ಸುತ್ತೂರು ಜಾತ್ರೆ ಒಗ್ಗಟ್ಟು, ಸಾಮರಸ್ಯದ ಪ್ರತೀಕ :ವಿಜಯೇಂದ್ರ
ಮೈಸೂರು, 18 ಜನವರಿ (ಹಿ.ಸ.) : ಆ್ಯಂಕರ್ : ಸಂಸ್ಕೃತಿ ಮತ್ತು ದಾಸೋಹದ ಪವಿತ್ರ ಸಂಗಮವಾಗಿರುವ ಸುತ್ತೂರು ಶ್ರೀಕ್ಷೇತ್ರದ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭಾಗವಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಲಕ್ಷ
Byv


ಮೈಸೂರು, 18 ಜನವರಿ (ಹಿ.ಸ.) :

ಆ್ಯಂಕರ್ : ಸಂಸ್ಕೃತಿ ಮತ್ತು ದಾಸೋಹದ ಪವಿತ್ರ ಸಂಗಮವಾಗಿರುವ ಸುತ್ತೂರು ಶ್ರೀಕ್ಷೇತ್ರದ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭಾಗವಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಲಕ್ಷಾಂತರ ಭಕ್ತರನ್ನು ಒಂದೆಡೆ ಸೇರಿಸುವ ಈ ಜಾತ್ರೆ ಅನ್ನದಾತನ ಶ್ರಮವನ್ನು ಗೌರವಿಸುವ ಸುಗ್ಗಿಯ ಹಬ್ಬವಾಗಿದ್ದು, ನಾಡಿನ ಒಗ್ಗಟ್ಟು ಹಾಗೂ ಸಾಮರಸ್ಯವನ್ನು ಜಗತ್ತಿಗೆ ಸಾರುವ ಮಹತ್ವದ ಪರಂಪರೆಯಾಗಿದೆ ಎಂದು ಹೇಳಿದರು.

ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಈ ಅಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಸೊಗಡಿನ ಉತ್ಸವದಲ್ಲಿ ಪಾಲ್ಗೊಂಡು ಅವರ ಆಶೀರ್ವಾದ ಪಡೆಯುವುದು ಮನಸ್ಸಿಗೆ ಶಾಂತಿ ಮತ್ತು ಚೈತನ್ಯ ನೀಡಿತು ಎಂದು ವಿಜಯೇಂದ್ರ ಅವರು ತಿಳಿಸಿದರು. ಸಮಾಜದ ಸಮಗ್ರ ಏಳಿಗೆಗಾಗಿ ಶಿಕ್ಷಣ, ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಕ್ಷೇತ್ರಗಳಲ್ಲಿ ಸುತ್ತೂರು ಮಠ ನೀಡುತ್ತಿರುವ ಕೊಡುಗೆ ಅಪಾರವಾಗಿದ್ದು, ಅದು ಎಲ್ಲರಿಗೂ ಮಾದರಿಯಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಬಸವಕುಮಾರ ಸ್ವಾಮೀಜಿಗಳು, ಅವಧೂತ ಅರ್ಜುನ್ ಗುರೂಜಿ, ಕೇರಳದ ಸ್ವಾಮಿ ಪ್ರಭಾಕರಾನಂದ ಸರಸ್ವತಿ ಮಹಾರಾಜ್, ಮೈಸೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಗೇಂದ್ರ, ಮೈಸೂರು ಗ್ರಾಮಾಂತರ ಅಧ್ಯಕ್ಷ ಕುಂಬರಳ್ಳಿ ಸುಬ್ಬಣ್ಣ ಸೇರಿದಂತೆ ಅನೇಕ ಗಣ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande