
ಮಂಡ್ಯ, 18 ಜನವರಿ (ಹಿ.ಸ.) :
ಆ್ಯಂಕರ್ : ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ ಅಡಿಯಲ್ಲಿ ದೊಡ್ಡ ರಾಜ್ಯಗಳ ವರ್ಗದಲ್ಲಿ 2024ರ ಮುಂಗಾರು ಹಾಗೂ 2024-25ನೇ ಸಾಲಿನ ರಬಿಯಲ್ಲಿ ಉತ್ತಮ ಪ್ರದರ್ಶನಕ್ಕಾಗಿ ಎರಡನೇ ಸ್ಥಾನ ಪಡೆದ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಪ್ರಶಸ್ತಿ ನೀಡಿ, ಗೌರವಿಸಿರುವುದು ನಾಡಿನ ಅನ್ನದಾತರ ಹಿತ ರಕ್ಷಣೆಗೆ ಸಂದ ಗೌರವ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ.
ಬರ, ಪ್ರವಾಹ, ಚಂಡಮಾರುತ, ಕೀಟಗಳು ಮತ್ತು ರೋಗಗಳಂತಹ ನೈಸರ್ಗಿಕ ವಿಕೋಪಗಳಿಂದ ನಮ್ಮ ರೈತರನ್ನು ರಕ್ಷಿಸಲು ಶ್ರಮಿಸುತ್ತಿರುವ ಕೃಷಿ ಇಲಾಖೆಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಹೃದಯಪೂರ್ವಕ ಅಭಿನಂದನೆಗಳು.
ನಾಡಿನ ರೈತ ಕುಟುಂಬದ ಸಬಲೀಕರಣ ನಮ್ಮ ಸರ್ಕಾರದ ಮೊದಲ ಆದ್ಯತೆ ಎಂದು ಸಚಿವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa