ, ಹನುಮಂತರಾಯ ಭೈರಗೊಂಡ (ಅಪ್ಪು), ಪ್ರವೀಣ ಕಾತರಕಿ, ಸೋಮಯ್ಯ ಮಠ ಗುರುಜಿ, ಡಾ. ರಾಜು ಯಲಗೊಂಡ, ಅಮೋಘಸಿದ್ಧ ಬಸನಾಳ, ಶಿವಾನಂದ ಕುಂಬಾರ, ಸಂದೀಪ್ ಮಡಗೊಂಡ, ರವಿ ಭೈರವಾಡಗಿ, ಡಾ. ಪ್ರವೀಣ ಚೌರ್, ವೀರೇಂದ್ರ ಗುಚೆಟ್ಟಿ, ರಾಜಶೇಖರ್ ಔರಸಂಗ, ಶ್ರೀಕಾಂತ್ ಅಂಗಡಿ, ಲಗಮಣ್ಣ ಸಲಗರೆ, ಅನಿಲ್ ಸಾಲೋಟಗಿ ಹಾಗೂ ಐಗಳಿ ರುದ್ರಗೌಡ ಪಾಟೀಲ.
ಸಿದ್ದೇಶ್ವರ ಮಹಾಸ್ವಾಮಿಗಳವರ ಕನಸಿನ ಸ್ವಚ್ಛ, ಸುಂದರ ಹಾಗೂ ಸದೃಢ ವಿಜಯಪುರ ನಿರ್ಮಾಣಕ್ಕೆ ಈ ಓಟಗಾರರು ಬುನಾದಿಯಾಗಿದ್ದು, ಅವರ ಸಾಧನೆ ಯುವಜನತೆಗೆ ಪ್ರೇರಣೆಯಾಗಿದೆ ಎಂದು ಸಚಿವರು ಶ್ಲಾಘಿಸಿದ್ದಾರೆ.
ಧೈರ್ಯ, ಶಿಸ್ತು ಮತ್ತು ಅಚಲ ಮನೋಬಲದೊಂದಿಗೆ 42 ಕಿಲೋಮೀಟರ್ ದೂರವನ್ನು ಕ್ರಮಿಸಿದ ಈ ಸಾಧಕರು ನಿಜಕ್ಕೂ ಬಸವನಾಡಿನ ಎಲ್ಲ ಓಟಗಾರರಿಗೆ ಸ್ಪೂರ್ತಿಯಾಗಿದ್ದಾರೆ ಎಂದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa