ಬಾಂಗ್ಲಾ ಹಿಂದೂಗಳ ಪರ ಮೋದಿ ಸರ್ಕಾರ ಧ್ವನಿ ಎತ್ತಬೇಕು : ಶಂಕರಾಚಾರ್ಯ ಸ್ವಾಮಿ ನರೇಂದ್ರಾನಂದ ಸರಸ್ವತಿ
ಪ್ರಯಾಗ್‌ರಾಜ್, 18 ಜನವರಿ (ಹಿ.ಸ.) : ಆ್ಯಂಕರ್ : ಬಾಂಗ್ಲಾದೇಶದಲ್ಲಿ ಹಿಂದೂಗಳಷ್ಟೇ ಅಲ್ಲದೆ ಮುಸ್ಲಿಮೇತರ ಸಮುದಾಯಗಳ ಮೇಲೂ ವ್ಯವಸ್ಥಿತ ಕಿರುಕುಳ ನಡೆಯುತ್ತಿದೆ. ಇಂತಹ ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆಯ ನಡುವೆಯೂ ವಿಶ್ವ ಮಾನವ ಹಕ್ಕುಗಳ ಸಮುದಾಯ ಮೌನ ವಹಿಸಿರುವುದು ಅತ್ಯಂತ ಆತಂಕಕಾರಿ ಎಂದು ಕಾಶಿ ಸುಮ
Sarswati swamiji


ಪ್ರಯಾಗ್‌ರಾಜ್, 18 ಜನವರಿ (ಹಿ.ಸ.) :

ಆ್ಯಂಕರ್ : ಬಾಂಗ್ಲಾದೇಶದಲ್ಲಿ ಹಿಂದೂಗಳಷ್ಟೇ ಅಲ್ಲದೆ ಮುಸ್ಲಿಮೇತರ ಸಮುದಾಯಗಳ ಮೇಲೂ ವ್ಯವಸ್ಥಿತ ಕಿರುಕುಳ ನಡೆಯುತ್ತಿದೆ. ಇಂತಹ ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆಯ ನಡುವೆಯೂ ವಿಶ್ವ ಮಾನವ ಹಕ್ಕುಗಳ ಸಮುದಾಯ ಮೌನ ವಹಿಸಿರುವುದು ಅತ್ಯಂತ ಆತಂಕಕಾರಿ ಎಂದು ಕಾಶಿ ಸುಮೇರು ಪೀಠಾಧೀಶ್ವರ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನರೇಂದ್ರಾನಂದ ಸರಸ್ವತಿ ಆಕ್ರೋಶ ವ್ಯಕ್ತಪಡಿಸಿದರು.

ಮೌನಿ ಅಮವಾಸ್ಯೆಯ ಅಂಗವಾಗಿ ಮಾಘ ಮೇಳದ ಸಂದರ್ಭದಲ್ಲಿ ಶಂಕರಾಚಾರ್ಯ ಮಾರ್ಗದಲ್ಲಿರುವ ತಮ್ಮ ಶಿಬಿರದಲ್ಲಿ ಭಾನುವಾರ ಹಿಂದೂಸ್ತಾನ್ ಸಮಾಚಾರದೊಂದಿಗೆ ಮಾತನಾಡಿದ ಅವರು, ಈ ವಿಚಾರದಲ್ಲಿ ಕೇಂದ್ರದಲ್ಲಿರುವ ಮೋದಿ ಸರ್ಕಾರ ಸ್ಪಷ್ಟವಾಗಿ ಧ್ವನಿ ಎತ್ತಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಬಾಂಗ್ಲಾದೇಶದಲ್ಲಿ ಸುಮಾರು 1.1 ಕೋಟಿ (11 ಮಿಲಿಯನ್) ಸನಾತನ ಧರ್ಮೀಯರು ವಾಸಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ಅವರ ಅಸ್ತಿತ್ವ ಮತ್ತು ಭದ್ರತೆ ಕಾಪಾಡಲು ಬಲಿಷ್ಠ ರಕ್ಷಣಾತ್ಮಕ ವ್ಯವಸ್ಥೆ ಅಗತ್ಯವಿದ್ದು, ಅಗತ್ಯವಿದ್ದರೆ ಐದು ಮಿಲಿಯನ್ ಸಶಸ್ತ್ರ ಸಿಬ್ಬಂದಿಯನ್ನು ಸಿದ್ಧಪಡಿಸಬೇಕಾಗುತ್ತದೆ ಎಂದರು.

ಹಿಂದೂಗಳ ಜೊತೆಗೆ ಕ್ರಿಶ್ಚಿಯನ್ನರು, ಯಹೂದಿಗಳು, ಬೌದ್ಧರು ಸೇರಿದಂತೆ ಬಾಂಗ್ಲಾದೇಶದಲ್ಲಿನ ಎಲ್ಲಾ ಮುಸ್ಲಿಮೇತರ ಅಲ್ಪಸಂಖ್ಯಾತ ಸಮುದಾಯಗಳು ಬಹಿರಂಗ ಕಿರುಕುಳಕ್ಕೆ ಒಳಗಾಗುತ್ತಿವೆ. ಆದರೆ ಅಮೆರಿಕಾ, ರಷ್ಯಾ, ಚೀನಾ ಸೇರಿದಂತೆ ಪ್ರಮುಖ ರಾಷ್ಟ್ರಗಳು ಮತ್ತು ಜಾಗತಿಕ ಮಾನವ ಹಕ್ಕುಗಳ ಸಂಘಟನೆಗಳು ಈ ವಿಚಾರದಲ್ಲಿ ಮೌನ ವಹಿಸಿರುವುದು ದುರದೃಷ್ಟಕರ ಎಂದು ಶಂಕರಾಚಾರ್ಯ ಟೀಕಿಸಿದರು.

ಹಿಂದೂಗಳು ಮತ್ತು ಸನಾತನಿಗಳ ರಕ್ಷಣೆಗೆ ಕೇಂದ್ರ ಸರ್ಕಾರ ತಕ್ಷಣ ಸೈನ್ಯವನ್ನು ಕಳುಹಿಸಿ ಕ್ರಮ ಕೈಗೊಳ್ಳಬೇಕು. ಅದು ಸಾಧ್ಯವಾಗದಿದ್ದರೆ, ವಿಶ್ವದ ಸನಾತನ ಧರ್ಮದ ರಕ್ಷಕರು, ಸೈನಿಕರು, ನಾಗ ಸನ್ಯಾಸಿಗಳು, ಸಾಧುಗಳು ಹಾಗೂ ಸಂತರು ಬಾಂಗ್ಲಾದೇಶಕ್ಕೆ ದಂಡೆತ್ತಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಶಂಕರಾಚಾರ್ಯ ಸ್ವಾಮಿ ನರೇಂದ್ರಾನಂದ ಸರಸ್ವತಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande