ಬಲೂಚ್ ಲಿಬರೇಶನ್ ಆರ್ಮಿ ಶಿಬಿರದ ಮೇಲೆ ಪಾಕ್ ಪಡೆಗಳ ದಾಳಿ
ಕ್ವೆಟ್ಟಾ, 18 ಜನವರಿ (ಹಿ.ಸ.) : ಆ್ಯಂಕರ್ : ಬಲೂಚಿಸ್ತಾನದ ಕಲಾತ್ ಜಿಲ್ಲೆಯಲ್ಲಿ ಬಲೂಚ್ ಲಿಬರೇಶನ್ ಆರ್ಮಿ ಶಿಬಿರದ ಮೇಲೆ ಪಾಕಿಸ್ತಾನಿ ಭದ್ರತಾ ಪಡೆಗಳು ನಡೆಸಿದ ದಾಳಿಯಲ್ಲಿ ಸಂಘಟನೆಯ ನಾಲ್ವರು ಬಂಡುಕೋರ ಕಮಾಂಡರ್‌ಗಳು ಸಾವನ್ನಪ್ಪಿದ್ದಾರೆ. ಈ ವಿಷಯವನ್ನು ಬಿಎಲ್‌ಎ ವಕ್ತಾರ ಜೈನೂದ್ ಬಲೂಚ್ ಅಧಿಕೃತವಾ
Bla


ಕ್ವೆಟ್ಟಾ, 18 ಜನವರಿ (ಹಿ.ಸ.) :

ಆ್ಯಂಕರ್ : ಬಲೂಚಿಸ್ತಾನದ ಕಲಾತ್ ಜಿಲ್ಲೆಯಲ್ಲಿ ಬಲೂಚ್ ಲಿಬರೇಶನ್ ಆರ್ಮಿ ಶಿಬಿರದ ಮೇಲೆ ಪಾಕಿಸ್ತಾನಿ ಭದ್ರತಾ ಪಡೆಗಳು ನಡೆಸಿದ ದಾಳಿಯಲ್ಲಿ ಸಂಘಟನೆಯ ನಾಲ್ವರು ಬಂಡುಕೋರ ಕಮಾಂಡರ್‌ಗಳು ಸಾವನ್ನಪ್ಪಿದ್ದಾರೆ. ಈ ವಿಷಯವನ್ನು ಬಿಎಲ್‌ಎ ವಕ್ತಾರ ಜೈನೂದ್ ಬಲೂಚ್ ಅಧಿಕೃತವಾಗಿ ದೃಢಪಡಿಸಿದ್ದಾರೆ.

ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ, ಜನವರಿ 12ರಂದು ಕಲಾತ್‌ನ ಶೋರ್ ಪರುದ್ ಪ್ರದೇಶದಲ್ಲಿ ತಾತ್ಕಾಲಿಕವಾಗಿ ಸ್ಥಾಪಿಸಲಾಗಿದ್ದ ಬಿಎಲ್‌ಎ ಶಿಬಿರದ ಮೇಲೆ ಪಾಕಿಸ್ತಾನಿ ಭದ್ರತಾ ಪಡೆಗಳು ದಾಳಿ ನಡೆಸಿವೆ ಎಂದು ಅವರು ತಿಳಿಸಿದ್ದಾರೆ.

ಬಲೂಚಿಸ್ತಾನ್ ಅನ್ನು “ಬಲವಂತವಾಗಿ ಆಕ್ರಮಿಸಿಕೊಳ್ಳುವ ಪ್ರಯತ್ನದ ಭಾಗವಾಗಿ” ಈ ದಾಳಿ ನಡೆದಿದೆ ಎಂದು ಆರೋಪಿಸಿದ ವಕ್ತಾರರು, ತಮ್ಮ ನಾಲ್ವರು ಕಮಾಂಡರ್‌ಗಳ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ದಾಳಿಯಲ್ಲಿ ಸಾವನ್ನಪ್ಪಿದ ಬಿಎಲ್‌ಎ ಕಮಾಂಡರ್‌ಗಳ ವಿವರಗಳು ಹೀಗಿವೆ: ಸಂಗತ್ ಜೋಹಿರ್ ಅಲಿಯಾಸ್ ಹಕ್ ನವಾಜ್, ಮಂಜೂರ್ ಕುರ್ದ್ ಅಲಿಯಾಸ್ ಬಕ್ತಿಯಾರ್ ಚೀತಾ, ಸಮಿವುಲ್ಲಾ ಅಲಿಯಾಸ್ ಜಾವೇದ್ ಫಹ್ಲಿಯಾ, ನಸೀರ್ ಅಹ್ಮದ್ ಅಲಿಯಾಸ್ ಮಿರಾಕ್.

ಹುತಾತ್ಮ ಕಮಾಂಡರ್‌ಗಳಿಗೆ ಗೌರವ ಸಲ್ಲಿಸಿರುವ ಬಿಎಲ್‌ಎ, “ಸ್ವಾತಂತ್ರ್ಯ ಹೋರಾಟಕ್ಕೆ ಬದ್ಧವಾಗಿ ಮುಂದುವರಿಯುತ್ತೇವೆ” ಎಂದು ಹೇಳಿಕೆ ನೀಡಿದೆ.

ಇದಾದ ಮಧ್ಯೆ, ಪಾಕಿಸ್ತಾನ ಸೇನೆಯ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ ಕರಾಚಿಯಿಂದ ಬಿಡುಗಡೆ ಮಾಡಿದ ಪ್ರತ್ಯೇಕ ಹೇಳಿಕೆಯಲ್ಲಿ, ಪ್ರಕ್ಷುಬ್ಧ ನೈಋತ್ಯ ಬಲೂಚಿಸ್ತಾನ್ ಪ್ರದೇಶದಲ್ಲಿ ನಡೆದ ಭದ್ರತಾ ಕಾರ್ಯಾಚರಣೆಗಳಲ್ಲಿ 12 ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.

ಐಎಸ್‌ಪಿಆರ್ ಮಾಹಿತಿ ಪ್ರಕಾರ, ಸುಮಾರು 15–20 ಉಗ್ರರು ಖರನ್ ಪಟ್ಟಣದ ಎರಡು ಬ್ಯಾಂಕುಗಳು ಹಾಗೂ ಒಂದು ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿ ಕೆಲವು ಸಿಬ್ಬಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ನಂತರ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲಾಗಿದೆ. ಜನವರಿ 15ರಂದು ಉಗ್ರರು ಬ್ಯಾಂಕುಗಳಿಂದ 3.4 ಮಿಲಿಯನ್ ಪಾಕಿಸ್ತಾನಿ ರೂಪಾಯಿ ಲೂಟಿ ಮಾಡಿ ಪರಾರಿಯಾಗಲು ಯತ್ನಿಸಿದ್ದರು. ಈ ಘಟನೆಯ ಬಳಿಕ ನಡೆದ ಮೂರು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ 12 ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದಾರೆ ಎಂದು ಸೇನೆ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

ಬಲೂಚಿಸ್ತಾನದಲ್ಲಿ ಭದ್ರತಾ ಪಡೆಗಳು ಮತ್ತು ಬಂಡುಕೋರ ಸಂಘಟನೆಗಳ ನಡುವಿನ ಸಂಘರ್ಷ ದಿನೇದಿನೇ ತೀವ್ರಗೊಳ್ಳುತ್ತಿದ್ದು, ಈ ಪ್ರದೇಶದಲ್ಲಿ ಅಸ್ಥಿರತೆ ಮುಂದುವರಿಯುತ್ತಿರುವುದು ಗಮನಾರ್ಹವಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande